»   » ಶ್ವೇತಾ ಶ್ರೀವಾತ್ಸವ್ ಅವರ ಪುಟ್ಟ ಕಂದಮ್ಮನ ಮುದ್ದಾದ ಕ್ಷಣಗಳು

ಶ್ವೇತಾ ಶ್ರೀವಾತ್ಸವ್ ಅವರ ಪುಟ್ಟ ಕಂದಮ್ಮನ ಮುದ್ದಾದ ಕ್ಷಣಗಳು

Posted By:
Subscribe to Filmibeat Kannada

'ಸಿಂಪಲ್ಲಾಗ್ ಒಂದು ಲವ್ ಸ್ಟೋರಿ' ಖ್ಯಾತಿಯ ನಟಿ ಶ್ವೇತಾ ಶ್ರೀವಾತ್ಸವ್ ಅವರು ಇತ್ತಿಚೆಗಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ಸಂತೋಷವನ್ನ ಸ್ವತಃ ಶ್ವೇತಾ ಶ್ರೀವಾತ್ಸವ್ ದಂಪತಿ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು.

ಈ ವಿಷ್ಯ ತಿಳಿದ ಅಭಿಮಾನಿಗಳು ಶ್ವೇತಾ ಶ್ರೀವಾತ್ಸವ್ ಅವರ ಪುಟ್ಟ ಕಂದಮ್ಮ ಹೇಗಿದೆ ಎಂದು ನೋಡುವ ಬಯಕೆ, ಆಸೆಯನ್ನಿಟ್ಟುಕೊಂಡಿದ್ದರು. ಇದೀಗ, ಶ್ವೇತಾ ಅವರ ಮಗುವಿನ ದರ್ಶನ ಭಾಗ್ಯ ಸಿಕ್ಕಿದೆ.

ಹೆಣ್ಣು ಮಗುವಿಗೆ ಜನ್ಮ ನೀಡಿದ ಸಿಂಪಲ್ ನಟಿ ಶ್ವೇತಾ ಶ್ರೀವಾತ್ಸವ್

ತಮ್ಮ ಪ್ರೀತಿಯ ಮುದ್ದಾದ ಮಗುವಿನ ಫೋಟೋಗಳನ್ನ ಶ್ವೇತಾ ಶ್ರೀವಾತ್ಸವ್ ದಂಪತಿ ಬಹಿರಂಗಪಡಿಸಿದ್ದಾರೆ. ಮುಂದೆ ನೋಡಿ...

ಹೆಣ್ಣು ಮಗುವಿಗೆ ಜನ್ಮ ನೀಡಿದ ಶ್ವೇತಾ ಶ್ರೀವಾತ್ಸವ್

ಜುಲೈ 21 ರಂದು ನಟಿ ಶ್ವೇತಾ ಶ್ರೀವಾತ್ಸವ್ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ಮಗು ಫೋಟೋ ನೋಡಿ

ನಟಿ ಶ್ವೇತಾ ಶ್ರೀವಾತ್ಸವ್ ಅವರ ಚೊಚ್ಚಲ ಮಗು ಫೋಟೋ ನೋಡಿ. ಎಷ್ಟು ಚೆಂದ ಕಾಣುತ್ತಿದೆ ಅಲ್ವಾ...

ಮುದ್ದು ಕಂದನ ಜೊತೆ ದಂಪತಿ

ಮುದ್ದು ಕಂದಮ್ಮನ ಜೊತೆ ಶ್ವೇತಾ ಶ್ರೀವಾತ್ಸವ್ ಮತ್ತು ಅಮಿತ್ ಶ್ರೀವಾತ್ಸವ್ ದಂಪತಿ ಕಾಣಿಸಿಕೊಂಡ ಅದ್ಭುತ ಕ್ಷಣ ನೋಡಿ

ಅಜ್ಜ-ಅಜ್ಜಿ ಜೊತೆ ಮಗು

ನಟಿ ಶ್ವೇತಾ ಅವರ ತಾಯಿ ಹಾಗೂ ತಂದೆ ತಮ್ಮ ಮೊಮ್ಮಗಳನ್ನ ಎತ್ತಿಕೊಂಡು ಮುದ್ದಾಡುತ್ತಿರುವ ಕ್ಷಣವಿದು.

ತಾಯಿ-ಮಗು ಸುರಕ್ಷತೆಯಾಗಿದ್ದಾರೆ

7 ದಿನಗಳ ಮಗು ಮತ್ತು ತಾಯಿ ಸುರಕ್ಷಿತವಾಗಿದ್ದಾರೆ ಎಂದು ಅಮಿತ್ ಶ್ರೀವಾತ್ಸವ್ ಅವರು ತಿಳಿಸಿದ್ದಾರೆ.

English summary
Kannada Actress Shwetha Srivatsav Gives Birth to Baby Girl on July 21st. See Shwetha's Baby Girl photo.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada