For Quick Alerts
  ALLOW NOTIFICATIONS  
  For Daily Alerts

  ಬೆಳ್ಳಿಪರದೆಗೆ ಓಂ ಪ್ರಕಾಶ್ ರಾವ್, ರೇಖಾದಾಸ್ ಕುಡಿ

  |

  ನಿರ್ದೇಶಕ ಓಂ ಪ್ರಕಾಶ್ ರಾವ್ ಹಾಗೂ ರೇಖಾದಾಸ್ ದಂಪತಿಗಳ ಮಗಳು 'ಶ್ರಾವ್ಯಾ' ಫೀಲ್ಡಿಗೆ ಇಳಿದಿದ್ದಾರೆ. ಹೀಗೆ ಹೇಳುವುದಕ್ಕಿಂತ ರೇಖಾದಾಸ್ ಮಗಳು ಅನ್ನುವುದೇ ಹೆಚ್ಚು ಸೂಕ್ತ. ಏಕೆಂದರೆ, ರೇಖಾದಾಸ್ ಹಾಗೂ ಓಂ ಪ್ರಕಾಶ್ ರಾವ್ ಸಂಬಂಧ ಹಳಸಿ ಬೇರ್ಪಟ್ಟು ಈಗ ಅದೆಷ್ಟೋ ಕಾಲವಾಯ್ತು. ಈಗ ಶ್ರಾವ್ಯಾ ಇರುವುದು ರೇಖಾದಾಸ್ ಜೊತೆಯಲ್ಲಿ. ಅಷ್ಟೇ ಅಲ್ಲ, ಅಮ್ಮ ರೇಖಾದಾಸ್ ತಮ್ಮಂತೆ ಮಗಳನ್ನು ನಟನೆಗೆ ಕರೆತಂದಿದ್ದಾರೆ.

  ಈ ಶ್ರಾವ್ಯಾ ನಟಿಸುತ್ತಿರುವ ಚಿತ್ರದ ಹೆಸರು ಲೂಸುಗಳು. ಇತ್ತೀಚಿಗಷ್ಟೇ ಸುದ್ದಿಯಾಗಿದ್ದ ಈ ಹೆಸರಿನ ಚಿತ್ರದಲ್ಲಿ ನಾಯಕರಾಗಿ ಶ್ರೀಮುರಳಿ, ಶ್ರೀಕಾಂತ್ (ಶ್ರೀಕಿ) ಹಾಗೂ ಅಕುಲ್ ಬಾಲಾಜಿ ಇದ್ದಾರೆ. ಮೂವರು ನಾಯಕಿಯರಲ್ಲಿ ಶ್ರಾವ್ಯಾ ಕೂಡ ಒಬ್ಬರು. ಅರುಣ್ ಎಂಬ ಹೊಸಬರು ಈ ಚಿತ್ರಕ್ಕೆ ನಿರ್ದೇಶಕರು. ಅಪ್ಪ ಓಂ ಪ್ರಕಾಶ್ ರಾವ್ ನಿರ್ದೇಶಕರಾದರೂ, ಮಗಳು ಶ್ರಾವ್ಯಾ ಬೇರೊಬ್ಬ ನಿರ್ದೇಶಕ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.

  ತಾಯಿ ರೇಖಾದಾಸ್ ಖ್ಯಾತ ನಟಿ, ತಂದೆ ಓಂ ಪ್ರಕಾಶ್ ರಾವ್ ಪ್ರಖ್ಯಾತ ನಿರ್ದೇಶಕ. ಹೀಗಾಗಿ ಶ್ರಾವ್ಯಾ ಚಿತ್ರರಂಗಕ್ಕೆ ಕಾಲಿಟ್ಟಿದ್ದರಲ್ಲಿ ಅಚ್ಚರಿಯೇನಿಲ್ಲ. ಆದರೆ ತಮ್ಮ ತಂದೆಯ ನಿರ್ದೇಶನದ ಎಲ್ಲಾ ಚಿತ್ರಗಳನ್ನು ತಾವು ಬಹಳಷ್ಟು ಮೆಚ್ಚುವುದಾಗಿ ಹೇಳಿಕೊಳ್ಳುವ ಶ್ರಾವ್ಯಾಗೆ, ಅಪ್ಪನ ಚಿತ್ರದ ಮೂಲಕವೇ ಬರಲು ಸಾಧ್ಯವಾಗಿಲ್ಲ ಎಂಬುದಷ್ಟೇ ಗಮನಿಸಬೇಕಾದ ಅಂಶ.

  ಆದರೆ, ಶ್ರಾವ್ಯಾ ತಮ್ಮ ತಂದೆಯ ಚಿತ್ರದಲ್ಲಿ ನಟಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. "ನನಗೆ ನನ್ನ ತಂದೆಯ ನಿರ್ದೇಶನದ ಚಿತ್ರದಲ್ಲಿ ನಟಿಸಲು ಆಸೆ" ಎಂದಿರುವ ಶ್ರಾವ್ಯಾಗೆ ಆ ಕಾಲ ಯಾವಾಗ ಕೂಡಿಬರಲಿದೆ ಎಂಬುದು ಸ್ವತಃ ಅವರಿಗೂ ಗೊತ್ತಿಲ್ಲ. ಅದು ಅಮ್ಮ ರೇಖಾದಾಸ್ ಅವರೂ ಅರಿಯಲಾಗದ ವಿಷಯ. ಒಟ್ಟಿನಲ್ಲಿ ಕಲಾವಿದರ ಕುಡಿಯೊಂದು ಚಿತ್ರರಂಗ ಪ್ರವೇಶಿಸಿದೆ, ಮುಂದಿನದೆಲ್ಲಾ ಭವಿಷ್ಯಕ್ಕೆ ಬಿಟ್ಟ ವಿಷಯ. (ಒನ್ ಇಂಡಿಯಾ ಕನ್ನಡ)

  English summary
  Actress Rekha Das and Om Prakash Rao Daughter Shravya debuts in a Kannada movie 'Loosugalu'. This movie to direct by new comer Arun and Shrimurali, Akul Balaji and Shreekanth (Shreeki) are in Lead Role. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X