For Quick Alerts
  ALLOW NOTIFICATIONS  
  For Daily Alerts

  ಅಣ್ಣಾವ್ರ ಮಕ್ಕಳು, ದರ್ಶನ್ ಸ್ಟಾರ್ ಆಗ್ತಾ ಇದ್ರಾ? ನೆಪೋಟಿಸಂ ಬಗ್ಗೆ ತುಟಿಬಿಚ್ಚಿದ ನಟಿ ಶೃತಿ!

  |

  ನೆಪೋಟಿಸಂ, ಒಂದು ಕ್ಷೇತ್ರದಲ್ಲಿ ಯಾವ ವ್ಯಕ್ತಿ ಪ್ರಬಲನಾಗಿರುತ್ತಾನೋ ಅಥವಾ ಜನಪ್ರಿಯತೆ ಹೊಂದಿರುತ್ತಾನೋ ಅಂತವರ ಮಕ್ಕಳು ಅದೇ ಕ್ಷೇತ್ರಕ್ಕೆ ಕಾಲಿಟ್ಟರೆ ಅದನ್ನು ನಮ್ಮ ಜನ ನೆಪೋಟಿಸಂ ಎಂದು ಕರೆಯುತ್ತಾರೆ. ಈ ನೆಪೋಟಿಸಂ ಎಲ್ಲಾ ಕ್ಷೇತ್ರಗಳಲ್ಲಿಯೂ ಇದ್ದು ಹೆಚ್ಚಾಗಿ ಗುರುತಿಸಿಕೊಂಡಿರುವುದು ಹಾಗೂ ಈ ಪದ ಹೆಚ್ಚಾಗಿ ಬಳಕೆಯಲ್ಲಿರುವುದು ಸಿನಿಮಾ ಕ್ಷೇತ್ರದಲ್ಲಿ. ಹೌದು, ನಟನೋರ್ವನ ಮಗ ಅಥವಾ ಮಗಳು ಚಿತ್ರವೊಂದಕ್ಕೆ ಆಯ್ಕೆಯಾದರೆ ಸಾಕು ನೆಪೋಟಿಸಂ, ನೆಪೊ ಕಿಡ್ ಎಂಬ ಟೀಕೆಗಳು ವ್ಯಕ್ತವಾಗಿಬಿಡುತ್ತವೆ.

  ಅದರಲ್ಲಿಯೂ ಈ ಟೀಕೆ ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ ಕೇಳಿಬಂದದ್ದು ಬಾಲಿವುಡ್ ಅಂಗಳದಲ್ಲಿ. ಇದಕ್ಕೂ ಮುನ್ನ ಈ ನೆಪೋಟಿಸಂ ವಿಷಯವಾಗಿ ಸಾಮಾನ್ಯರ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾದದ್ದು ತೆಲುಗು ಚಿತ್ರರಂಗ. ಇನ್ನು ನಮ್ಮ ಕನ್ನಡ ಚಿತ್ರರಂಗ ಕೂಡ ಈ ನೆಪೋಟಿಸಂ ಟೀಕೆಯಿಂದ ದೂರವಾಗಿಲ್ಲ. ಅಣ್ಣಾವ್ರ ಮಕ್ಕಳು ಎಂಬ ಕಾರಣಕ್ಕೆ ರಾಜ್‌ಕುಮಾರ್ ಮಕ್ಕಳು ಸ್ಟಾರ್ ಆದ್ರು ಎಂಬ ಕಾಮೆಂಟ್‌ಗಳು ಸಾಕಷ್ಟು ಕೇಳಿಬಂದಿವೆ.

  ಈ ಕುರಿತಾಗಿಯೇ ಇಂದು ( ಸೆಪ್ಟೆಂಬರ್ 23 ) ನಟಿ ಶೃತಿ ಗುರು ಶಿಷ್ಯರು ಸಿನಿಮಾ ಬಿಡುಗಡೆ ವೇಳೆ ಮಾತನಾಡಿದ್ದು ಕಿಡಿಕಾರಿದ್ದಾರೆ.

  ನೆಪೋಟಿಸಂ ಅಂತ ಕೂತಿದ್ರೆ ಅಣ್ಣಾವ್ರ ಮಕ್ಕಳು, ದರ್ಶನ್ ಅವರನ್ನ ನೋಡೋಕೆ ಆಗ್ತಾ ಇತ್ತಾ?

  ನೆಪೋಟಿಸಂ ಅಂತ ಕೂತಿದ್ರೆ ಅಣ್ಣಾವ್ರ ಮಕ್ಕಳು, ದರ್ಶನ್ ಅವರನ್ನ ನೋಡೋಕೆ ಆಗ್ತಾ ಇತ್ತಾ?

