»   » 'ಯು-ಟರ್ನ್' ಶ್ರದ್ಧಾ ಶ್ರೀನಾಥ್ ಅವರದು ಎಂತಹ ಅದೃಷ್ಟ ಕಣ್ರೀ.!

'ಯು-ಟರ್ನ್' ಶ್ರದ್ಧಾ ಶ್ರೀನಾಥ್ ಅವರದು ಎಂತಹ ಅದೃಷ್ಟ ಕಣ್ರೀ.!

Posted By:
Subscribe to Filmibeat Kannada

ಕನ್ನಡ ನಿರ್ದೇಶಕ ಪವನ್ ಕುಮಾರ್ ಅವರ 'ಯು-ಟರ್ನ್' ಎಂಬ ಚಿತ್ರದಲ್ಲಿ ಮಿಂಚಿ ಹಿಟ್ ಆಗಿದ್ದೇ ತಡ, ನಟಿ ಶ್ರದ್ಧಾ ಶ್ರೀನಾಥ್ ಅವರಿಗೆ ಅವಕಾಶಗಳು ಮೇಲಿಂದ ಮೇಲೆ ಬರುತ್ತಿವೆ. ಈಗಾಗಲೇ 'ಉರ್ವಿ', 'ಅಪರೇಷನ್ ಆಲಮೇಲಮ್ಮ', ಮತ್ತು 'ಉಳಿದವರು ಕಂಡಂತೆ' ತಮಿಳು ರೀಮೇಕ್ ಚಿತ್ರದ ಶೂಟಿಂಗ್ ನಲ್ಲಿ ಶ್ರದ್ಧಾ ಬ್ಯುಸಿಯಾಗಿದ್ದಾರೆ.

ಈ ನಡುವೆ 'ಹೆಲ್ಮೆಟ್ ಹುಡುಗಿ' ಶ್ರದ್ಧಾ ಶ್ರೀನಾಥ್ ಅವರ ಅದೃಷ್ಟ ನೆಟ್ಟಗಿರೋ ಪರಿಣಾಮ ಮತ್ತೊಂದು ಅಪೂರ್ವ ಅವಕಾಶ ಒದಗಿ ಬಂದಿದೆ. ಖ್ಯಾತ ನಿರ್ದೇಶಕ ಮಣಿರತ್ನಂ ಅವರ ತಮಿಳು ಚಿತ್ರವೊಂದರಲ್ಲಿ ನಟಿ ಶ್ರದ್ಧಾ ಅವರಿಗೆ ಅತಿಥಿ ಪಾತ್ರದಲ್ಲಿ ನಟಿಸಲು ಬುಲಾವ್ ಬಂದಿದೆ.['ಮುಂಗಾರು ಮಳೆ 2' ನಲ್ಲಿ ಗಣಿಗೆ ಎಷ್ಟು ಜನ ನಾಯಕಿಯರು.?]

'U-Turn' Actress Shraddha Srinath bags a cameo role in Tamil 'Kaatru Veliyidai'

ತಮಿಳು ನಟ ಕಾರ್ತಿ ಮತ್ತು ನಟಿ ಅದಿತಿ ರಾವ್ ಹೈದರಿ ನಟನೆಯ 'ಕಾಟ್ರು ವೆಲೈಯಿದೈ' ಎಂಬ ತಮಿಳು ಚಿತ್ರದಲ್ಲಿ ನಟಿ ಶ್ರದ್ಧಾ ಅವರು ಅತಿಥಿ ಪಾತ್ರದಲ್ಲಿ ಮಿಂಚಲಿದ್ದಾರೆ. ಈಗಾಗಲೇ ಊಟಿಯಲ್ಲಿ ನಿರ್ದೇಶಕ ಮಣಿರತ್ನಂ ಅವರ ಸೆಟ್ ನಲ್ಲಿ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದು, ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಫೇಸ್ ಬುಕ್ಕಿನಲ್ಲಿ ಪೋಸ್ಟ್ ಮಾಡಿದ್ದಾರೆ.[ಭಯಂಕರ ಬ್ಯುಸಿಯಾದ ಹೆಲ್ಮೆಟ್ ಹುಡುಗಿ ಶ್ರದ್ಧಾ ಶ್ರೀನಾಥ್]

ಸದಾ ಹೊಸ ಪ್ರತಿಭೆಗಳನ್ನು ಗುರುತಿಸುವ ನಿರ್ದೇಶಕ ಮಣಿರತ್ನಂ ಅವರು ನೆಟ್ ನಲ್ಲಿ ಶ್ರದ್ಧಾ ಶ್ರೀನಾಥ್ ಅವರ ಪ್ರೊಫೈಲ್ ಕಂಡಿದ್ದರು. ಜೊತೆಗೆ ಶ್ರದ್ಧಾ ಅವರು 'ಯು-ಟರ್ನ್' ಚಿತ್ರದಲ್ಲಿ ನೀಡಿದ ಅದ್ಭುತ ನಟನೆ ಕಂಡು ತಮ್ಮ ಕಾಲಿವುಡ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲು ಅವಕಾಶ ನೀಡಿದ್ದಾರೆ.[ಸುನಿಯ 'ಆಪರೇಷನ್ ಅಲಮೇಲಮ್ಮ' ಪೋಸ್ಟರ್ ಹೇಗಿದೆ ಅಂದ್ರೆ.!]

'U-Turn' Actress Shraddha Srinath bags a cameo role in Tamil 'Kaatru Veliyidai'

ಮಣಿರತ್ನಂ ಅವರ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದಕ್ಕೆ ನಟಿ ಶ್ರದ್ಧಾ ಅವರು ಫುಲ್ ಖುಷ್ ಆಗಿದ್ದು, ಅವರ ಸರಳತೆಯ ಬಗ್ಗೆ ಫೇಸ್ ಬುಕ್ಕಿನಲ್ಲಿ ಬರೆದುಕೊಂಡಿದ್ದಾರೆ. ಚಿತ್ರದಲ್ಲಿ ಶ್ರದ್ಧಾ ಅವರು ಸೇನಾ ಹಿನ್ನಲೆಯಿರುವ ಯುವತಿಯಾಗಿ, ನಟ ಕಾರ್ತಿ ಜೊತೆ ಪರಿಚಯದ ದೃಶ್ಯದಲ್ಲಿ ಮಿಂಚಲಿದ್ದಾರೆ.

English summary
Kannada Movie 'U-Turn' fame Kannada Actress Shraddha Srinath has bagged a cameo role in Director Mani Ratnam's next Tamil 'Kaatru Veliyidai'. Tamil Actor Karthi and Actress Aditi Rao Hydari in the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada