ಮದುವೆ, ಡೇಟಿಂಗ್ ಬಗ್ಗೆ ಶ್ರುತಿ ಹಾಸನ್ ಅಚ್ಚರಿ ಹೇಳಿಕೆ

ಸೂಪರ್ ಸ್ಟಾರ್ ಕಮಲ್ ಹಾಸನ್ ಅವರ ಪುತ್ರಿ ಸಿನಿಮಾ ವಿಚಾರಕ್ಕಿಂತ ಹೆಚ್ಚು ಖಾಸಗಿ ವಿಷ್ಯಕ್ಕೆ ಸುದ್ದಿಯಾಗ್ತಿದ್ದಾರೆ. 33 ವರ್ಷದ ಶ್ರುತಿ ವಿದೇಶಿ ಹುಡುಗನ ಜೊತೆ ಸುತ್ತಾಡ್ತಿದ್ದಾರೆ ಅನ್ನೋ ಸುದ್ದಿ ಬಹಳ ವರ್ಷಗಳಿಂದ ಚರ್ಚೆಯಾಗ್ತಿದೆ. ಆದ್ರೆ ಈ ಬಗ್ಗೆ ಶ್ರುತಿ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ.

ಹಾಗಾಗಿ, ಶ್ರುತಿ ಹಾಸನ್ ಈಗ ಎಲ್ಲೇ ಹೋದರು, ಮದುವೆ ಯಾವಾಗ? ಯಾರ ಜೊತೆ ಮದುವೆ ಆಗ್ತೀರಾ, ಆ ವಿದೇಶಿ ಹುಡುಗ ನಿಮ್ಮ ಪ್ರಿಯಕರನಾ ಎಂಬ ಸಾಲು ಸಾಲು ಪ್ರಶ್ನೆಗಳು ಎದುರಾಗುತ್ತೆ. ಇದೀಗ, ಇಂತಹದ್ದೇ ಕೆಲವು ಪ್ರಶ್ನೆಗಳು ಶ್ರುತಿಗೆ ಕೇಳಲಾಗಿದ್ದು ತಮ್ಮದೇ ಸ್ಟೈಲ್ ನಲ್ಲಿ ಉತ್ತರ ಕೊಟ್ಟಿದ್ದಾರೆ.

ಶ್ರುತಿ ಹಾಸನ್ ಅವರ ಈ ಉತ್ತರಗಳು ಬಹುತೇಕ ಅಭಿಮಾನಿಗಳ ಅನುಮಾನವನ್ನ ಬಗೆಹರಿಸಿದೆ ಎನ್ನಬಹುದು. ಆದ್ರೂ, ಶ್ರುತಿಯ ನಡೆ ಎಷ್ಟು ಸರಿ ಎಂದು ಮತ್ತಷ್ಟು ಜನ ಪ್ರಶ್ನಿಸುವವರು ಹುಟ್ಟಿಕೊಂಡಿದ್ದಾರೆ. ಅಷ್ಟಕ್ಕೂ, ಮದುವೆ, ಡೇಟಿಂಗ್ ಬಗ್ಗೆ ಶ್ರುತಿ ಹಾಸನ್ ಹೇಳಿದ್ದೇನು? ಮುಂದೆ ಓದಿ....

ನಾನು ಮದುವೆ ಆಗಲ್ಲ

ನಾನು ಮದುವೆ ಆಗಲ್ಲ

''ಮದುವೆ ವಿಷ್ಯದಲ್ಲಿ ನನಗೂ ಮತ್ತು ಇತರೆ ಮಹಿಳೆಯರಿಗೆ ಬಹಳ ವ್ಯತ್ಯಾಸವಿದೆ. ನಾನು ಮದುವೆ ಆಗಲ್ಲ ಮತ್ತು ನನಗೆ ಮದುವೆ ಆಗಬೇಕು ಎಂಬ ಆತುರವೂ ಇಲ್ಲ. ನನಗೆ ಯಾವಾಗ ಮದುವೆ ಆಗ್ಬೇಕು ಅನಿಸುತ್ತೋ ಆಗ ಆಗ್ತೀನಿ. ಆದ್ರೀಗ, ಈ ಬಗ್ಗೆ ಯಾವುದೇ ಕಲ್ಪನೆ ಕೂಡ ಇಲ್ಲ. ನಿರ್ದಿಷ್ಟ ಸಮಯದಲ್ಲಿ ಮದುವೆಯಾಗಬೇಕೆಂದು ಯಾವುದೇ ಸಂಬಂಧವು ನಿರ್ಧರಿಸಲ್ಲ'' ಎಂದು ಶ್ರುತಿ ಹಾಸನ್ ಮದುವೆ ಬಗ್ಗೆ ಖಡಕ್ ಆಗಿ ನಿರ್ಧಾರ ತಿಳಿಸಿದ್ದಾರೆ.

