For Quick Alerts
  ALLOW NOTIFICATIONS  
  For Daily Alerts

  ಲೀಲಾವತಿ ಯೋಗಕ್ಷೇಮ ವಿಚಾರಿಸಿ, ಸಹ ಭೋಜನ ಮಾಡಿದ ಶ್ರುತಿ, ಭಾರತಿ

  |

  ಹಿರಿಯ ನಟಿ ಲೀಲಾವತಿ ಮನೆಗೆ ನಿನ್ನೆಯಷ್ಟೆ ನಟಿ ಶ್ರುತಿ, ಭಾರತಿ ವಿಷ್ಣುವರ್ಧನ್ ಹಾಗೂ ಹೇಮ ಚೌಧರಿ ಅವರುಗಳು ಭೇಟಿ ನೀಡಿದ್ದಾರೆ.

  ಹಿರಿಯ ನಟಿ ಲೀಲಾವತಿ ಅವರ ಆರೋಗ್ಯ ವಿಚಾರಿಸಿಕೊಂಡಿರುವ ಈ ನಟಿಯರು, ಅವರೊಟ್ಟಿಗೆ ಸಹ ಭೋಜನ ಮಾಡಿ ಅವರಿಗೆ ಧೈರ್ಯದ ಮಾತುಗಳನ್ನಾಡಿದ್ದಾರೆ, ತಾನು ಒಂಟಿಯಲ್ಲ ಎಂಬ ಭಾವವನ್ನು ಹುಟ್ಟುಹಾಕಿದ್ದಾರೆ ಈ ನಟಿಯರು.

  ಲೀಲಾವತಿ ಮನೆಗೆ ಭೇಟಿ ನೀಡಿ ಮೊದಲಿಗೆ ಹೇಮಾ ಚೌಧರಿ ಅವರು ಲೀಲಾವತಿ ಅವರಿಗೆ ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ. ನಂತರ ಶ್ರುತಿ ಅವರು ಬಿರಿಯಾನಿ ಮಾಡಿ ಎಲ್ಲರಿಗೂ ಉಣಬಡಿಸಿದ್ದಾರೆ. ನಂತರ ಲೀಲಾವತಿ ಅವರು ಹಾಡು ಹಾಡಿದ್ದಾರೆ.

  ಹಿರಿಯ ನಟಿಯೊಟ್ಟಿಗೆ ವಾಕಿಂಗ್ ಮಾಡಿ ಮಾತುಕತೆಗಳನ್ನಾಡಿ, ನಗಿಸಿ, ನೆಮ್ಮದಿ ಮೂಡಿಸಿದ್ದಾರೆ. ಎಲ್ಲರೂ ಒಟ್ಟಿಗೆ ಚಿತ್ರಗಳನ್ನು ಸಹ ತೆಗೆಸಿಕೊಂಡಿದ್ದಾರೆ.

  ಕೆಲವು ದಿನಗಳ ಹಿಂದಷ್ಟೆ ನಟಿ ಶ್ರುತಿ, ಸುಧಾರಾಣಿ, ಮಾಳವಿಕಾ ಅವರುಗಳು ಲೀಲಾವತಿ ಮನೆಗೆ ತೆರಳಿದ್ದರು. ಲೀಲಾವತಿ ಅವರು ಬಾತ್‌ರೂಮ್‌ನಲ್ಲಿ ಬಿದ್ದು ಏಟು ಮಾಡಿಕೊಂಡಿದ್ದರು. ಹಾಗಾಗಿ ನಟಿಯರು ತೆರಳಿ ಅವರ ಆರೋಗ್ಯ ವಿಚಾರಿಸಿದ್ದರು. ಇದೀಗ ಭಾರತಿ, ಶ್ರುತಿ, ಹೇಮಾ ಚೌಧರಿ ತೆರಳಿ ಆರೋಗ್ಯ ವಿಚಾರಿಸಿದ್ದಾರೆ.

