Shruti Haasan : ಕನ್ನಡ ಸಿನಿಮಾ ಮಾಡಲ್ಲ ಅಂದಿದ್ದ ನಟಿಯಿಂದಲೇ 'ಕೆಜಿಎಫ್ 2' ಟ್ರೈಲರ್ ಬಗ್ಗೆ ಗುಣಗಾನ!

ದಕ್ಷಿಣ ಭಾರತದ ಚಿತ್ರರಂಗದಲ್ಲಿ ನಟಿ ಶ್ರುತಿ ಹಾಸನ್‌ ಸಿಕ್ಕಾಪಟ್ಟೆ ಫೇಮಸ್‌. ತೆಲುಗು ಮತ್ತು ತಮಿಳಿನಲ್ಲಿ ಈ ನಟಿಗೆ ಭಾರಿ ಬೇಡಿಕೆ ಇದೆ. ಅತ್ತ ಬಾಲಿವುಡ್‌ ಮಂದಿಗೂ ಅವರು ಪರಿಚಿತ.

ಶ್ರುತಿ ಹಾಸನ್ ಕನ್ನಡ ಚಿತ್ರರಂಗದ ಕಡೆಗೆ ಮಾತ್ರ ಮುಖ ಮಾಡಿಲ್ಲ. ಯಾಕೆ ಎಂಬ ಪ್ರಶ್ನೆ ಸಿನಿಪ್ರಿಯರ ಮನದಲ್ಲಿ ಮೂಡುವುದು ಸಹಜ. ಹಲವು ವರ್ಷಗಳ ಹಿಂದೆ ಶೃತಿ ಹಾಸನ್ ಕನ್ನಡ ಸಿನಿಮಾದ ಬಗ್ಗೆ ಮಾತನಾಡಿ ಟೀಕೆಗೆ ಗುರಿಯಾಗಿದ್ದರು.

ಅಂದು ಕನ್ನಡ ಸಿನಿಮಾದಲ್ಲಿ ನಟಿಸುವ ಬಗ್ಗೆ ಕೇವಲವಾಗಿ ಮಾತನಾಡಿದ್ದ ಶ್ರುತಿ ಹಾಸನ್ ಇಂದು ಕನ್ನಡದ್ದೇ ಸಿನಿಮಾವನ್ನು ನೋಡಲು ಕಾತುರರಾಗಿದ್ದಾರಂತೆ. ಅದು ಕೂಡ ಯಶ್ ಅಭಿನಯದ 'ಕೆಜಿಎಫ್ 2' ಸಿನಿಮಾವನ್ನು ನೋಡಬೇಕಂತೆ. ಈ ಬಗ್ಗೆ ಮತ್ತಷ್ಟು ಡೀಟೆಲ್ಸ್ ತಿಳಿಯಲು ಮುಂದೆ ಓದಿ.

Recommended Video

KGF2| ಕನ್ನಡದ ಬಗ್ಗೆ ಕೀಳಾಗಿ ಮಾತನಾಡಿದ್ದ ನಟಿಗೆ ಇದ್ದಕ್ಕಿದ್ದಂತೆ ಕನ್ನಡದ ಮೇಲೆ ಸಿಕ್ಕಾಪಟ್ಟೆ ಲವ್ |Shruti Hassan

 2017ರ ಈ ಟ್ವೀಟ್ ಭಾರಿ ಚರ್ಚೆಯಾಗಿತ್ತು

2017ರ ಈ ಟ್ವೀಟ್ ಭಾರಿ ಚರ್ಚೆಯಾಗಿತ್ತು

ನಿಮ್ಮೆಲ್ಲರಿಗೂ ನೆನಪಿರಬಹುದು ಈ ಹಿಂದೆ ಅಂದರೇ 2017ರಲ್ಲಿ ಶ್ರುತಿ ಹಾಸನ್ 'ಭವಿಷ್ಯದಲ್ಲಿ ಯಾವುದೇ ಕನ್ನಡ ಸಿನಿಮಾ ಮಾಡುತ್ತಿಲ್ಲ' ಎಂದು ಹೇಳಿದ್ದರು. 2017ರ ಈ ಟ್ವೀಟ್ ಭಾರೀ ಚರ್ಚೆಯಾಗಿತ್ತು. ಈ ಹೇಳಿಕೆ ಸಾಕಷ್ಟು ಟ್ರೋಲ್ ಕೂಡ ಆಗಿತ್ತು. ಈ ಬಗ್ಗೆ ಮಾತನಾಡಿದ್ದ ಶ್ರುತಿ 'ಆ ಟ್ವೀಟ್‌ ಅನ್ನು ಅಪಾರ್ಥವಾಗಿ ತಿಳಿದುಕೊಳ್ಳಲಾಗಿತ್ತು. ನನಗೆ ಎಲ್ಲ ಚಿತ್ರರಂಗ, ಸೃಜನಾತ್ಮಕ ವ್ಯಕ್ತಿಗಳ ಮೇಲೂ ತುಂಬ ಗೌರವವಿದೆ. ಸಕಾರಾತ್ಮಕ ಹಾದಿಯಲ್ಲಿ ನಾನು ನಡೆಯಲು ಬಯಸುತ್ತೇನೆ' ಎಂದು ಶ್ರುತಿ ಹೇಳಿದ್ದರು.

