ಕುಡಿತದ ಚಟಕ್ಕೆ ಬಲಿಯಾಗಿದ್ರಂತೆ ದಕ್ಷಿಣ ಭಾರತದ ಈ ಖ್ಯಾತ ನಟಿ

Recommended Video

Shruti Hassan Won Alcohol addiction You can too | FILMIBEAT KANNADA

ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ, ಭಾರತೀಯ ಚಿತ್ರರಂಗದ ಖ್ಯಾತ ನಟ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಕುಡಿತದ ಚಟಕ್ಕೆ ಬಲಿಯಾಗಿದ್ರಂತೆ. ಈ ಬಗ್ಗೆ ಸ್ವತ ಶ್ರುತಿ ಹಾಸನ್ ಬಹಿರಂಗ ಪಡಿಸಿದ್ದಾರೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಶ್ರುತಿ ಮದ್ಯಪಾನ ವ್ಯಸನಿಯಾಗಿದ್ದೆ ಎನ್ನುವ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ.

ಕಳೆದ ಮೂರು ವರ್ಷಗಳಿಂದ ಶ್ರುತಿ ಸಿನಿಮಾ ರಂಗದಿಂದ ದೂರ ಉಳಿದ್ದರು. 2016ರಲ್ಲಿ ಶ್ರುತಿ ಅಭಿನಯದ ಕೊನೆಯ ಸಿನಿಮಾ ರಿಲೀಸ್ ಆಗಿತ್ತು. ಆ ನಂತರ ಕಮಲ್ ಪುತ್ರಿಯ ಯಾವ ಸಿನಿಮಾಗಳು ತೆರೆಗೆ ಬಂದಿಲ್ಲ. ಶ್ರುತಿ ಹಾಸನ್ ಸಿನಿಮಾರಂಗದಿಂದ ದೂರ ಸರಿದರು ಎನ್ನುವಷ್ಟೊತ್ತಿಗೆ ಮತ್ತೆ ವಾಪಸ್ ಆಗಿದ್ದಾರೆ. ಚಿತ್ರರಂಗದಿಂದ ದೂರ ಸರಿದ ಅಸಲಿ ಕಾರಣವೇನು ಎನ್ನುವುದನ್ನು ಶ್ರುತಿ ಬಿಚ್ಚಿಟ್ಟಿದ್ದಾರೆ.

"ನಾನು ವಿಸ್ಕಿ ವ್ಯಸನಿಯಾಗಿದ್ದೆ. ಚಿತ್ರರಂಗದಿಂದ ತುಂಬಾ ಸಮಯ ಬ್ರೇಕ್ ತೆಗೆದುಕೊಂಡಿದ್ದೆ. ಆದ್ರೀಗ ಕುಡಿಯುವುದನ್ನು ಬಿಟ್ಟಿದ್ದೀನಿ. ಆದ್ರೆ ತುಂಬ ಕುಡಿತದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದೆ. ಆದ್ರೆ ಈ ಬಗ್ಗೆ ನಾನು ಎಲ್ಲಿಯೂ ಹೇಳಿಕೊಂಡಿಲ್ಲ. ಇದು ನನ್ನ ವಯಕ್ತಿಕ ವಿಚಾರ ಅಂತ ಎಲ್ಲಿಯೂ ಹೇಳಿಕೊಂಡಿಲ್ಲ. ಆದ್ರೀಗ ಸುಧಾರಿಸಿಕೊಳ್ಳುತ್ತಿದ್ದೇನೆ" ಎಂದು ಬೋಲ್ಡ್ ಆಗಿ ಹೇಳಿಕೊಂಡಿದ್ದಾರೆ.

Actress Shruti Hassan Suffered From Alcohol Addiction From Two Years

ನಟಿ ಶ್ರುತಿ ಹಾಸನ್ ಕಳೆದ ಕೆಲವು ವರ್ಷಗಳಿಂದ ಬ್ರಿಟೀಷ್ ನಟ ಮೈಕೆಲ್ ಕೋರ್ಸಲ್ ಲವ್ ರಿಲೇಶನ್ ಶಿಪ್ ನಲ್ಲಿದ್ದರು. ಆದ್ರೆ ಕಳೆದ ಕೆಲವು ದಿನಗಳ ಹಿಂದೆ ಶ್ರುತಿ ಮತ್ತು ಮೈಕೆಲ್ ಬ್ರೇಕಪ್ ವಿಚಾರ ಬಾರಿ ಸದ್ದು ಮಾಡಿತ್ತು. ಅಲ್ಲದೆ ಶ್ರುತಿ ಮಾಜಿ ಬಾಯ್ ಫ್ರೆಂಡ್ ಮೈಕೆಲ್ ಇನ್ಸ್ಟಾಗ್ರಾಮ್ ನಲ್ಲಿ ಶ್ರುತಿ ಜೊತೆಗಿರುವ ಫೋಟೋ ಶೇರ್ ಮಾಡಿ "ನೀನು ಯಾವಾಗಲು ನನ್ನ ಅತ್ಯುತ್ತಮ ಸಂಗಾತಿಯಾಗುತ್ತೀಯಾ. ಅವಳನ್ನು ಸ್ನೇಹಿತೆಯಾಗಿ ಪಡೆಯಲು ತುಂಬಾ ಕೃತಜ್ಞನಾಗಿರುತ್ತೇನೆ. ಲವ್ ಯೂ" ಎಂದು ಬರೆದುಕೊಂಡಿದ್ರು. ಇದು ಇಬ್ಬರ ಬ್ರೇಕ್ ಅಪ್ ವಿಚಾರಕ್ಕೆ ಮತ್ತಷ್ಟು ಪುಷ್ಠಿ ನೀಡಿತ್ತು.

More from Filmibeat

English summary
Kollywood actress Shruti Hassan suffered from Alcohol addiction from two years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X