ರಿಲೆಷನ್ ಇದ್ರೆ ಮದುವೆ ಆಗ್ಬೇಕಾ?

ರಿಲೆಷನ್ ಇದ್ರೆ ಮದುವೆ ಆಗ್ಬೇಕಾ?

''ಇಬ್ಬರು ವ್ಯಕ್ತಿಗಳ ಮಧ್ಯೆ ರಿಲೆಷನ್ ಷಿಪ್ ಇದ್ರೆ ಅದು ಮದುವೆಗೆ ದಾರಿಯಾಗುತ್ತಾ? ಆ ಸಂಬಂಧ ತಪ್ಪು ಎಂದೆನಿಸಿದರೇ ಮದುವೆ ಆಗ್ಬೇಕಾ? ಒಬ್ಬ ವ್ಯಕ್ತಿಯ ಜೊತೆಗಿನ ಬಂಧ ಮದುವೆಗೆ ದಾರಿಯಾಗಬಾರದು. ರಿಲೆಷನ್ ಷಿಪ್ ನಲ್ಲಿ ನನಗೆ ಅಂತ ಒಂದು ಅಭಿಪ್ರಾಯ ಇರುತ್ತೆ. ರಿಲೆಷನ್ ಅನ್ನೋದು ಸ್ವಚ್ಛ ಮನಸ್ಸಿನಿಂದ ಇರಬೇಕು. ನನಗೆ ಇಷ್ಟವಾದ ವ್ಯಕ್ತಿಯನ್ನ ನಾನು ಕೋರಿಕೊಳ್ಳುತ್ತೇನೆ'' ಎಂದು ಶ್ರುತಿ ಹಾಸನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೈಕಲ್ ಜೊತೆ ಡೇಟಿಂಗ್?

ಮೈಕಲ್ ಜೊತೆ ಡೇಟಿಂಗ್?

ಜೀವನದಲ್ಲಿ ಪ್ರತಿಯೊಂದು ಬದಲಾವಣೆಯನ್ನ ಸ್ವಾಗತಿಸಬೇಕು, ಆನಂದಿಸಬೇಕು. ಆಗಲೇ ಪರಿಸ್ಥಿತಿಗೆ ತಕ್ಕಂತೆ ಜೀವನವನ್ನ ಸಾಗಿಸಲು ಸಾಧ್ಯವಾಗುತ್ತೆ. ಸದ್ಯಕ್ಕೆ ಲಂಡನ್ ಮೂಲದ ರಾಕ್ ಸ್ಟಾರ್ ಮೈಕಲ್ ಕೋರ್ಸಲ್ ಅವರ ಜೊತೆ ಕಳೆದ ಕೆಲವು ವರ್ಷಗಳಿಂದ ಶ್ರುತಿ ಹಾಸನ್ ಡೇಟಿಂಗ್ ನಲ್ಲಿದ್ದಾರೆ ಎನ್ನಲಾಗಿದೆ.

ಪ್ರಿಯಕರಿನಿಗೆ ಬರ್ತಡೇ ವಿಶ್

ಪ್ರಿಯಕರಿನಿಗೆ ಬರ್ತಡೇ ವಿಶ್

ಇತ್ತೀಚಿಗಷ್ಟೆ ಮೈಕಲ್ ಹುಟ್ಟುಹಬ್ಬವನ್ನ ಆಚರಣೆ ಮಾಡಿರುವ ಶ್ರುತಿ ಹಾಸನ್ ಇನ್ಸ್ಟಾಗ್ರಾಮ್ ನಲ್ಲಿ ಆಸಕ್ತಿದಾಯಕ ಪೋಸ್ಟ್ ಹಾಕಿದ್ದಾರೆ. ನಿನ್ನಲ್ಲಿ ಸುಮುದ್ರದಂತೆ ಪರಿಪೂರ್ಣತೆ ಇದೆ. ಅದಕ್ಕೆ ಪರಿಪೂರ್ಣವಾದ ಸಾಯಂಕಾಲ ಒಂದು ಫೋಟೋ ಹಂಚಿಕೊಳ್ಳುತ್ತಿದ್ದೇನೆ. ಈ ಫೋಟೋ ನಿನಗೆ ಖುಷಿ ನೀಡುತ್ತೆ ಎಂದು ಭಾವಿಸಿದ್ದೇನೆ. ಮತ್ತೊಮ್ಮೆ ನಿನಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಸ್ಟೇಟಸ್ ಹಾಕಿದ್ದಾರೆ.

More from Filmibeat

English summary
Kamal haasan daughter shruti hassan is no hurry to get marry says. she is in a relationship with london based michael corsale?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X