ಕನ್ನಡಿಗರನ್ನು ಕೆರಳಿಸಿತ್ತು ಹೇಳಿಕೆ

ಈ ಟ್ವೀಟ್‌ ಬಳಿಕ ಶ್ರುತಿ ಹಾಸನ್ ಬಗ್ಗೆ ಸಾಕಷ್ಟು ಟ್ರೋಲ್‌ಗಳು ಆದವೂ. ತಂದೆ ಕಮಲ್ ಹಾಸನ್ ಕನ್ನಡ ಸಿನಿಮಾದ ಬಗ್ಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರ. ಆದರೆ ಕಮಲ್ ಹಾಸನ್ ಮಗಳು ಈ ರೀತಿ ಮಾತನಾಡಿರುವುದು ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿತ್ತು. ತದನಂತರ ಮೌನ ವಾಗಿದ್ದ ಶ್ರುತಿ ಹಾಸನ್ ಇದೀಗ ಕನ್ನಡ ಸಿನಿಮಾದ ಬಗ್ಗೆನೇ ಮಾತನಾಡಿದ್ದಾರೆ. ಹೌದು 'ಕೆಜಿಎಫ್ 2' ಸಿನಿಮಾದ ಟ್ರೈಲರ್ ನೋಡಿ ಈ ಬಗ್ಗೆ ಬರೆದುಕೊಂಡಿರುವ ಶ್ರುತಿ ಹಾಸನ್ "ಇದು ಅದ್ಭುತವಾದ ಚಮತ್ಕಾರ!!!! ನನಗೆ ಇನ್ನೂ ಕಾಯಲು ಸಾಧ್ಯವಿಲ್ಲ !!! 'ಕೆಜಿಎಫ್ 2' ನೋಡಲು ಕಾತುರಳಾಗಿದ್ದೇನೆ" ಎಂದಿದ್ದಾರೆ.

ಟ್ರೈಲರ್ ಬಗ್ಗೆ ಟ್ವೀಟ್ ಮಾಡಿ ಸುಮ್ಮನಾದ ನಟಿ

ಇದಕ್ಕೆ ಹಲವು ಕನ್ನಡಿಗರು ಕಮೆಂಟ್ ಮಾಡುತ್ತಿದ್ದು, ಅಂದು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಲ್ಲಾ ಎಂದಿದ್ರಿ. ಆದರೆ ಈಗ ನಿಮಗೆ ಅರ್ಥವಾಯಿತಾ ಕನ್ನಡ ಸಿನಿಮಾದ ಪವರ್ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಮತ್ತೆ ಕೆಲವರು ಶ್ರುತಿ ಟ್ವೀಟ್‌ಗೆ ರೀ-ಟ್ವೀಟ್ ಮಾಡಿದ್ದು, ಇದು ಕನ್ನಡಿಗರ ಪವರ್, ಈಗ ನಿಮಗೆ ತಿಳಿದಿರಬೇಕು. ಕನ್ನಡ ಸಿನಿಮಾ ಇಂಡಸ್ಟ್ರಿ ಹೇಗಿದೆ ಅಂತ ಎಂದು ಖಾರವಾಗೆ ಟ್ವೀಟ್ ಮಾಡುತ್ತಿದ್ದಾರೆ. ಇದ್ಯಾವುದಕ್ಕೂ ಶ್ರುತಿ ಹಾಸನ್ ಪ್ರತಿಕ್ರಿಯಿಸಲು ಹೋಗಿಲ್ಲ.

