For Quick Alerts
  ALLOW NOTIFICATIONS  
  For Daily Alerts

  ಧರ್ಮಸ್ಥಳದ ಶ್ರೀ ಮಂಜುನಾಥನ ದರ್ಶನ ಪಡೆದ ನಟಿ ಶ್ರುತಿ ಮತ್ತು ಮಗಳು

  |

  ಕನ್ನಡ ಸಿನಿಮಾರಂಗದ ಹಿರಿಯ ನಟಿ, ರಾಜಕಾರಣಿ ಶ್ರುತಿ ಕರ್ನಾಟಕ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾಗಿ ನೇಮಕ ಆದ ಬೆನ್ನಲ್ಲೇ ಧರ್ಮಸ್ಥಳದ ಶ್ರೀ ಮಂಜುನಾಥನ ದರ್ಶನ ಪಡೆದು ಧನ್ಯರಾಗಿದ್ದಾರೆ.

  ನಟಿ ಶ್ರುತಿ ತನ್ನ ಮಗಳು ಗೌರಿ ಜೊತೆ ಧರ್ಮಸ್ಥಳಕ್ಕೆ ಭೇಟಿನೀಡಿದ್ದರು. ತಾಯಿ ಮಗಳು ಇಬ್ಬರೂ ಮಂಜುನಾಥನಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಮಾಡಿ ಸಂತಸ ಪಟ್ಟಿದ್ದಾರೆ. ಇಬ್ಬರೂ ಧರ್ಮಸ್ಥಳಕ್ಕೆ ಭೇಟಿ ಕೊಟ್ಟಿರುವ ಫೋಟೋವನ್ನು ನಟಿ ಶ್ರುತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಹಳದಿ ಮತ್ತು ಕೆಂಪು ಮಿಶ್ರಿತ ಸೀರೆಯಲ್ಲಿ ನಟಿ ಶ್ರುತಿ ಕಂಗೊಳಿಸುತ್ತಿದ್ದರು. ಇನ್ನು ಪುತ್ರಿ ಗೌರಿ ಸಹ ಪಿಂಕ್ ಬಣ್ಣದ ಜೆರಿ ಸೀರೆ ಧರಿಸಿ ಮಂಜುನಾಥನ ದರ್ಶನ ಮಾಡಿದ್ದಾರೆ. ಇಬ್ಬರೂ ಪೂಜೆ ಮುಗಿಸಿ ಹೊರಬರುತ್ತಿರುವ ವಿಡಿಯೋವನ್ನು ಶ್ರುತಿ ಶೇರ್ ಮಾಡಿ, "ಬಂದಿದ್ದೆಲ್ಲವೂ ಬರಲಿ. ಭಗವಂತನ ದಯೆ, ನಿಮ್ಮಲ್ಲೆರ ಆಶೀರ್ವಾದ, ಹಾರೈಕೆ ಸದಾ ಇರಲಿ" ಎಂದು ಬರೆದುಕೊಂಡಿದ್ದಾರೆ.

  ಶ್ರುತಿ ಮತ್ತು ಪುತ್ರಿ ಗೌರಿಗೆ ಅನೇಕರು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಟಿ ಅನುಪ್ರಭಾಕರ್ ಕಾಮೆಂಟ್ ಮಾಡಿ, 'ಇಬ್ಬರೂ ತುಂಬಾ ಸುಂದರವಾಗಿ ಕಾಣಿಸುತ್ತಿದ್ದೀರಿ' ಎಂದು ಹೇಳಿದ್ದಾರೆ.

  ಶ್ರುತಿ ಅವರನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ಶನಿವಾರ (ಜುಲೈ 17) ಶ್ರುತಿ ಬದಲಿಗೆ ಕಾಪು ಸಿದ್ದಲಿಂಗಸ್ವಾಮಿ ಅವರನ್ನು ನೇಮಿಸಲಾಗಿತ್ತು. ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ ಬಳಿಕ ಸೋಮವಾರ (ಜುಲೈ 19) ಬೆಳಗ್ಗೆ ಕಾವೇರಿ ನಿವಾಸದಲ್ಲಿ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿದ್ದರು. ಅದೇ ದಿನ ಹೊಸ ಜವಾಬ್ದಾರಿ ನೀಡಿರುವುದು ಗಮನಾರ್ಹ.

  Actress Shruthi visits to Dharmasthala sri manjunatha temple with her Daughter

  ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಮುಂದುವರಿಯುತ್ತಿರುವ ಶ್ರುತಿ, ಕೊನೆಯದಾಗಿ ಮಂಸೋರೆ ನಿರ್ದೇಶನ ಆಕ್ಟ್ 1978 ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಶಿವರಾಜ್ ಕುಮಾರ್ ನಟನೆಯ ಭಜರಂಗಿ 2 ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಗಣೇಶ ಹಬ್ಬಕ್ಕೆ ತೆರೆಗೆ ಬರುತ್ತಿದೆ. ಇದರ ಜೊತೆ ಮತ್ತೆರಡು ಹೊಸ ಪ್ರಾಜೆಕ್ಟ್ ಗೂ ಸಹಿ ಹಾಕಿದ್ದು ಕೊವಿಡ್ ಕಾರಣದಿಂದ ಆ ಸಿನಿಮಾಗಳು ಇನ್ನು ಶುರುವಾಗಿಲ್ಲ.

  English summary
  Actress, Politician Shruthi visits to Dharmasthala sri manjunatha temple with her Daughter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X