  ಇಂದು ( ಸೆಪ್ಟೆಂಬರ್ 23 ) ಶರಣ್ ಅಭಿನಯದ ಗುರು ಶಿಷ್ಯರು ಚಿತ್ರವನ್ನು ವೀಕ್ಷಿಸಲು ಚಿತ್ರಮಂದಿರಕ್ಕೆ ಬಂದಿದ್ದ ಶೃತಿ ಚಿತ್ರ ಮುಗಿದ ನಂತರ ಚಿತ್ರದಲ್ಲಿ ಅಭಿನಯಿಸಿದ್ದ ಸ್ಟಾರ್ ನಟರ ಪುತ್ರರ ನಟನೆಯನ್ನು ಹೊಗಳಿದರು. ಇದೇ ವೇಳೆ ಅದನ್ನು ನೆಪೋಟಿಸಂ ಎನ್ನುವವರ ವಿರುದ್ಧ ಕಿಡಿಕಾರಿದರು. ನೆಪೋಟಿಸಂ ಅಂತ ಕೂತಿದ್ರೆ ಅಣ್ಣಾವ್ರ ಮಕ್ಕಳನ್ನು ನೋಡೋಕೆ ಆಗ್ತಾ ಇತ್ತಾ, ಶಿವಣ್ಣ ಅವರನ್ನ ನೋಡೋಕೆ ಆಗ್ತಾ ಇತ್ತಾ, ದರ್ಶನ್ ಅವರನ್ನ ನೋಡೋಕೆ ಸಾಧ್ಯ ಆಗ್ತಾ ಇತ್ತಾ ಎಂದು ನೆಪೋಟಿಸಂ ಎನ್ನುವವರ ವಿರುದ್ಧ ಆಕ್ರೋಶ ಹೊರಹಾಕಿದರು.

  ಜನ ಕೈಹಿಡಿದರೆ ಮಾತ್ರ ಯಶಸ್ಸು

  ಜನ ಕೈಹಿಡಿದರೆ ಮಾತ್ರ ಯಶಸ್ಸು

  ಇನ್ನೂ ಮುಂದುವರೆದು ಮಾತನಾಡಿದ ಶೃತಿ ಒಂದು ಕುಟುಂಬದಲ್ಲಿ ಅವಕಾಶ ಸಿಕ್ರೆ ಸೆಲೆಬ್ರಿಟಿ ಆಗ್ಬಿಡಲ್ಲ, ಜನ ಕೈಹಿಡಿಬೇಕು, ನಿಜವಾದ ಪ್ರತಿಭೆ ಇದ್ರೆ ಮಾತ್ರ ಚಿತ್ರರಂಗದಲ್ಲಿ ಉಳಿದುಕೊಳ್ತಾರೆ, ಒಂದು ಸಿನಿಮಾದಲ್ಲಿ ಅವಕಾಶ ಸಿಕ್ಕಿದ ಕೂಡಲೇ ಯಾರೂ ಸೂಪರ್ ಸ್ಟಾರ್‌ಗಳಾಗೋಕೆ ಸಾಧ್ಯ ಇಲ್ಲ ಎಂದರು. ಒಂದು ಅವಕಾಶದಿಂದ ಯಾರೂ ಸ್ಟಾರ್ ಆಗಲ್ಲ, ಅವರು ಪಾತ್ರಕ್ಕೆ ಎಷ್ಟು ಕಷ್ಟ ಪಡ್ತಾರೆ, ಎಷ್ಟು ಪ್ರೀತಿಸ್ತಾರೆ ಹಾಗೂ ಎಷ್ಟು ಜೀವ ಕೊಡ್ತಾರೆ ಎಂಬುದರ ಮೇಲೆ ಎಲ್ಲಾ ನಿರ್ಧಾರವಾಗುತ್ತದೆ ಎಂದು ಶೃತಿ ಸ್ಟಾರ್ ಪಟ್ಟ ಫ್ಯಾಮಿಲಿ ಬ್ಯಾಕ್‌ಗ್ರೌಂಡ್‌ನಿಂದ ಸಿಗುವುದಿಲ್ಲ ಎಂದಿದ್ದಾರೆ.

  ತಮ್ಮ ಬಾಲ್ಯ ನೆನೆದ ಶೃತಿ

  ತಮ್ಮ ಬಾಲ್ಯ ನೆನೆದ ಶೃತಿ

  ಇನ್ನು ಗುರು ಶಿಷ್ಯರು ಚಿತ್ರದಲ್ಲಿನ ಖೊಖೊ ಆಟದ ಬಗ್ಗೆ ಮಾತನಾಡಿದ ನಟಿ ಶೃತಿ ತಾನು ಬಾಲ್ಯದಲ್ಲಿ ಓರ್ವ ಖೊಖೊಪಟು ಎಂಬುದನ್ನು ಬಿಚ್ಚಿಟ್ಟಿದ್ದಾರೆ. ತಾನು ತಾಲೂಕು ಮಟ್ಟ, ಜಿಲ್ಲಾ ಮಟ್ಟದಲ್ಲಿ ಖೊಖೊ ಆಡಿದ್ದಾಗಿ ಹಾಗೂ ಖೊಖೊ ಆಡಲು ಬೆಂಗಳೂರಿನವರೆಗೂ ಬಂದಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ ತಮ್ಮ ಕುಟುಂಬದಲ್ಲಿ ಇದಕ್ಕೆಲ್ಲಾ ಹೆಚ್ಚು ಪ್ರೋತ್ಸಾಹ ಸಿಕ್ಕಿರಲಿಲ್ಲ ಎಂದಿರುವ ಶೃತಿ ಇಂಥ ದೇಸಿ ಆಟದ ಮೇಲೆ ತನ್ನ ಸೋದರ ಒಂದೊಳ್ಳೆ ಸಿನಿಮಾ ಮಾಡಿರುವುದು ಹೆಮ್ಮೆ ಎಂದಿದ್ದಾರೆ.

  English summary
  Actress Shruti gives Shiva rajkumar and Darshan as example while talking about nepotism during Guru Shishyaru release. Read on
  Friday, September 23, 2022, 18:16
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X