For Quick Alerts
  ALLOW NOTIFICATIONS  
  For Daily Alerts

  ಸಂಕಷ್ಟದಲ್ಲಿರುವ ಕನ್ನಡ ಸಹಾಯಕ ನಿರ್ದೇಶಕರ ನೆರವಿಗೆ ನಿಂತ ನಟಿ ಶ್ರದ್ಧಾ ಶ್ರೀನಾಥ್

  |

  ಸ್ಯಾಂಡಲ್ ವುಡ್ ನಟಿ ಶ್ರದ್ಧಾ ಶ್ರೀನಾಥ್ ಕನ್ನಡದ ಜೊತೆಗೆ ಪರಭಾಷೆಯ ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಮಿಚುತ್ತಿರುವ ಶ್ರದ್ಧಾ ಕನ್ನಡದ ಸಹಾಯಕ ನಿರ್ದೇಶಕರ ನೆರವಿಗೆ ನಿಂತಿದ್ದಾರೆ.

  ಕೊರೊನಾ ಲಾಕ್ ಡೌನ್ ನಿಂದ ಕನ್ನಡ ಸಿನಿಮಾರಂಗ ತತ್ತರಿಸಿಹೋಗಿದೆ. ಸಿನಿಮಾರಂಗದಲ್ಲಿ ಕೆಲಸ ಮಾಡುತ್ತಿರುವ ತಂತ್ರಜ್ಞರು, ಕಾರ್ಮಿಕರು ಮತ್ತು ಕಲಾವಿದರು ಕಷ್ಟದಲ್ಲಿದ್ದಾರೆ. ಈಗಾಗಲೆ ಅನೇಕರು ಕಷ್ಟದಲ್ಲಿರೋರಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ. ಇದೀಗ ನಟಿ ಶ್ರದ್ಧಾ ಶ್ರೀನಾಥ್ ಕಷ್ಟದಲ್ಲಿರುವ ಸಹಾಯಕ ನಿರ್ದೇಶಕರ ಬೆನ್ನಿಗೆ ನಿಂತಿದ್ದಾರೆ.

  ಬುಲೆಟ್ ಓಡಿಸಲು ಹೋಗಿ ಬಿದ್ದ ನಟಿ ಶ್ರದ್ಧಾ ಶ್ರೀನಾಥ್ಬುಲೆಟ್ ಓಡಿಸಲು ಹೋಗಿ ಬಿದ್ದ ನಟಿ ಶ್ರದ್ಧಾ ಶ್ರೀನಾಥ್

  ಸಂಕಷ್ಟದಲ್ಲಿರುವವರಿಗೆ ನಿರ್ದೇಶಕ ಮಯೂರ ರಾಘವೇಂದ್ರ ತಂಡ ಪ್ರಾರಂಭದಿನಂದಲೂ ಸಹಾಯ ಮಾಡುತ್ತ ಬಂದಿದ್ದಾರೆ. ಅವರ ಜೊತೆ ನಟಿ ಶ್ರದ್ಧಾ ಶ್ರೀನಾಥ್ ಸಹ ಕೈ ಜೋಡಿಸಿದ್ದಾರೆ. ಕಷ್ಟದಲ್ಲಿರುವ ಸಹಾಯಕ ನಿರ್ದೇಶಕರ ಕುಟುಂಬಕ್ಕೆ ಶ್ರದ್ಧಾ ಒಂದು ತಿಂಗಳಿಗೆ ಆಗುವಷ್ಟು ದಿನಸಿ ಸಾಮಗ್ರಿಗಳನ್ನು ವಿತರಿಸಿದ್ದಾರೆ. ಸುಮಾರು 100ಕ್ಕು ಹೆಚ್ಚು ಕುಟುಂಬಗಳಿಗೆ ಶ್ರದ್ಧಾ ನೆರವಾಗಿದ್ದಾರೆ.

  ಈ ಬಗ್ಗೆ ನಿರ್ದೇಶಕ ಮಯೂರ ರಾಘವೇಂದ್ರ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. FEEDTHENEEDY ಮೂಲಕ ಕಷ್ಟದಲ್ಲಿರೊರಿಗೆ ನೆರವಾಗುತ್ತಿರುವ ಈ ತಂಡ "ನಾವು ಮತ್ತೆ ಸಹಾಯಕ್ಕೆ ಮರಳಿದ್ದೇವೆ. ತುಂಬಾ ಸಂತೋಷವಾಗುತ್ತಿದೆ. ಸುಮಾರು 100ಕ್ಕೂ ಹೆಚ್ಚು ಕನ್ನಡ ಸಿನಿಮಾರಂಗದ ಸಹಾಯಕ ನಿರ್ದೇಶಕರಿಗೆ ರೇಷನ್ ಕಿಟ್ ಗಳನ್ನು ನೀಡಿದ್ದೇವೆ. ಶ್ರದ್ಧಾ ಶ್ರೀನಾಥ್ ಅವರಿಗೆ ಧನ್ಯವಾದಗಳು" ಎಂದು ಹೇಳಿದ್ದಾರೆ

  ಪರಭಾಷೆಯ ಸಿನಿಮಾಗಳಲ್ಲಿ ಬ್ಯುಸಿ ಇದ್ದರೂ, ಕನ್ನಡದ ಸಹಾಯಕ ನಿರ್ದೇಶಕರ ಕಷ್ಟಕ್ಕೆ ನೆರವಾಗಿರುವ ಶ್ರದ್ಧಾಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪ್ರಸ್ತುತ ಶ್ರದ್ಧಾ ಶ್ರೀನಾಥ್ ಕನ್ನಡ ಫ್ಯಾಂಟಮ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಗೋದ್ರಾ ರಿಲೀಸ್ ಗೆ ರೆಡಿಯಾಗಿದೆ. ಇನ್ನೂ ರುದ್ರಪ್ರಯಾಗ ಸಿನಿಮಾ ಸಹ ಶ್ರದ್ಧಾ ಕೈಯಲ್ಲಿದೆ. ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲಿಯೂ ಶ್ರದ್ಧಾ ಇದ್ದಾರೆ.

  English summary
  Kannada Actress Shraddha srinath helps Assistant Director. she distributes ration kit for Assistant Director of kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X