'ಕೋಟಿಗೊಬ್ಬ-3' ಸಿನಿಮಾದಲ್ಲಿ ಶ್ರದ್ಧಾ ದಾಸ್ ಪಾತ್ರವೇನು.?

By Harshitha

Recommended Video

ಕೋಟಿಗೊಬ್ಬ 3 ಸಿನಿಮಾದಲ್ಲಿ ಇಬ್ಬರು ನಾಯಕಿಯರು ಯಾಕೆ..? | Filmibeat Kannada

'ಕೋಟಿಗೊಬ್ಬ' ಹಾಗೂ 'ಕೋಟಿಗೊಬ್ಬ-2' ಚಿತ್ರಗಳ ಯಶಸ್ಸಿನ ಸ್ಫೂರ್ತಿ ಪಡೆದು ನಿರ್ಮಾಪಕ ಸೂರಪ್ಪ ಬಾಬು 'ಕೋಟಿಗೊಬ್ಬ-3' ಚಿತ್ರಕ್ಕೆ ಚಾಲನೆ ನೀಡಿದ್ದಾರೆ. 'ಕೋಟಿಗೊಬ್ಬ-3' ಚಿತ್ರದ ಚಿತ್ರೀಕರಣಕ್ಕಾಗಿ ಚಿತ್ರತಂಡ ಈಗಾಗಲೇ ಬೆಲ್ ಗ್ರೇಡ್ ತಲುಪಿದೆ.

'ಕೋಟಿಗೊಬ್ಬ-3' ಚಿತ್ರದ ಬಹುಪಾಲು ಸನ್ನಿವೇಶಗಳು ವಿದೇಶಗಳಲ್ಲಿಯೇ ನಡೆಯಲಿವೆ. ಹೀಗಾಗಿ, ಒಂದು ತಿಂಗಳಿಗೂ ಅಧಿಕ ಕಾಲ ಕಿಚ್ಚ ಸುದೀಪ್ ಫಾರಿನ್ ನಲ್ಲೇ ಇರಬೇಕು.

ಬರೀ ಸುದೀಪ್ ಮಾತ್ರ ಅಲ್ಲ, ಅಫ್ತಾಬ್ ಶಿವದಾಸನಿ, ಮಡೋನ ಸೆಬಾಸ್ಟಿಯನ್ ಹಾಗೂ ಶ್ರದ್ಧಾ ದಾಸ್ ಕೂಡ ಬೆಲ್ ಗ್ರೇಡ್ ಗಾಗಿ ಫ್ಲೈಟ್ ಹತ್ತಿದ್ದಾರೆ. ಅಂದ್ಹಾಗೆ, 'ಕೋಟಿಗೊಬ್ಬ-3' ಚಿತ್ರದಲ್ಲಿ ಪರಭಾಷಾ ಚೆಲುವೆ ಶ್ರದ್ಧಾ ದಾಸ್ ಪಾತ್ರವೇನು ಎಂದು ಯೋಚನೆ ಮಾಡ್ತಿದ್ರಾ.?

Actress Shraddha Das to play Interpol officer in Kiccha Sudeep starrer Kotigobba 3

'ಕೋಟಿಗೊಬ್ಬ-3' ಸಿನಿಮಾದಲ್ಲಿ ಶ್ರದ್ಧಾ ದಾಸ್ ಇಂಟರ್ ಪೋಲ್ ಅಧಿಕಾರಿ ಪಾತ್ರ ನಿರ್ವಹಿಸುತ್ತಿದ್ದಾರೆ. ಹಾಗ್ನೋಡಿದ್ರೆ, ಪೊಲೀಸ್ ಪಾತ್ರ ಮಾಡಬೇಕೆಂಬ ಕನಸು ಶ್ರದ್ಧಾ ದಾಸ್ ಅವರಿಗಿತ್ತು. ಅದು, 'ಕೋಟಿಗೊಬ್ಬ-3' ಮೂಲಕ ಈಡೇರುತ್ತಿರುವುದಕ್ಕೆ ಶ್ರದ್ಧಾ ದಾಸ್ ಖುಷಿಯಾಗಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದ ಕ್ರೈಂ ಕಥೆ ಕುರಿತಾದ ಚಿತ್ರ 'ಕೋಟಿಗೊಬ್ಬ-3'. ಸಿನಿಮಾದ ಕಥೆಯ ಎಳೆಯನ್ನ ಸುದೀಪ್ ರವರೇ ಹೇಳಿದ್ಮೇಲೆ, ಚಿತ್ರಕ್ಕೆ ಬಂಡವಾಳ ಹೂಡಲು ಸೂರಪ್ಪ ಬಾಬು ಸೈ ಎಂದರು. ಶಿವ ಕಾರ್ತಿಕ್ ಎಂಬುವರು 'ಕೋಟಿಗೊಬ್ಬ-3' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

More from Filmibeat

English summary
Actress Shraddha Das to play Interpol officer in Kiccha Sudeep starrer Kotigobba 3.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X