ನಟಿ ಶ್ರುತಿಗೆ ಇನ್ನೊಂದು ವಾರದಲ್ಲಿ ಶಸ್ತ್ರಚಿಕಿತ್ಸೆ

ಈ ಎಂಟು ತಿಂಗಳಲ್ಲಿ ಎರಡು ಸರ್ಜರಿ ಆಗಿದೆ. ಇನ್ನೊಂದು ವಾರದಲ್ಲಿ ಮತ್ತೊಂದು ಸರ್ಜರಿ ಮಾಡಿಸಿಕೊಳ್ಳಬೇಕು. ವೈದ್ಯರು ಒತ್ತಾಯ ಮಾಡುತ್ತಿದ್ದಾರೆ ಸೋಮವಾರವೇ ಮಾಡಿಸಿಕೊಳ್ಳಿ ಎಂದು. ಅಯ್ಯೋ ಈಗಲೇ ಮಾಧ್ಯಮಗಳಲ್ಲಿ ಏನೇನೋ ಸುದ್ದಿ ಆಗುತ್ತಿದೆ. ಈಗ ಸರ್ಜರಿ ಅಂದರೆ ಇನ್ನಷ್ಟು ಗೊಂದಲ ಏರ್ಪಡುತ್ತದೆ. ಹಾಗಾಗಿ ಈಗ ಬೇಡ. ಚೆನ್ನೈನಲ್ಲಿ ಒಂದು ಶೂಟಿಂಗ್ ಇದೆ. ಅದು ಮುಗಿಸಿಕೊಂಡು ಬಂದ ಬಳಿಕ ಸರ್ಜರಿ ಮಾಡಿಸಿಕೊಳ್ಳುತ್ತೇನೆ ಎಂದಿದ್ದೇನೆ.
ಬಹುಶಃ ಆಗ ಸರ್ಜರಿಗೆ ಬಂದಾಗ ಮತ್ತೆ ಈ ರೀತಿಯ ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಅದು ಒಂದು ಸ್ಮಾಲ್ ಸರ್ಜರಿ. (ಎಂದಷ್ಟೇ ಹೇಳಿದರು. ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲಿಲ್ಲ) ಆಗ ದಯವಿಟ್ಟು ಗೊಂದಲ ಮೂಡಿಸಬೇಡಿ. ನನ್ನ ಇತ್ತೀಚಿನ ಎಲ್ಲಾ ಹಗರಣಗಳು, ಮಾನಸಿಕ ಒತ್ತಡಗಳ ಕಾರಣ ಆತ್ಮಹತ್ಯೆ ವದಂತಿ ಹಬ್ಬಿರುವ ಸಾಧ್ಯತೆಗಳಿವೆ.
ಈ ನೋವನ್ನು ಪರಿಸ್ಥಿತಿಯನ್ನು ಅವರು ನಿಭಾಯಿಸಲಿಕ್ಕೆ ಆಗಲಿಲ್ಲವೇನೋ ಎಂದು ಜನ ಯೋಚಿಸಿರಬಹುದು. ನನ್ನ ಮೇಲಿನ ಕಾಳಜಿಗೆ ಅವರು ಆ ರೀತಿ ಭಾವಿಸಿರಬಹುದು. ಈ ರೀತಿ ವದಂತಿ ಹಬ್ಬಿರುವ ಬಗ್ಗೆ ನನಗೆ ಖುಷಿ ಇದೆ. ಯಾಕೆಂದರೆ ಜನ ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ಇದೂ ಒಂದು ನಿದರ್ಶನ.
ಇಡೀ ಚಿತ್ರರಂಗ ನನ್ನ ಅಪ್ಪ ಅಮ್ಮನ ಜೊತೆ ಮಾತನಾಡಿದೆ. ಎಲ್ಲರಿಗೂ ಗೊತ್ತು ನಾನು ಚೆನ್ನಾಗಿದ್ದೀನಿ ಎಂದು. ಈಗ ಡಿಸ್ಚಾರ್ಜ್ ಆಗುತ್ತಿದ್ದೇನೆ. ಮನೆಗೆ ಹೋದ ಬಳಿಕ ಎಲ್ಲರೊಂದಿಗೂ ಮಾತನಾಡುತ್ತೇನೆ ಎಂದು ಹೇಳಿ ತಮ್ಮ ಮಾತು ಮುಗಿಸಿದರು. ಸುದ್ದಿಗೋಷ್ಠಿಯಲ್ಲಿ ಪುಣ್ಯ ಆಸ್ಪತ್ರೆಯ ವೈದ್ಯರಾದ ಡಾ.ಪುಣ್ಯವತಿ ನಾಗರಾಜ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಒಂದು ಪ್ರಶ್ನೆಯೂ ಮಾಧ್ಯಮ ಮಿತ್ರರಲ್ಲಿ ಮೂಡಿತು. ಅದೇನೆಂದರೆ ಸುದ್ದಿಗೋಷ್ಠಿಯಲ್ಲಿ ಶ್ರುತಿ ಅವರ ಪತಿ ಚಂದ್ರಚೂಡ್ ಅವರ ಅನುಪಸ್ಥಿತಿ. ಆದರೆ ಅವರು ಈಗಾಗಲೆ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ. ಆದಕಾರಣ ಅವರನ್ನು ಮತ್ತೆ ಆಘಾತಕ್ಕೆ ಒಳಪಡಿಸುವ ಪ್ರಶ್ನೆಗಳನ್ನು ಕೇಳಬೇಡಿ ಎಂದು ವೈದ್ಯರು ಷರತ್ತಿನ ಕಾರಣ ಹೆಚ್ಚು ಪ್ರಶ್ನೆಗಳಿಗೆ ಅಲ್ಲಿ ಆಸ್ಪದವಿರಲಿಲ್ಲ.


Click it and Unblock the Notifications











