ಮದುವೆ ಹೈಲೈಟ್ಸ್ ವೀಡಿಯೋ ಹಂಚಿಕೊಂಡ ಶುಭಾ ಪೂಂಜಾ! ವೀಡಿಯೋ ವೈರಲ್

2004 ರಲ್ಲಿ ಮಚ್ಚಿ ತಮಿಳು ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಶುಭಾ ಪೂಂಜಾ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಸ್ಥಾನ ಹೊಂದಿದ್ದಾರೆ. ಅವರು ಅಭಿನಯಿಸಿರುವ ಸಿನಿಮಾಗಳು ದೊಡ್ಡ ಮಟ್ಟಿಗೆ ಹಿಟ್ ಆಗದಿದ್ದರೂ ಶುಭಾ ಪೂಂಜಾ ಅಭಿನಯ ಹಾಗೂ ಕೆಲವೊಂದು ಚಿತ್ರಕಥೆಗಳಿಗೆ ಪ್ರಶಂಸೆ ವ್ಯಕ್ತವಾಗಿದೆ. ಜಾಕ್​ಪಾಟ್ ಕನ್ನಡ ಚಿತ್ರದ ಮೂಲಕ ಸ್ಯಾಂಡಲ್​​ವುಡ್​​​ಗೆ ಬಂದ ಶುಭಾ ಪೂಂಜಾ ನಂತರ ಚಂಡ, ಮೊಗ್ಗಿನ ಮನಸು, ಸ್ಲಂ ಬಾಲಾ, ಕಂಠೀರವ, ಗೋಲ್​​ಮಾಲ್ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಮೊಗ್ಗಿನ ಮನಸು ಚಿತ್ರಕ್ಕೆ ಪ್ರಶಸ್ತಿ ಕೂಡಾ ಪಡೆದಿದ್ದಾರೆ. ಸದ್ಯಕ್ಕೆ ಶುಭಾ ಇತ್ತೀಚೆಗೆ ದಾಂಪತ್ಯ ಜೀವನಕ್ಕೂ ಕಾಲಿಟ್ಟಿದ್ದಾರೆ.

ಸ್ಯಾಂಡಲ್‌ವುಡ್ ನಟಿ ಶುಭಾ ಪೂಂಜಾ ಅತ್ಯಂತ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಶುಭಾ ಪೂಂಜಾ ತಮ್ಮ ಪ್ರೇಮಿ ಸುಮಂತ್‌ ಅವರೊಂದಿಗೆ ಮಜಲಬೆಟ್ಟುಬೀಡುವಿನಲ್ಲಿ ಸಪ್ತಪದಿ ತುಳಿದಿದ್ದು, ಆಪ್ತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೀಗಾಗಿ ಶುಭಾ ಪೂಂಜಾ ವಿವಾಹವನ್ನು ಕಣ್ತುಂಬಿಕೊಳ್ಳಬೇಕು ಎಂದು ಅಂದುಕೊಂಡಿದ್ದ ಅಭಿಮಾನಿಗಳಿಗೆ ಅದು ಸಾಧ್ಯವಾಗಿಲ್ಲ. ಹೀಗಾಗಿ ಅಭಿಮಾನಿಗಳು ನಿರಾಶರಾಗಿದ್ದರು. ಸದ್ಯ ಶುಭಾ ಪೂಂಜಾ ಅವರೇ ತಮ್ಮ ಮದುವೆಯ ಹೈಲೈಟ್ ವೀಡಿಯೊವನ್ನು ಇದೀಗ ಹಂಚಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂನಲ್ಲಿ ವೀಡಿಯೋ ಹರಿಬಿಟ್ಟಿರುವ ಶುಭಾ ಪೂಂಜಾ ಅದ್ಭುತ ಕ್ಷಣಗಳು ಎಂದು ಬರೆದುಕೊಂಡಿದ್ದಾರೆ. ಈ ವೀಡಿಯೋಗಳು ಈಗ ಸಾಕಷ್ಟು ಶೇರ್ ಕೂಡ ಆಗುತ್ತಿದ್ದು ಹಲವರು ಕಮೆಂಟ್‌ನಲ್ಲಿ ಹೀಗೆ ಸುಖಕರವಾಗಿ ಇರಿ ಎಂದು ಹೇಳಿದ್ದಾರೆ.

ಅತ್ಯಂತ ಸರಳ ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾಗಿದ್ದ ಶುಭಾ ಪೂಂಜಾ ಮತ್ತು ಸುಮಂತ್ ಬಿಲ್ಲವ ಇಬ್ಬರೂ ತುಂಬಾ ಸರಳವಾದ ಅಲಂಕಾರದಲ್ಲಿ ಮದುವೆ ಆಗಿದ್ದಾರೆ. ಸಾಂಪ್ರದಾಯಿಕವಾದ ಉಡುಗೆಯಾದ ಬಿಳಿ ರೇಷ್ಮೆ ಪಂಚೆಯನ್ನು ಮದುಮಗ ಸುಮಂತ್ ಬಿಲ್ಲವ ಧರಿಸಿದ್ದರೇ, ಶುಭಾ ಪೂಂಜಾ ಕೆಂಪು ಬಣ್ಣದ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ್ದರು.

