»   » ಶ್ರುತಿ ಮಾಜಿ ಪತಿಯ ಮನದಾಳದ ಮಾತುಗಳು

ಶ್ರುತಿ ಮಾಜಿ ಪತಿಯ ಮನದಾಳದ ಮಾತುಗಳು

Posted By:
Subscribe to Filmibeat Kannada
<ul id="pagination-digg"><li class="next"><a href="/news/no-interest-to-leave-with-manjula-chandrachud-077901.html">Next »</a></li></ul>

ತಮ್ಮ ಮೊದಲನೇ ಮದುವೆ ಬಗ್ಗೆ ನಾನು ಶ್ರುತಿ ಅವರಿಗೆ ತಿಳಿಸಿರಲಿಲ್ಲ. ಈ ಬಗ್ಗೆ ಸಾಕಷ್ಟು ಸಲ ಹೇಳಿದ್ದೇನೆ. ಎಲ್ಲವನ್ನೂ ಮುಗಿಸಿಕೊಂಡು ನಾನು ಶ್ರುತಿ ಅವರನ್ನು ಮದುವೆಯಾಗಬೇಕಿತ್ತು. ಮಂಜುಳಾ ಅವರಿಂದ ಏನೂ ತೊಂದರೆಯಾಗುವುದಿಲ್ಲ ಎಂಬ ಕಾರಣಕ್ಕೆ ದುಡುಕಿದೆ ಅಂತ ಅನ್ನಿಸುತ್ತದೆ.

ಈಗ ಶ್ರುತಿ ಜೊತೆಗಿನ ಮದುವೆಯನ್ನು ನ್ಯಾಯಾಲಯ ಅಸಿಂಧುಗೊಳಿಸಿದೆ. ಮುಂದೆ ಮಂಜುಳಾ ಜೊತೆ ಇರಬೇಕೋ ಬೇಡವೋ ಎಂಬ ಬಗ್ಗೆ ನಾನು ಅಗತ್ಯಕ್ಕಿಂತ ಹೆಚ್ಚಾಗಿ ಮಾತನಾಡಿದ್ದೇನೆ. ಮಂಜುಳಾ ಜೊತೆ ಇರಬೇಕು ಎಂಬ ಪ್ರಶ್ನೆ ಇಲ್ಲ ಇಲ್ಲಿ. ಮಾನಸಿಕವಾಗಿ ಅದು ಮುಗಿದ ಕಥೆ.

ಇನ್ನೊಂದು ಮುಖ್ಯ ವಿಚಾರ ಅಂದರೆ ಯಾವ ನ್ಯಾಯಾಲಯವೂ ಒಬ್ಬರ ಹೃದಯದಿಂದ ಒಬ್ಬರನ್ನು ತೆಗೆಯಲು ಸಾಧ್ಯವಿಲ್ಲ. ಈಗ ಮಂಜುಳಾ ಅವರು ಹೋರಾಟ ಮಾಡುತ್ತಿದ್ದಾರೆ. ಅದಕ್ಕೆ ನಾನು ಪ್ರತಿಕ್ರಿಯೆ ನೀಡಬೇಕಾಗಿತ್ತು, ನ್ಯಾಯಾಲಯದ ಆದೇಶಕ್ಕೆ ತಲೆಬಾಗಬೇಕಾಗಿತ್ತು, ಕೋರ್ಟ್ ಗೆ ಹೋಗಬೇಕಾಗಿತ್ತು ಹೋಗಿದ್ದೇನೆ.

Actress Shruti hubby Chandrachud Talks a blue streak

ಇನ್ನು ನನಗೂ ಶ್ರುತಿ ಅವರಿಗೂ ಏನೂ ಒಟ್ಟಾರೆ ಅಭಿಪ್ರಾಯ ಮೂಡಿತೋ ಅದನ್ನು ಕೋರ್ಟ್ ಗೆ ಹೇಳಬೇಕಾಗಿತ್ತು ಹೇಳಿದ್ದೇವೆ. ಮಂಜುಳಾ ಜೊತೆಗೆ ಬಾಳ್ವೆ ನಡೆಸುವ ಪ್ರಶ್ನೆಯೇ ಇಲ್ಲ. ಅವರದು ಒಂದಲ್ಲ ಇನ್ನೂ ಎರಡು ಕೇಸ್ ಗಳಿವೆ. ಎಲ್ಲಾ ಪ್ರಕರಣಗಳಲ್ಲೂ ಹೋರಾಟ ಮಾಡುತ್ತೇನೆ.

ಕೋರ್ಟ್ ಗೆ ನನ್ನನ್ನು ಯಾವಾಗ ಕರೆದರೂ ಹೋಗುತ್ತೇನೆ. ಕೋರ್ಟ್ ನಲ್ಲೂ ನನ್ನ ನಿಲುವು ಅತ್ಯಂತ ಸ್ಪಷ್ಟ. ಮಂಜುಳಾ ಜೊತೆಗಿನ ನನ್ನ ವೈವಾಹಿಕ ಸಂಬಂಧ ಸರಿಹೋಗುವ ಯಾವುದೇ ಸಾಧ್ಯತೆಗಳು ನನ್ನಿಂದ ಇಲ್ಲ. ಆ ಪ್ರಯತ್ನಗಳೇ ಇಲ್ಲ. ಒಂದು ವೇಳೆ ನಾನು ಆ ಪ್ರಯತ್ನ ಮಾಡಿದ್ದರೆ ಶ್ರುತಿ ಅವರನ್ನು ಮದುವೆಯಾಗುತ್ತಿರಲಿಲ್ಲ.

ಈ ರೀತಿಯ ವಾದ ವಿವಾದಗಳಿಗೂ ಕಾರಣವಾಗುತ್ತಿರಲಿಲ್ಲ. ಅವರ ಜೊತೆ ಮತ್ತೆ ಬಾಳ್ವೆ ನಡೆಸುವ ಮಾತೇ ಇಲ್ಲ. ಹಾಗೆಯೇ ಶ್ರುತಿ ಮತ್ತು ನನ್ನ ಸಂಬಂಧ ಮುಂದೆ ಹೇಗಿರುತ್ತದೆ ಎಂದರೆ... ಒಬ್ಬರ ಹೃದಯದಿಂದ ಒಬ್ಬರನ್ನು ತೆಗೆಯಲು ನ್ಯಾಯಾಲಯ ಹೇಳಕ್ಕಾಗಲ್ಲ.

<ul id="pagination-digg"><li class="next"><a href="/news/no-interest-to-leave-with-manjula-chandrachud-077901.html">Next »</a></li></ul>
English summary
Chandrachud and actress Shruthi marital life faced trouble from Chandrachud's first wife Manjula, who claimed that she and her husband were not divorced at the time of his second wedding. Chandrachud reacts reacts on courts judgement, his future fast present. Here is the synopsis of his chat with TV9 Kannada.
Please Wait while comments are loading...