ಮದುವೆ ಆದ ವಾರಕ್ಕೆ ಶೂಟಿಂಗ್‌ಗೆ ಮರಳಿದ ಶುಭಾ ಪೂಂಜಾ!

ಕನ್ನಡದ ನಟಿ ಶುಭಾ ಪೂಂಜಾ ಬಿಗ್ ಬಾಸ್‌ ಬಳಿಕ ಮತ್ತಷ್ಟು ಅಭಿಮಾನಿಗಳಿಗೆ ಹತ್ತಿರ ಆಗಿದ್ದಾರೆ. ಇತ್ತೀಚೆಗೆ ಮದುವೆ ಸುದ್ದಿ ಮೂಲಕ ಶುಭಾ ಸುದ್ದಿ ಆಗಿದ್ದರು. ಶುಭಾ ಪೂಂಜಾ ಅವರು ಮದುವೆ ಆಗಿದ್ದಾರೆ. ಈ ಹಿಂದೆ ತಮ್ಮ ಪ್ರಿಯಕರನ ಬಗ್ಗೆ ಶುಭಾ ಪೂಂಜಾ ಹಲವು ಬಾರಿ ಹೇಳಿ ಕೊಂಡಿದರು. ಮದುವೆ ಬಳಿಕ ಹೆಚ್ಚು ಸಮಯ ತೆಗೆದುಕೊಳ್ಳದೆ ಶೂಟಿಂಗ್‌ಗೆ ಮರಳಿದ್ದಾರೆ.

Recommended Video

ಶುಭಾ ಪೂಂಜಾ ಸಿಂಪಲ್ ಆಗಿ ಆಡಂಬರ ಇಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

'ಚಿನ್ನಿ ಬಾಂಬ್' ಎಂದು ತಮ್ಮ ಪತಿಯನ್ನು ಶುಭಾ ಪ್ರೀತಿಯಿಂದ ಕರೆಯುತ್ತಿದ್ದರು. ಬಿಗ್‌ ಕಾರ್ಯಕ್ರಮದಲ್ಲಿ ಇರುವಾಗಲೇ ಅವರ ಹೆಸರನ್ನು ಶುಭಾ ಪೂಂಜಾ ಜಪ ಮಾಡುತ್ತಿದ್ದರು. ಶುಭಾ ಮದುವೆ ಆಗುವ ಹುಡುಗನ ಬಗ್ಗೆ ಮೊದಲೇ ಹೇಳಿ ಕೊಂಡಿದ್ದರು. ಇತ್ತೀಚೆಗೆ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಶುಭಾ ಪೂಂಜಾ ಸರಳವಾಗಿ ಮದುವೆ ಆಗಿದ್ದಾರೆ. ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ನಡೆದಿದೆ. ಈ ವಿಚಾರವನ್ನು ಶುಭಾ ಪೂಂಜಾ ಮದುವೆ ಫೋಟೊ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈಗ ಶೂಟಿಂಗ್‌ಗೆ ಮರಳಿರುವ ವಿಚಾರವನ್ನು ಕೂಡ ಸಾಮಾಜಿಕ ಜಾತಾಣದಲ್ಲಿ ಹಂಚಿಕೊಂಡಿದ್ದಾರೆ.

ಅಂಬುಜಾ ಚಿತ್ರದ ಶೂಟಿಂಗ್‌ಗೆ ಮರಳಿದ ಶುಭಾ ಪೂಂಜಾ!

ಮದುವೆ ಆದ ಒಂದೇ ವಾರಕ್ಕೆ ನಟಿ ಶುಭಾ ಪೂಂಜಾ ಚಿತ್ರೀಕರಣಕ್ಕೆ ಮರಳಿದ್ದಾರೆ. ಶೂಟಿಂಗ್‌ನಲ್ಲಿ ಭಾಗಿ ಆಗಿದ್ದಾರೆ. ಶುಭಾ ಪೂಂಜಾ ಸದ್ಯ ಅಂಬುಜಾ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಶೂಟಿಂಗ್‌ ಸೆಟ್‌ನಲ್ಲಿ ಇರುವ ಫೋಟೊವನ್ನು ಶುಭಾ ಪೂಂಜಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಶೂಟಿಂಗ್‌ಗೆ ಮರಳಿದ್ದೇನೆ ಎಂದು ಬರೆದು ಕೊಂಡಿದ್ದಾರೆ. ಈ ಚಿತ್ರದಲ್ಲಿ ಶುಭಾ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ವಾರದ ಹಿಂದೆ ಮದುವೆ ಆಗಿದ್ದ ಶುಭಾ ಪೂಂಜಾ!

