ನಟಿ ಸುಧಾರಾಣಿ ಮನೆಯಲ್ಲಿ ಶ್ರುತಿ, ಮಾಳವಿಕಾ ರಾಗಿ ಮುದ್ದೆ ಪಾರ್ಟಿ

By ಫಿಲ್ಮಿಬೀಟ್ ಡೆಸ್ಕ್

ಸ್ಯಾಂಡಲ್‌ವುಡ್‌ನ ಹಿರಿಯ ನಟಿಯರಾದ ಸುಧಾರಣಿ, ಶ್ರುತಿ ಮತ್ತು ಮಾಳವಿಕಾ ಅವಿನಾಶ್ ಸಿಕ್ಕಾಪಟ್ಟೆ ಸ್ನೇಹಿತರು. ಈ ಮೂವರು ಸ್ನೇಹಿತೆಯರು ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಮಸ್ತಿ ಮಾಡುತ್ತಿರುತ್ತಾರೆ. ಆಗಾಗ ಒಬ್ಬೊಬ್ಬರ ಮನೆಯಲ್ಲಿ ಸೇರಿಕೊಂಡು ಮಸ್ತು ಮಜಾ ಮಾಡುತ್ತಿರುತ್ತಾರೆ. ಇತ್ತೀಚಿಗಷ್ಟೆ ನಟಿ ಸುಧಾರಾಣಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದ ಶ್ರುತಿ ಮತ್ತು ಮಾಳವಿಕಾ ಅವರು ಬಳಿಕ ಹಿರಿಯ ನಟಿ ಲೀಲಾವತಿ ಅವರ ಮನೆಯಲ್ಲಿ ಕಾಣಿಸಿಕೊಂಡಿದ್ದರು. ಹಿರಿಯ ನಟಿ ಲೀಲಾವತಿ ಜೊತೆ ಭೋಜನ ಸವಿಯುತ್ತಿರುವ ಫೋಟೋವನ್ನು ಸುಧಾರಾಣಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದರು.

ಇದೀಗ ಸುಧಾರಾಣಿ ಮತ್ತೊಂದು ವಿಡಿಯೋ ಶೇರ್ ಮಾಡಿದ್ದಾರೆ. ನಟಿ ಸುಧಾರಾಣಿ ಮನೆ ಸೇರಿರುವ ಸ್ನೇಹಿತರ ಗ್ಯಾಂಗ್ ರಾಗಿ ಮುದ್ದೆ ಪಾರ್ಟಿ ಮಾಡಿ ಎಂಜಾಯ್ ಮಾಡಿದ್ದಾರೆ. ಈ ವಿಡಿಯೋವನ್ನು ನಟಿ ಸುಧಾರಾಣಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಹಿರಿಯ ನಟಿ ಶ್ರುತಿ, ಸುಧಾರಾಣಿ ಅವರ ಅಡುಗೆ ಮನೆಯಲ್ಲಿ ರಾಗಿ ಮುದ್ದೆ ಮಾಡಿದ್ದಾರೆ. ಶ್ರುತಿ ರಾಗಿ ಮುದ್ದೆ ಬೇಯಿಸುತ್ತಿರುವ ವಿಡಿಯೋ, ಮುದ್ದೆ ಮಾಡುತ್ತಿರುವ ಫೋಟೋ, ಮಾಳವಿಕಾ ಜೊತೆ ಹರಟೆಯಲ್ಲಿ ತೊಡಗಿಕೊಂಡ ಫೋಟೋ ಸೇರಿದಂತೆ ಒಂದಿಷ್ಟು ಸುಂದರ ಕ್ಷಣಗಳ ಫೋಟೋವನ್ನು ಸುಧಾರಾಣಿ ಶೇರ್ ಮಾಡಿದ್ದಾರೆ. ಬಳಿಕ ಮೂವರು ಸೆಲ್ಫಿಗೆ ಪೋಸ್ ನೀಡಿರುವ ಫೋಟೋ ಕೂಡ ಇದೆ.

 Actress Shruthi and Malavika Avinash enjoyed Ragi mudde at Sudharani house

ಸುಧಾರಾಣಿ ಶೇರ್ ಮಾಡಿರುವ ವಿಡಿಯೋಗೆ ಅಭಿಮಾನಿಗಳಿಂದ ಮತ್ತು ಚಿತ್ರರಂಗದ ಗಣ್ಯರಿಂದ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರರಂಗದ ಮೂವರು ಸ್ನೇಹಿತೆಯರ ರಾಗಿಮುದ್ದೆ ಪಾರ್ಟಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ವಿಡಿಯೋಗೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಡಿರುವ ಸುಂದರ ಹಾಡಾದ ರಾಗಿಯಾ ಮುದ್ದೆ...ಹಾಡನ್ನು ಹಾಕಿದ್ದಾರೆ.

ಮೂವರು ನಟಿಮಣಿಯ ಪಾರ್ಟಿ ಮತ್ತು ಸ್ನೇಹಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಂದಹಾಗೆ ಈ ಮೂವರು ಇತ್ತೀಚಿಗಷ್ಟೆ ಸುಧಾರಾಣಿ ಅವರ ಹುಟ್ಟುಹಬ್ಬದ ಪಾರ್ಟಿ ಮಾಡಿದ್ದರು. ಸುಧಾರಾಣಿ ಮನೆಗೆ ಸರ್ಪ್ರೈಸ್ ಭೇಟಿ ಕೊಟ್ಟಿದ್ದ ಶ್ರುತಿ ಮತ್ತು ಮಾಳವಿಕಾ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದರು. ಆ ವಿಡಿಯೋವನ್ನು ಸಹ ಶೇರ್ ಮಾಡಿದ್ದರು.

ಹೀಗೆ ಮೂವರು ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುವ ಜೊತೆಗೆ ಸಖತ್ ಎಂಜಾಯ್ ಮಾಡುತ್ತಿರುತ್ತಾರೆ. ಇವರ ಜೊತೆಗೆ ನಟಿ ಶ್ರುತಿ ಮಗಳು ಗೌರಿ ಮತ್ತು ಸುಧಾರಾಣಿ ಅವರ ಮಗಳು ನಿಧಿ ಕೂಡ ಸೇರಿಕೊಳ್ಳುತ್ತಾರೆ. ರಾಗಿ ಮುದ್ದೆ ಪಾರ್ಟಿಯಲ್ಲಿ ಇಬ್ಬರು ಮಿಸ್ ಆಗಿದ್ದಾರೆ.

More from Filmibeat

English summary
Actress Shruthi and Malavika Avinash enjoyed ragi mudde at Sudharani house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X