  ಸುಧಾರಾಣಿ, ಮಾಳವಿಕಾ, ಶ್ರುತಿ ಲೀಲಾವತಿ ಮನೆಗೆ ಭೇಟಿ ನೀಡಿದ್ದಾಗ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಸುಧಾರಾಣಿ, ''ಲೀಲಾವತಿ ಅಮ್ಮ, ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ಕಲಾವಿದೆ ಇವರು. ನೂರಾರು ಸಿನಿಮಾಗಳಲ್ಲಿ ಬೇರೆ ಬೇರೆ ರೀತಿಯ ಪಾತ್ರಗಳ ಮೂಲಕ ನಮ್ಮೆಲ್ಲರನ್ನು ರಂಜಿಸಿದ್ದಾರೆ. ಲೀಲಾವತಿ ಎನ್ನುವುದು ದುರ್ಗಾದೇವಿಯ ಮತ್ತೊಂದು ಹೆಸರು, ಕನ್ನಡದಲ್ಲಿ ಲೀಲಾ ಎನ್ನುವ ಪದಕ್ಕೆ ಮತ್ತೊಂದು ಅರ್ಥ ವಿನೋದ. ಲೀಲಾವತಿ ಅಮ್ಮ ದುರ್ಗೆಯ ಅವತಾರವಾದರು, ಜೀವನದ ಎಲ್ಲಾ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಇಂದು ಎಲ್ಲಾ ಹೆಣ್ಣುಮಕ್ಕಳಿಗೆ ಮಾದರಿಯಾಗಿ ನಿಂತಿದ್ದಾರೆ" ಎಂದಿದ್ದರು.

  Actress Shruthi, Bharthi Vishnuvardhan And Hema Chaudhary Visited Leelavathis House

  ''ಲೀಲಾವತಿ ಅವರು ವಾಸವಿರುವ ಊರಿನಲ್ಲಿ ಬಡಜನರಿಗಾಗಿ ಆಸ್ಪತ್ರೆ ಕಟ್ಟಿಸಿದ್ದಾರೆ, ಹಸು ಕರುಗಳಿಗೆ ನೀರಿನ ಟ್ಯಾಂಕ್ ಕಟ್ಟಿಸಿ ಅವುಗಳಿಗೆ ಮೇವು ನೀಡಿದ್ದಾರೆ, ಎಷ್ಟೋ ಜನರಿಗೆ ಊಟ ನೀಡಿ ಸಹಾಯ ಮಾಡುತ್ತಾ ಇರುವ ಇವರನ್ನು ಅನ್ನಪೂರ್ಣೇಶ್ವರಿಯ ಸ್ವರೂಪ ಎಂದು ಕರೆಯುವುದೋ ಅಥವಾ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಅದೆಲ್ಲವನ್ನು ಭೂಮಿ ತಾಯಿಯ ಹಾಗೆ ತನ್ನಲ್ಲಿಯೇ ಹೊತ್ತು, ತಾಳ್ಮೆಯಿಂದ ಎಲ್ಲವನ್ನು ಸಹಿಸಿ, ಲೀಲಾಜಾಲವಾಗಿ ನಿಭಾಯಿಸಿರವ ಇವರನ್ನು ಭೂಮಿ ತಾಯಿಯ ಸ್ವರೂಪ ಎಂದು ಕರೆಯುವುದೋ. ಇಂತಹ ವ್ಯಕ್ತಿತ್ವ ಹೊಂದಿರುವ ಲೀಲಾವತಿ ಅಮ್ಮನವರ ಜೊತೆ ಬಾಲನಟಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ನನಗೆ ಸಿಕ್ಕಿತ್ತು'' ಎಂದಿದ್ದರು ಸುಧಾರಾಣಿ.

  ನಟಿ ಲೀಲಾವತಿ ಅವರು ಮಗ ವಿನೋದ್ ರಾಜ್‌ ಜೊತೆಗೆ ನೆಲಮಂಗಲದ ಬಳಿಕ ಹಳ್ಳಿಯೊಂದರಲ್ಲಿ ವಾಸ ಮಾಡುತ್ತಿದ್ದಾರೆ. ಚಿತ್ರರಂಗದಿಂದ ದೂರವಾಗಿ ಅಲ್ಲಿಯೇ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

  English summary
  Actress Shruthi, Bharthi Vishnuvardhan, Hema Chaudhary visited senior actress Leelavathi's house.
  Tuesday, September 7, 2021, 9:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X