ವಾರದ ಹಿಂದೆ ಮದುವೆ ಆಗಿದ್ದ ಶುಭಾ ಪೂಂಜಾ!

ಶುಭಾ ಪೂಂಜಾ ಕೆಳೆದ ವಾರ ಸುಮಂತ್ ಮಹಾಬಲ ಅವರ ಜೊತೆಗೆ ಮದುವೆ ಆಗಿದ್ದಾರೆ. ಮದುವೆಯ ಬಳಿಕ ಶುಭಾ ಪೂಂಜಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮದುವೆ ಆದ ವಿಚಾರವನ್ನು ಹಂಚಿಕೊಂಡರು. "ಶುಭಾ ಪೂಂಜಾ: ಪ್ರೀತಿಯ ಎಲ್ಲರಿಗೂ ನಮಸ್ಕಾರಗಳು. ಇಂದು ನಾನು ಮತ್ತು ಸುಮಂತ್ ಮಹಾಬಲ ಗುರು ಹಿರಿಯರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಊರು ಮಜಲಬೆಟ್ಟು ಬೀಡುವಿನಲ್ಲಿ ಸರಳ ವಿವಾಹವಾದೆವು. ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗಳು ನಮ್ಮ ಮೇಲಿರಲಿ" ಎಂದು ಪೋಸ್ಟ್‌ನಲ್ಲಿ ಶುಭಾ ಬರೆದು ಕೊಂಡಿದ್ದರು.

ಅಜ್ಜಿ ಮನೆಯಲ್ಲಿ ಸರಳವಾಗಿ ಮದುವೆ ಆದ ಶುಭಾ ಪೂಂಜಾ!

ಅಜ್ಜಿ ಮನೆಯಲ್ಲಿ ಸರಳವಾಗಿ ಮದುವೆ ಆದ ಶುಭಾ ಪೂಂಜಾ!

ಅಜ್ಜಿ ಮನೆಯಲ್ಲಿ ಮದುವೆ ಆಗಬೇಕು ಎನ್ನುವುದು ಶುಭಾ ಪೂಂಜಾ ಅವರ ಬಹು ದಿನಗಳ ಕನಸಾಗಿತ್ತು. ಅಂತೆಯೇ ಅವರು ಮನೆಯಲ್ಲಿ ಮದುವೆ ಆದರು. ಈ ಬಗ್ಗೆ ಶುಭಾ ಮಾತನಾಡಿದ್ದರು. "ಇದು ನನ್ನ ಊರು, ಇದು ಅಜ್ಜಿ ಮನೆ, ನಾನು ಹುಟ್ಟಿ ಬೆಳೆದ ಮನೆಯಲ್ಲಿಯೇ ಮದುವೆ ಆಗಬೇಕು ಎನ್ನುವ ಆಸೆ ಇತ್ತ. ಹಾಗಾಗಿ ಇಲ್ಲೇ ಮದುವೆ ಆಗಿದ್ದೇವೆ". ಕುಟುಂಬಸ್ಥರು, ಗುರು ಹಿರಿಯರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು ಶುಭಾ, ಸುಮಂತ್.

2 ವರ್ಷದಿಂದ ಪ್ರೀತಿಸುತ್ತಿದ್ದ ಶುಭಾ-ಸುಮಂತ್!

2 ವರ್ಷದಿಂದ ಪ್ರೀತಿಸುತ್ತಿದ್ದ ಶುಭಾ-ಸುಮಂತ್!

ಇನ್ನು ಶುಭಾ ಪೂಂಜಾ ಮತ್ತು ಸುಮಂತ್ ಮಹಾಬಲ ಅವರು ಎರಡು ವರ್ಷಗಳಿಂದ ಪ್ರೀತಿಯಲ್ಲಿ ಇದ್ದರು. ಮನೆಯವರ ಒಪ್ಪಿಯ ಮೇರೆಗೆ ಈ ವೈವಾಹಿಕ ಜೀವಾನಕ್ಕೆ ಶುಭಾ, ಸುಮಂತ್ ಕಾಲಿಟ್ಟಿದ್ದಾರೆ. ಇನ್ನು ಮದುವೆ ಆದ ಒಂದೇ ವಾರಕ್ಕೆ ಶುಭಾ ಪೂಂಜಾ ಅವರು, ಶೂಟಿಂಗ್‌ಗೆ ಮರಳಿದ್ದಾರೆ.

More from Filmibeat

English summary
Actress Shubha Poonja Back To Shooting After Marriage With Sumanth Mahabala
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X