Actress Shubha Poonja shared her wedding video

ಶುಭಾ ಪೂಂಜಾ ಕೈ ಹಿಡಿದಿರುವ ಸುಮಂತ್ ಬಿಲ್ಲವ, ಬೆಂಗಳೂರಿನಲ್ಲಿ ಗ್ಯಾಸ್ ಏಜೆನ್ಸಿ ನಡೆಸುತ್ತಿದ್ದು, ಜಯ ಕರ್ನಾಟಕ ಸಂಘಟನೆಯಲ್ಲಿ ಕೂಡಾ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಶುಭ ಪೂಂಜಾ ಕೆಲವು ವರ್ಷಗಳ ಹಿಂದೆ ಸುಮಂತ್ ಅವರನ್ನು ಕಾರ್ಯಕ್ರಮವೊಂದರಲ್ಲಿ ಭೇಟಿ ಮಾಡಿದ್ದರು. ಕ್ರಮೇಣ ಇಬ್ಬರಿಗೂ ಪರಿಚಯವಾಗಿ ಈ ಪರಿಚಯ ಪ್ರೀತಿಗೆ ತಿರುಗಿತು. ಹೀಗಾಗಿ ಮನೆಯವರ ಮುಂದೆ ತಮ್ಮ ಪ್ರೀತಿಯನ್ನು ಹೇಳಿ ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.

ಪತಿ ಸುಮಂತ್ ಬಗ್ಗೆ ಈ ಹಿಂದೆ ಹೇಳಿಕೊಂಡಿದ್ದ ಶುಭಾ ಪೂಂಜಾ "ನನ್ನ ಪತಿಯಾಗುವವರು ಸಿನಿಮಾ ಬಿಟ್ಟು ಬೇರೆ ಕ್ಷೇತ್ರದಲ್ಲಿ ಇರಬೇಕು ಎಂಬುದು ನನ್ನ ಆಸೆಯಾಗಿತ್ತು. ಅದರಂತೆ ನನಗೆ ಸುಮಂತ್ ಸಿಕ್ಕಿದ್ದಾರೆ. ಅವರು ನನ್ನ ವೃತ್ತಿಯನ್ನು ಬಹಳ ಗೌರವಿಸುತ್ತಾರೆ. ಮದುವೆ ನಂತರ ಕೂಡಾ ನಾನು ನಟನೆಯನ್ನು ಮುಂದುವರೆಸಲು ಅವರ ಒಪ್ಪಿದ್ದಾರೆ. ಸುಮಂತ್ ಅವರ ಈ ಒಳ್ಳೆಯ ಗುಣದಿಂದಲೇ ನಾನು ಅವರನ್ನು ಇಷ್ಟಪಟ್ಟೆ" ಎಂದಿದ್ದರು.

ತಾನು ಕಂಡ ಕನಸಿನಂತೆ ಶುಭಾ ಪೂಂಜ ಮಜಲಬೆಟ್ಟುವಿನ ಅಜ್ಜ ಮನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಬಗ್ಗೆ ಮಾತನಾಡಿದ್ದ ಅವರು "ಇದು ನನ್ನ ಊರು, ಇದು ಅಜ್ಜಿ ಮನೆ, ನಾನು ಹುಟ್ಟಿ ಬೆಳೆದ ಮನೆಯಲ್ಲಿಯೇ ಮದುವೆ ಆಗಬೇಕು ಎನ್ನುವ ಆಸೆ ಇತ್ತು. ಹಾಗಾಗಿ ಇಲ್ಲೇ ಮದುವೆ ಆಗಿದ್ದೇವೆ". ಎಂದಿದ್ದರು. ಇನ್ನು ನಟಿ ಶುಭಾ ಪೂಂಜಾ ಮದುವೆ ಬಳಿಕ ಚಿತ್ರ ರಂಗದಲ್ಲಿ ಸಕ್ರಿಯವಾಗಿ ಇರಲಿದ್ದಾರೆ. ಸದ್ಯ ಅವರು ಅಭಿನಯದ ತ್ರಿದೇವಿ, ಅಂಬುಜ ಚಿತ್ರಗಳು ಸದ್ದು ಮಾಡುತ್ತಿವೆ. ಜೊತೆಗೆ ರೈಮ್ಸ್‌ ಚಿತ್ರದಲ್ಲೂ ಶುಭಾ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ನವ ಜೋಡಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ.

More from Filmibeat

English summary
Actress Shubha Poonja shared her wedding highlight video on social media.it goes viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X