»   » ಮುಂಬೈ ಬಾಡಿಗೆ ಅಪಾರ್ಟ್‌ಮೆಂಟ್‍‌ಗೆ ಶ್ರುತಿ ಹಾಸನ್

ಮುಂಬೈ ಬಾಡಿಗೆ ಅಪಾರ್ಟ್‌ಮೆಂಟ್‍‌ಗೆ ಶ್ರುತಿ ಹಾಸನ್

Posted By:
Subscribe to Filmibeat Kannada
ದಕ್ಷಿಣ ಭಾರತದ ತಾರೆ ಶ್ರುತಿ ಹಾಸನ್ ಶೀಘ್ರದಲ್ಲೇ ಚೆನ್ನೈನಿಂದ ಮುಂಬೈಗೆ ಸ್ಥಳಾಂತರವಾಗಲಿದ್ದಾರೆ. ಈಗಾಗಲೆ ಆಕೆ ಮುಂಬೈನ ಬಾಂದ್ರಾ ಪ್ರದೇಶದಲ್ಲಿ 2BHK ಅಪಾರ್ಟ್‌ಮೆಂಟ್ ಒಂದನ್ನು ನೋಡಿದ್ದು ಬಾಡಿಗೆಗೆ ಹಿಡಿಯಲಿದ್ದಾರೆ.

ಈ ಅಪಾರ್ಟ್‌ಮೆಂಟ್ ಆಕೆಯ ತಾಯಿ ಸಾರಿಕಾ ಹಾಗೂ ತಂಗಿ ಅಕ್ಷರಾ ಅವರ ನಿವಾಸಕ್ಕೆ ಸನಿಹದಲ್ಲೇ ಇದೆ ಎನ್ನುತ್ತವೆ ಬಾಲಿವುಡ್ ಮೂಲಗಳು. ಬಾಲಿವುಡ್‌ನಲ್ಲಿ ಅವಕಾಶಗಳು ಹೆಚ್ಚಾಗಿದ್ದೇ ಆಕೆ ಮುಂಬೈಗೆ ಸ್ಥಳಾಂತರವಾಗಲು ಕಾರಣ ಎನ್ನಲಾಗಿದೆ.

ಮುಂಬೈಗೆ ಸ್ಥಳಾಂತರವಾಗುತ್ತಿರುವ ಬಗ್ಗೆ ಶ್ರುತಿ ಹೇಳುವುದೇನೆಂದರೆ, ಮುಂಬೈನೊಂದಿಗೆ ನನಗೆ ಸಂಪರ್ಕವಿದೆ. ನಾನು ಓದಿದ್ದು ಮುಂಬೈ ಬಾಂದ್ರಾದ ಸೇಂಟ್ ಆಂಡ್ರೂಸ್ ಕಾಲೇಜಿನಲ್ಲಿ. ನನ್ನ ತಾಯಿ ಮತ್ತು ತಂಗಿ ಇಬ್ಬರೂ ವಾಸವಾಗಿರುವುದೂ ಇಲ್ಲೇ. ಮುಂಬೈ ನನಗೆ ಎರಡನೇ ಮನೆಯಿದ್ದಂತೆ ಎಂದಿದ್ದಾರೆ. ನಿಮಗೂ ಮನೆ ಬದಲಾಯಿಸುವ ಯೋಚನೆ ಏನಾದರು ಇದ್ದರೆ ಇಲ್ಲಿ ಕ್ಲಿಕ್ಕಿಸಿ. (ಏಜೆನ್ಸೀಸ್)

English summary
Actress Shruti Haasan will soon shift into a rented 2BHK apartment in Bandra close to her mother Sarika and sister Akshara's residence. Shruti Haasan receiving several offers in Bollywood hence she has decided move to Mumbai
Please Wait while comments are loading...