ಅಪ್ಪನಿಗೆ ಭಾವನಾತ್ಮಕ ಸಂದೇಶ ಕಳುಹಿಸಿದ ನಟಿ ಶ್ರುತಿ ಮಗಳು
Recommended Video
ಕನ್ನಡ ಚಿತ್ರರಂಗದ ಖ್ಯಾತ ನಟಿ ಶ್ರುತಿ ಸದ್ಯ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ ಮಾತ್ರವಲ್ಲದೆ ತಮಿಳು, ಮಲಯಾಳಂ, ತೆಲುಗು ಚತ್ರರಂಗದಲ್ಲೂ ಮಿಂಚಿರುವ ಶ್ರುತಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಸದ್ಯ ಶ್ರುತಿ ಅವರ ಪುತ್ರ ಗೌರಿ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಈ ಬಗ್ಗೆ ಶ್ರುತಿ ಎಲ್ಲೂ ಹೇಳಿಕೊಂಡಿಲ್ಲವಾದ್ರು ಸುದ್ದಿ ಮಾತ್ರ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಆಗಿರುವ ಗೌರಿ ಬಣ್ಣದ ಲೋಕದ ಪಯಣ ಶುರು ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.
ಇದರ ನಡುವೆ ಗೌರಿ ಅಪ್ಪ ಎಸ್.ಮಹೇಂದರ್ ಅವರಿಗೆ ಭಾವನಾತ್ಮಕ ಸಂದೇಶ ಕಳುಹಿಸಿದ್ದಾರೆ. ಶ್ರುತಿ ಮತ್ತು ಮಹೇಂದರ್ ವಿಚ್ಛೇದನ ಪಡೆದು ವರ್ಷಗಳೆ ಆಗಿವಿ. 1998ರಲ್ಲಿ ನಿರ್ದೇಶಕ ಎಸ್.ಮಹೇಂದರ್ ಜೊತೆ ಹಸೆ ಮಣೆ ಏರಿದ ಶ್ರುತಿ, 2009ರಲ್ಲಿ ಪತಿಯಿಂದ ದೂರ ಆಗಿದ್ದಾರೆ.

ಸುಮಾರು 11ವರ್ಷಗಳ ದಾಂಪತ್ಯ ಜೀವನ ಮುರಿದುಕೊಂಡು, ಮಗಳು ಗೌರಿ ಜೊತೆ ಏಕಾಂಗಿ ಜೀವನ ನಡೆಸುತ್ತಿದ್ದಾರೆ. ಆದ್ರೆ ಮಗಳಿಗೆ ಅಪ್ಪನ ನೆನಪು ಕಾಡುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ ಗೌರಿ.
ಅಪ್ಪ ಎಸ್.ಮಹೇಂದರ್ ಅವರಿಗೆ ಭಾವನಾತ್ಮಕ ಸಂದೇಶ ನೀಡುವ ಮೂಲಕ ಅಪ್ಪನ ಜೊತೆ ಇರುವ ಫೋಟೋವನ್ನು ಶೇರ್ ಮಾಡಿದ್ದಾರೆ.
"ಹುಟ್ಟುಹಬ್ಬದ ಶುಭಾಶಯಗಳು ಅಪ್ಪ. ನೀನು ಯಾವಾಗಲು ನನ್ನ ಮೊದಲ ಪ್ರೀತಿ ಮತ್ತು ನನ್ನ ನೆಚ್ಚಿನ ನಾಯಕ. ನನ್ನ ನಿಮ್ಮ ನಡುವೆ ಇರುವ ಪ್ರೀತಿ ಮತ್ತು ಬಾಂದವ್ಯವನ್ನು ಯಾರು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಮತ್ತೆ ನಿನ್ನ ಜೊತೆ ಹೆಚ್ಚು ಕಾಲ ಕಳೆಯುವಂತಹ ಅವಕಾಶವನ್ನು ಈ ಬದುಕು ಒದಗಿಸಿಕೊಡಲಿ ಎಂದು ಕೇಳಿಕೊಳ್ಳುತ್ತೇನೆ. ಪದಗಳಲ್ಲಿ ಹೇಳದಷ್ಟು ನಿನ್ನನ್ನ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅತೀ ಶೀಘ್ರದಲ್ಲೆ ನಿಮ್ಮೊಂದಿಗೆ ಕಾಲ ಕಳೆಯಲು ಕಾಯುತ್ತೀದ್ದೀನಿ"
ಎಂದು ಭಾವನಾತ್ಮಕ ಅಪ್ಪನನ್ನು ಮಿಸ್ ಮಾಡಿಕೊಳ್ಳುತ್ತಿರುವ ಬಗ್ಗೆ ಬರೆದುಕೊಂಡಿದ್ದಾರೆ. ಎಸ್.ಮಹೇಂದರ್ ಸದ್ಯ ಮೈಸೂರು ಮೂಲದ ಯಶೋದ ಅವರನ್ನು ಮದುವೆಯಾಗಿ ಸಂಸಾರ ನಡೆಯುತ್ತಿದ್ದಾರೆ. ಆದ್ರೆ ಇತ್ತ ಮಗಳು ಗೌರಿ ಅಪ್ಪ ಬರುವ ದಾರಿಯನ್ನು ಕಾಯುತ್ತಿದ್ದಾರೆ.


Click it and Unblock the Notifications











