For Quick Alerts
  ALLOW NOTIFICATIONS  
  For Daily Alerts

  ದುಃಖದಲ್ಲಿರುವ ನಟಿ ಮಾಲಾಶ್ರೀಗೆ ಭಾವುಕ ಪತ್ರ ಬರೆದ ಗೆಳತಿ ಶ್ರುತಿ

  |

  ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಕೋಟಿ ರಾಮು ಕಳೆದ ಸೋಮವಾರ ಕೊರೊನಾಗೆ ಬಲಿಯಾಗಿದ್ದಾರೆ. ಪತಿಯನ್ನು ಕಳೆದುಕೊಂಡಿರುವ ನಟಿ ಮಾಲಾಶ್ರೀ ಮತ್ತು ಅವರ ಕುಟುಂಬ ದುಃಖದಲ್ಲಿದೆ. ರಾಮು ಇಲ್ಲದ ಜೀವನವನ್ನು ಮಾಲಾಶ್ರೀಗೆ ಊಹಿಸಿ ಕೊಳ್ಳಲು ಸಾಧ್ಯವಾಗುತ್ತಿಲ್ಲ.

  Recommended Video

  ಗೆಳತಿ ಮಾಲಾಶ್ರೀ ದುಃಖಕ್ಕೆ ಪತ್ರದ ಮೂಲಕ ಸಮಾಧಾನ ಮಾಡಿದ ನಟಿ ಶ್ರುತಿ | Filmibeat Kannada

  ನೋವಿನಲ್ಲಿರುವ ನಟಿ ಮಾಲಾಶ್ರೀಗೆ ಚಿತ್ರರಂಗದ ಅನೇಕರು ಧೈರ್ಯ ತುಂಬುತ್ತಿದ್ದಾರೆ. ಒಬ್ಬರನ್ನು ಭೇಟಿಯಾಗಿ ಮಾತನಾಡಿಸಿ, ಕಣ್ಣೀರು ಒರೆಸುವಂತ ಸ್ಥಿತಿಯೂ ಇಲ್ಲವಲ್ಲ ಎಂದು ನೊಂದುಕೊಳ್ಳುತ್ತಿದ್ದಾರೆ. ಇಂಥ ಸಂಕಷ್ಟದ ಸಮಯದಲ್ಲಿ ಅನೇಕರು ಸಾಮಾಜಿಕ ಜಾಲತಾಣದ ಮೂಲಕವೇ ಧೈರ್ಯ ತುಂಬುತ್ತಿದ್ದಾರೆ. ಸ್ಯಾಂಡಲ್ ವುಡ್ ನ ಹಿರಿಯ ನಟಿ ಶ್ರುತಿ ಸಾಮಾಜಿಕ ಜಾಲತಾಣದ ಮೂಲಕ ಗೆಳತಿ ಮಾಲಾಶ್ರೀಗೆ ಭಾವುಕ ಪತ್ರ ಬರೆದಿದ್ದಾರೆ.

  ನಿರ್ಮಾಪಕರಾಗಿ ರಾಮು: ದೇವರಾಜ್ ಜೊತೆ ಮೊದಲ ಸಿನಿಮಾ, ಪ್ರಜ್ವಲ್ ಜೊತೆ ಕೊನೆ ಸಿನಿಮಾನಿರ್ಮಾಪಕರಾಗಿ ರಾಮು: ದೇವರಾಜ್ ಜೊತೆ ಮೊದಲ ಸಿನಿಮಾ, ಪ್ರಜ್ವಲ್ ಜೊತೆ ಕೊನೆ ಸಿನಿಮಾ

  ಪ್ರೀತಿಯ ಗೆಳತಿ ಮಾಲಾಶ್ರೀ,

  ಪ್ರೀತಿಯ ಗೆಳತಿ ಮಾಲಾಶ್ರೀ,

  'ಮೊದಲಿಗೆ ಭಾರವಾದ ಹೃದಯದಿಂದ ರಾಮು ಅವರಿಗೆ ಭಾವ ಪೂರ್ಣ ಶ್ರದ್ಧಾಂಜಲಿ. ನಿಮ್ಮ ಅಭಿಮಾನಿಯಾಗಿ, ನಿಮ್ಮ ಸಹೋದ್ಯೋಗಿಯಾಗಿ, ಒಬ್ಬ ಗೆಳತಿಯಾಗಿ ಇಂಥ ದುಃಖದ ಪರಿಸ್ಥಿತಿಯಲ್ಲಿ ನಿಮ್ಮನ್ನು ನೋಡಲು ಸಾಧ್ಯವಾಗದೇ ಕನಿಷ್ಠ ನಿಮ್ಮ ಕಣ್ಣೀರನ್ನು ಒರೆಸಲು ಸಾಧ್ಯವಾಗದ ಈ ಕ್ರೂರ ಪರಿಸ್ಥಿತಿಗೆ ನನ್ನದೊಂದು ದಿಕ್ಕಾರ.'

  ನೀವು ಹುಟ್ಟು ಹೋರಾಟಗಾರ್ತಿ

  ನೀವು ಹುಟ್ಟು ಹೋರಾಟಗಾರ್ತಿ

  'ಮಾಲಾ ನಿಮಗಾದ ನಷ್ಟವನ್ನು ಸರಿಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಮುಂಬರುವ ದಿನಗಳನ್ನು ಧೈರ್ಯವಾಗಿ ಎದುರಿಸಬೇಕಾಗಿರುವ ಅನಿವಾರ್ಯತೆ ಇದೆ. ನಿಮಗಾಗಿ, ನಿಮ್ಮ ಕೋಟ್ಯಾನುಕೋಟಿ ಅಭಿಮಾನಿಗಳಿಗಾಗಿ ಬಹುಮುಖ್ಯವಾಗಿ ನಿಮ್ಮ ಮುದ್ದು ಮಕ್ಕಳ ಭವಿಷ್ಯಕ್ಕಾಗಿ. ನೀವು ಹುಟ್ಟುಹೋರಾಟಗಾರ್ತಿ. ಅದು ನನ್ನ ಕಣ್ಣಾರೆ ನೋಡಿದ್ದೇನೆ.'

