ವಜ್ರಕಾಯ ಬೆಡಗಿ ಶುಭ್ರಾ ಅಯ್ಯಪ್ಪಗೆ ಮದುವೆ: ಹುಡುಗ ಇವರೇ ನೋಡಿ!

ಕನ್ನಡ ಸಿನಿಮಾ ರಂಗದಲ್ಲಿ ಇತ್ತೀಚೆಗೆ ಹೆಚ್ಚಾಗಿ ಮದುವೆ ಸುದ್ದಿಗಳು ಹರಿದಾಡುತ್ತಿವೆ. ಅದರಲ್ಲೂ ಹೆಚ್ಚಾಗಿ ನಟಿ ಮಣಿಯರೇ ಮದುವೆ ಆಗಿ, ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈಗ ಈ ಸಾಲಿಗೆ ನಟಿ ಶುಭ್ರಾ ಅಯ್ಯಪ್ಪ ಸೇರಿಕೊಂಡಿದ್ದಾರೆ. ಶುಭ್ರಾ ಅಯ್ಯಪ್ಪ ಅವರು ಮದುವೆ ಆಗಲು ಸಜ್ಜಾಗಿದ್ದಾರೆ.

ಶುಭ್ರಾ ಅಯ್ಯಪ್ಪ ಅವರು ಬೆರಳೆಣಿಕೆಯಷ್ಟು ಸಿನಿಮಾಗಳನ್ನು ಮಾತ್ರ ಮಾಡಿದ್ದಾರೆ. ಸಿನಿಮಾಗಿಂತಲೂ ಶುಭ್ರಾ ಅಯ್ಯಪ್ಪ ಅವರು ಮಾಡಲಿಂಗ್ ಪ್ರಪಂಚದಲ್ಲಿ ಹೆಚ್ಚು ಸಕ್ರಿಯ. ಅವರು ಕನ್ನಡದಲ್ಲಿ ಅಭಿನಯಿಸಿರುವುದು ಒಂದೇ ಸಿನಿಮಾ ಅದು ಶಿವರಾಜ್ ಕುಮಾರ್‌ ಅವರ "ವಜ್ರಕಾಯ'. ಅದು ಬಿಟ್ಟರೆ ಇನ್ನು ಎರಡು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಆ ಚಿತ್ರಗಳು ಇನ್ನು ರಿಲೀಸ್ ಆಗಿಲ್ಲ. ಈಗ ಮದುವೆ ಮತ್ತು ಪ್ರೀತಿ ವಿಚಾರದಲ್ಲಿ ಶುಭ್ರಾ ಅಯ್ಯಪ್ಪ ಅವರು ಸುದ್ದಿ ಆಗುತ್ತಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ಶುಭ್ರಾ ಅಯ್ಯಪ್ಪ ಅವರು ತಮ್ಮ ಮದುವೆ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ತಮ್ಮ ಹುಡುಗನ ಪ್ರೀತಿಯನ್ನು ಒಪ್ಪಿಕೊಂಡಿರುವುದಾಗಿ ಶುಭ್ರಾ ಅಯ್ಯಪ್ಪ ಅವರು ತಮ್ಮ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಭಾವಿ ಪತಿ ವಿಶಾಲ್ ಶಿವಪ್ಪನ ಫೋಟೊ ಹಂಚಿಕೊಂಡ ಶುಭ್ರಾ!

ನಟಿ ಶುಭ್ರಾ ಅಯ್ಯಪ್ಪ ಅವರು ತಾನು ಮದುವೆ ಆಗುವ ಹುಡುಗನ ಫೋಟೊ ಹಂಚಿಕೊಂಡಿದ್ದಾರೆ. ಈ ಮೂಲಕ ಅವರ ಪರಿಚಯ ಮಾಡಿಕೊಟ್ಟಿದ್ದಾರೆ. ಹುಡುಗನ ಹೆಸರು ವಿಶಾಲ್ ಶಿವಪ್ಪ. ಅವರು ಕೂಡ ಶುಭ್ರಾ ಅಯ್ಯಪ್ಪ ಅವರಂತೆಯೇ ಅಡ್ವೆಂಚರ್ ಹವ್ಯಾಸ ಉಳ್ಳವರು. ಭಾವಿ ಪತಿಯ ಫೋಟೊ ಹಂಚಿಕೊಂಡ ನಟಿ "ನಾನು ನನ್ನ ಪಾಂಡೆಗೆ ಎಸ್ ಎಂದು ಹೇಳಿದೆ'. ಎಂದು ಬರೆದುಕೊಂಡು ಹಾರ್ಟ್ ಮತ್ತು ಉಂಗುರದ ಸಿಂಬಲ್ ಹಾಕಿದ್ದಾರೆ. ಉಂಗುರದ ಸಿಂಬಲ್ ಹಾಕಿದ್ದಕ್ಕೇ ಹಲವರು ಇವರ ಎಂಗೇಜ್‌ಮೆಂಟ್ ಆಗಿದೆ ಎನ್ನುತ್ತಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ಏನನ್ನೂ ಶುಭ್ರಾ ಅಯ್ಯಪ್ಪ ಹಂಚಿಕೊಂಡಿಲ್ಲ.