ನಾನು ಈ ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂದಿದ್ದ ಶ್ರುತಿ ಹಾಸನ್

ನಾನು ಈ ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂದಿದ್ದ ಶ್ರುತಿ ಹಾಸನ್

ಶ್ರುತಿ ಹಾಸನ್ ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಅಭಿನಯದ 'ಪೊಗರು' ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಸುದ್ದಿ ಆಗಿತ್ತು. ಆಗಲೂ ಟ್ವೀಟ್ ಮಾಡಿ "ನಾನು ಈ ಸಿನಿಮಾದಲ್ಲಿ ನಟಿಸುತ್ತಿಲ್ಲ. ಈ ಬಗ್ಗೆ ನಾನು ಯಾರೊಂದಿಗೂ ಚರ್ಚಿಸಿಲ್ಲ ಎಂದು ಟ್ವೀಟ್ ಮಾಡಿದ್ರು". ಇದಕ್ಕೆ ಪ್ರತಿಕ್ರಿಯಿಸಿದ್ದ ನಟ ಜಗ್ಗೇಶ್ ಕೂಡ "ನಮ್ಮ ಕನ್ನಡದಲ್ಲಿ ನಟಿಯರು ಇಲ್ಲವೇ. ಇಂತಹ ನಟಿಯರ ಹಿಂದೆ ಹೋಗುವವರಿಗೆ ಬುದ್ಧಿ ಇಲ್ಲ. ನಮ್ಮ ಕಾಲೇಜು ಹೆಣ್ಣು ಮಕ್ಕಳ ಮುಂದೆ ಇವರುಗಳು ಯಾವ ಲೆಕ್ಕಕ್ಕೂ ಇಲ್ಲ. ಮೇಕಪ್ ತೆಗೆದು ಬಂದರೆ ನಮ್ಮ ಯುವಕರು ಮಾರುದ್ದ ಓಡುತ್ತಾರೆ" ಎಂದಿದ್ದರು.

ಆಯ್ಕೆ ಆದಾಗಲೂ ಕೊಂಚ ಅಸಮಾಧಾನ

ಆಯ್ಕೆ ಆದಾಗಲೂ ಕೊಂಚ ಅಸಮಾಧಾನ

ಇದೀಗ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾದಲ್ಲಿ ಶೃತಿ ಹಾಸನ್ ನಾಯಕಿಯಾಗಿ ಆಯ್ಕೆ ಆದಾಗ ಆಗಲೂ ಕೊಂಚ ಅಸಮಾಧಾನ ಉಂಟಾಗಿತ್ತು. ಆಗ ಶ್ರುತಿ ಹಾಸನ್ "ಸಲಾರ್ ಸಿನಿಮಾ ಮಾಡಲು ತುಂಬ ಖುಷಿಯಾಗುತ್ತಿದೆ. ಕನ್ನಡ ಚಿತ್ರರಂಗದ ಜೊತೆ ಮತ್ತೆ ಕೆಲಸ ಮಾಡಲು ತುಂಬ ಸಂತಸವಾಗುತ್ತಿದೆ. ಟೀಂ ತುಂಬ ಚೆನ್ನಾಗಿದೆ. ತುಂಬ ಚೆನ್ನಾಗಿ ಸಮಯ ಕಳೆಯುತ್ತಿದ್ದೇನೆ. ಈ ಹಿಂದೆ ನನಗೆ ಸಾಕಷ್ಟು ಕನ್ನಡ ಸಿನಿಮಾಗಳು ಬಂದರೂ ಕೂಡ ಡೇಟ್ ಸಮಸ್ಯೆಯಿಂದ ಕೆಲಸ ಮಾಡಲು ಆಗಿರಲಿಲ್ಲ. ಸಲಾರ್ ಸಿನಿಮಾ ಪಾತ್ರಗಳು, ತಾರಾಗಣ, ತಂತ್ರಜ್ಞರು ಎಲ್ಲವೂ ಈ ಸಿನಿಮಾದ ಭಾಗವಾಗುವಂತೆ ಮಾಡಿತು" ಎಂದು ಶ್ರುತಿ ಹಾಸನ್ ಹೇಳಿದ್ದರು. ಒಂದು ಸಮಯದಲ್ಲಿ ಕನ್ನಡ ಸಿನಿಮಾದ ಬಗ್ಗೆ ಅಸಡ್ಡೆ ತೋರಿದ್ದ ನಟಿ ಶ್ರುತಿ ಹಾಸನ್ ಈಗ ಕನ್ನಡದ ಸಿನಿಮಾ 'ಕೆಜಿಎಫ್ 2' ಟ್ರೈಲರ್ ಬಗ್ಗೆ ಮಾತನಾಡಿರೋದು ಹಲವರಿಗೆ ಅಚ್ಚರಿ ಉಂಟುಮಾಡಿದೆ.

More from Filmibeat

English summary
Actress Shruti Hassan interesting tweet about kgf chapter 2 movie. Here is more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X