ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ನಟಿ ಶ್ರುತಿ ಹರಿಹರನ್

ನಟಿ ಶ್ರುತಿ ಹರಿಹರನ್ ತಮ್ಮ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. 2017ರಲ್ಲಿ ಕೇರಳದಲ್ಲಿ ಬಹಳ ಸರಳವಾಗಿ ಮದುವೆ ಆಗಿದ್ದ ಶ್ರುತಿ, ಕುಟುಂಬದವರನ್ನು ಹೊರತುಪಡಿಸಿ ಯಾರಿಗೂ ಈ ವಿಚಾರ ತಿಳಿಸಿರಲಿಲ್ಲ. ಅಂತಾರಾಷ್ಟ್ರೀಯ ಡ್ಯಾನ್ಸರ್ ಹಾಗೂ ಮಾರ್ಷಲ್ ಆರ್ಟ್ ಪಟು ವಾಗಿರೋ ರಾಮ್ ಕುಮಾರ್ ಅವರನ್ನ ಪ್ರೀತಿಸಿ ಮದುವೆಯಾಗಿದ್ದರು ನಟಿ ಶ್ರುತಿ. ನಂತರದಲ್ಲಿ ನಟ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ್ದರು. ಈ ಸಂದರ್ಭದಲ್ಲಿ ಶ್ರುತಿ ನೀಡಿದ್ದ ದೂರಿನಲ್ಲಿ w/o ರಾಮ್ ಕುಮಾರ್ ಎಂದು ಬರೆದಿದ್ದರು. ಇದನ್ನು ಗಮನಿಸಿದಾಗ ಶ್ರುತಿ ಹರಿಹರನ್‌ಗೆ ವಿವಾಹ ಆಗಿದೆ ಅನ್ನೋ ವಿಚಾರ ಎಲ್ಲರಿಗೂ ತಿಳಿದಿತ್ತು.

ಇದರ ಬಳಿಕ ಹೆಚ್ಚಾಗಿ ಸಿನಿಮಾದಲ್ಲಿ ಅಭಿನಯಿಸದ ಶ್ರುತಿ ಹರಿಹರನ್ ಕುಟುಂಬದ ಜೊತೆ ಸಮಯ ಕಳೆಯೋಕೆ ಆರಂಭಿಸಿದ್ರು. ಮದುವೆ ಆಗಿರೋದರ ಬಗ್ಗೆ ಹೆಚ್ಚು ಎಲ್ಲೂ ಮಾತನಾಡಿರದ ಶ್ರುತಿ, 2019ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗಳಿಗೆ ಜಾನಕಿ ಎಂದು ಹೆಸರಿಟ್ಟಿದ್ದಾರೆ. ಅಲ್ಲದೇ ಈಗ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ತಮ್ಮ ಮದುವೆಯಲ್ಲಿ ತೆಗೆದ ಒಂದಷ್ಟು ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದು ನಮ್ಮ ಪುಟ್ಟ ಕುಟುಂಬ ಎಂದು ಪರಿಚಯಿಸಿಕೊಂಡಿದ್ದಾರೆ.

ಕೇರಳದ ಒಂದು ದೇವಸ್ಥಾನದಲ್ಲಿ ಕೇವಲ ಕುಟುಂಬ ಸದಸ್ಯರ ಸಮ್ಮುಖದಲ್ಲಿ ವಿವಾಹ ಮಾಡಿಕೊಂಡಿದ್ದ ಶ್ರುತಿ ಮತ್ತು ರಾಮ್ ಈಗ ಈ ಬಗ್ಗೆ ಮಾತನಾಡಿದ್ದಾರೆ. ಒಂದೊಂದೇ ಚಿತ್ರವನ್ನು ಹಂಚಿಕೊಂಡಿರುವುದಲ್ಲದೆ ಆ ಚಿತ್ರದ ಹಿಂದೆ ಇರೊ ವಿಷಯದ ಬಗ್ಗೆಯೂ ಬರೆದುಕೊಂಡಿದ್ದಾರೆ. ಮದುವೆ ಮುಹೂರ್ತ ಸಮಯದಲ್ಲಿ ಶ್ರುತಿ ಕೆಂಪು ಬಣ್ಣದ ಸೀರೆ ಹಾಗೇ ರಾಮ್ ಕುಮಾರ್ ಬಿಳಿ ಬಣ್ಣದ ಪಂಚೆ ಶರ್ಟ್ ಧರಿಸಿದ್ದು, ಇದು ನಮ್ಮ ಮದುವೆಯ ಸುಂದರ ಕ್ಷಣಗಳು ಎಂದಿದ್ದಾರೆ ಶೃತಿ.

Actress Shruti Hariharan shares Wedding Anniversary photo

ಇನ್ನು ರಾಮ್ ಕುಮಾರ್ ಬಗ್ಗೆ ಕೂಡ ತಿಳಿಸಿರೋ ಶ್ರುತಿ ನಾವಿಬ್ಬರು ಪ್ರೀತಿಸಿ ಮದುವೆ ಆಗಿದ್ದೇವೆ. ನಾನು ಮೊದಲು ಡ್ಯಾನ್ಸರ್ ಆಗಿ ನನ್ನ ಕೆರಿಯರ್ ಆರಂಭಿಸಿದ್ದೆ. ನಾನು ಡ್ಯಾನ್ಸರ್ ಆಗಲು ರಾಮ್ ಕುಮಾರ್ ಬೆಂಬಲ ಹೆಚ್ಚಿತ್ತು. ನನ್ನನ್ನು ಮೊದಲಿನಿಂದಲೂ ಎಲ್ಲಾ ವಿಚಾರಗಳಲ್ಲು ಉತ್ತೇಜನ ನೀಡಿ, ಪ್ರೀತಿ ನೀಡಿ ನೋಡಿಕೊಂಡವರು ರಾಮ್. ನಮ್ಮ ಖುಷಿಗೆ ಮಗಳು ಜಾನಕಿ ಈಗ ಸೇರ್ಪಡೆ ಆಗಿದ್ದಾಳೆ ಎಂದು ಖುಷಿ ಹಂಚಿಕೊಂಡಿದ್ದಾರೆ.

ಸದ್ಯ ಶ್ರುತಿ ಹರಿಹರನ್ ಹೆಡ್​ಬುಷ್ ಮತ್ತು ಸ್ಟ್ರಾಬೆರಿ​ ಸಿನಿಮಾದಲ್ಲಿ ​ ನಟಿಸುತ್ತಿದ್ದು,ತಮಿಳಿನ ವಾದಮ್ ಎಂಬ ವೆಬ್ ಸೀರಿಸ್‌ನಲ್ಲೂ ಅಭಿನಯಿಸುತ್ತಿದ್ದಾರೆ. ಮಲಯಾಳಂನ ಹೆಸರಿಡದ ಒಂದು ಪ್ರಾಜೆಕ್ಟ್ ಕೂಡ ಶ್ರುತಿ ಕೈಯಲ್ಲಿದೆ. ಹೀಗೆ ಸಿನಿಮಾ ಮತ್ತು ಕುಟುಂಬವನ್ನು ಸಮಬಲವಾಗಿ ತೂಗಿಸಿಕೊಂಡು ಹೋಗುತ್ತಿರೊ ಶೃತಿ ಹರಿಹರನ್ ದಂಪತಿಗೆ ಫಿಲ್ಮಬೀಟ್ ಕನ್ನಡ ತಂಡದಿಂದಲೂ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು.

More from Filmibeat

English summary
Actress Shruti Hariharan celebrating her Wedding Anniversary shared some beautiful photos on the social media today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X