ಶುಭ್ರಾ ಅಯ್ಯಪ್ಪ ಪ್ರೀತಿಯ ಸಾಲುಗಳನ್ನು ಬರೆದ ವಿಶಾಲ್!

ಇನ್ನು ಶುಭ್ರಾ ಅಯ್ಯಪ್ಪ ಅವರ ರೀತಿಯಲ್ಲೇ, ವಿಶಾಲ್ ಶಿವಪ್ಪ ಅವರು ಕೂಡ ಫೋಟೊ ಹಂಚಿಕೊಂಡಿದ್ದಾರೆ. ಜೊತೆಗೆ ಪ್ರೀತಿ ಪೂರ್ವಕ ಸಾಲುಗಳನ್ನು ಬರೆದು ಶುಭ್ರಾ ಅಯ್ಯಪ್ಪ ಅವರಿಗೆ ಟ್ಯಾಗ್ ಮಾಡಿದ್ದಾರೆ. "ನಿನಗೆ ಧನ್ಯವಾದಗಳು.. ನೀವು ನನ್ನ ಜಗತ್ತು... ಪ್ರೀತಿಯಿಂದ ತುಂಬಿದ ಜೀವನಕ್ಕಾಗಿ ನಮ್ಮ ಕನಸುಗಳನ್ನು ಮುಂದಕ್ಕೆ ಸಾಗಿಸಲು ದೇವರು ನಮ್ಮನ್ನು ಎಲ್ಲಾ ರೀತಿಯಲ್ಲಿ ಆಶೀರ್ವದಿಸಲಿ. ನನ್ನ ಕನಸಿನ ಹುಡುಗಿ ನನ್ನನ್ನು ಒಪ್ಪಿದಳು'. ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಶುಭ್ರಾ ಅಯ್ಯಪ್ಪ- ವಿಶಾಲ್ ಶಿವಪ್ಪ ಮದುವೆ ಯಾವಾಗ?

ಶುಭ್ರಾ ಅಯ್ಯಪ್ಪ- ವಿಶಾಲ್ ಶಿವಪ್ಪ ಮದುವೆ ಯಾವಾಗ?

ಶುಭ್ರಾ ಅಯ್ಯಪ್ಪ ಅವರು ಈ ವಿಚಾರವನ್ನು ಬಹಿರಂಗ ಪಡಿಸುತ್ತಿದ್ದ ಹಾಗೆಯೇ, ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಂಡಿವೆ. ಇವರ ಮದುವೆ ಯಾವಾಗ ಎಂದು ಎಲ್ಲರೂ ಅವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡುವ ಮೂಲಕ ಪ್ರಶ್ನಿಸಿದ್ದಾರೆ. ಆದರೆ ಈ ಬಗ್ಗೆ ಶುಭ್ರಾ ಅವರು ಸ್ಪಷ್ಟ ಪಡಿಸಿಲ್ಲ. ಸದ್ಯಕ್ಕೆ ತಾವು ವಿಶಾಲ್ ಅವರ ಜೊತೆಗೆ ಪ್ರೀತಿಯಲ್ಲಿ ಇರುವ ಬಗ್ಗೆ, ಅವರ ಪ್ರೀತಿಯನ್ನು ಒಪ್ಪಿಕೊಂಡಿರುವ ಬಗ್ಗೆ ಹೇಳಿಕೊಂಡಿದ್ದಾರೆ.

ಮದುವೆ ಸುದ್ದಿ ಕೊಟ್ಟ ಅದಿತಿ ಪ್ರಭುದೇವ, ಶುಭಾ ಪೂಂಜಾ!

ಮದುವೆ ಸುದ್ದಿ ಕೊಟ್ಟ ಅದಿತಿ ಪ್ರಭುದೇವ, ಶುಭಾ ಪೂಂಜಾ!

ಶುಭ್ರ ಅಯ್ಯಪ್ಪ ಮಾತ್ರ ಅಲ್ಲ. ಇತ್ತೀಚೆಗೆ ಕನ್ನಡದ ನಟಿ ಅದಿತಿ ಪ್ರಭುದೇವ ಅವರು ಕೂಡ ತಾನು ಮದುವೆ ಆಗುತ್ತಿರುವ ಹುಡುಗನನ್ನು ಪರಿಚಯಿಸಿದ್ದಾರೆ. ತಾನು ಪ್ರೀತಿಯಲ್ಲಿ ಇರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕುವ ಮೂಲಕ ಹೇಳಿಕೊಂಡಿದ್ದರು. ಇತ್ತ ನಟಿ ಶುಭಾ ಪೂಂಜಾ ಅವರು ತಮ್ಮ ಊರಿನಲ್ಲಿ ತಮ್ಮ ಪ್ರಿಯಕರ ಸುಮಂತ್ ಅವರ ಜೊತೆಗೆ ಸರಳವಾಗಿ ಮದುವೆ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

More from Filmibeat

English summary
Actress Shubra Aiyappa Say's Yes For Marriege, Know About The Boy,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X