  ಸ್ಯಾಂಡಲ್ ವುಡ್ ಸುಂದರಿಯರು; ಅಪರೂಪದ ಫೋಟೋ ಹಂಚಿಕೊಂಡ ಮಾಲಾಶ್ರೀ, ಶ್ರುತಿಸ್ಯಾಂಡಲ್ ವುಡ್ ಸುಂದರಿಯರು; ಅಪರೂಪದ ಫೋಟೋ ಹಂಚಿಕೊಂಡ ಮಾಲಾಶ್ರೀ, ಶ್ರುತಿ

  ಸ್ಟಾರ್ ಆಗಿ ಮಿಂಚಿದ್ದು ಅದೃಷ್ಟದಿಂದ ಅಲ್ಲ

  ಸ್ಟಾರ್ ಆಗಿ ಮಿಂಚಿದ್ದು ಅದೃಷ್ಟದಿಂದ ಅಲ್ಲ

  'ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚಿದ್ದು ಕೇವಲ ಅದೃಷ್ಟದಿಂದ ಅಲ್ಲ ನಿಮ್ಮ ಪರಿಶ್ರಮದಿಂದ. ನಂತರ ಒಬ್ಬ ಉತ್ತಮ ಗೃಹಿಣಿ ಆಗಿದ್ದು ಕೇವಲ ದೇವರ ವರದಿಂದ ಅಲ್ಲಾ ತ್ಯಾಗ, ಸಹನೆ, ಪ್ರೀತಿಯಿಂದ, ಒಳ್ಳೆ ತಾಯಿ ಆಗಲೂ ಅಷ್ಟೇ ಶ್ರಮ, ಪ್ರಯತ್ನ ಇದ್ದೇ ಇರುತ್ತೆ.'

  ಕಷ್ಟದ ದಿನಗಳನ್ನು ನಿಭಾಯಿಸುವ ಶಕ್ತಿ ದೇವರು ಕೊಡಲಿ

  ಕಷ್ಟದ ದಿನಗಳನ್ನು ನಿಭಾಯಿಸುವ ಶಕ್ತಿ ದೇವರು ಕೊಡಲಿ

  'ಹೀಗೆ ಜೀವನದ ಎಲ್ಲಾ ಏರಿಳಿತದ ಸಂದರ್ಭವನ್ನು ಧೈರ್ಯವಾಗಿ ನಿಭಾಯಿಸಿಕೊಂಡು ಬಂದಿದ್ದೀರಿ. ರಾಮು ಅವರಿಲ್ಲದ ಮುಂದಿನ ದಿನಗಳು ನಿಮಗೆ ಕಷ್ಟಕರವಾಗಿದ್ದರು ಅದನ್ನು ನಿಭಾಯಿಸುತ್ತೀರಿ ಹಾಗೂ ನಿಭಾಯಿಸುವ ಶಕ್ತಿ ಆ ದೇವರು ನಿಮಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತಾ, ಆ ಕಷ್ಟದ ಹಾದಿಯಲ್ಲಿ ಎಂದಾದರೂ ಈ ಗೆಳತಿಯ ಸಹಾಯ ಬೇಕಾದಲ್ಲಿ ಒಂದು ಫೋನ್ ಕಾಲ್ ಸಾಕು' ಎಂದು ದೀರ್ಘವಾಗಿ ಬರೆದಿದ್ದಾರೆ.

  ಎಲ್ಲರಲ್ಲೂ ಒಂದು ಕಳಕಳಿಯ ಮನವಿ

  ಎಲ್ಲರಲ್ಲೂ ಒಂದು ಕಳಕಳಿಯ ಮನವಿ

  'ಎಲ್ಲರಲ್ಲೂ ಒಂದು ಕಳಕಳಿಯ ಮನವಿ. ಮುಂದೊಂದು ದಿನ ಈ ಕುಟುಂಬದ ಸದಸ್ಯರು ಬದುಕನ್ನು ಕಟ್ಟಿಕೊಳ್ಳಲು ಅವರು ಮಾಡುವ ಪ್ರಯತ್ನಕ್ಕೆ ನಿಮ್ಮೆಲ್ಲರ ಸಹಕಾರ ಇರಲಿ. ಹಾಗೂ ಸೆಲೆಬ್ರಿಟಿಗಳ ಬದುಕಿನ ಬಗ್ಗೆ ಸುಲಭವಾಗಿ ಮತ್ತು ಹಗುರವಾಗಿ ಕಮೆಂಟ್ ಮಾಡುವುದರ ಬದಲು ಒಂದು ಒಳ್ಳೆಯ ಕಮಿಟ್ಮೆಂಟ್ ಇರಲಿ. ಏಕೆಂದರೆ ಬದುಕನ್ನು ಕಟ್ಟಿಕೊಳ್ಳುವ ಕೆಲಸ ಸುಲಭವಲ್ಲ.'

  English summary
  Sandalwood senior Actress Shruthi writes an emotional letter to Actress Malashri.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X