For Quick Alerts
  ALLOW NOTIFICATIONS  
  For Daily Alerts

  ಈಗ ಗೊತ್ತಾಗಿದೆ ನಟಿ ಶ್ವೇತಾ ಶ್ರೀವಾತ್ಸವ್ ಸೀಕ್ರೆಟ್

  By ಜೀವನರಸಿಕ
  |

  ಕೆಲವೊಂದು ಪಾತ್ರಗಳನ್ನ ನಟಿಸೋದು ಅಷ್ಟೊಂದು ಸುಲಭ ಅಲ್ಲ. ಇನ್ನು ಕೆಲವು ಪಾತ್ರಗಳು ಎಲ್ಲರಿಗೂ ಸಿಕ್ಕೋದಿಲ್ಲ. ಕೆಲವು ಪಾತ್ರಗಳು ಅದೆಷ್ಟೋ ನಟನಟಿಯರಿಗೆ ಕನಸುಗಳಾಗೀನೇ ಉಳಿದು ಹೋಗ್ತವೆ. ಅಂತಹಾ ಮೋಸ್ಟ್ ವಾಂಟೆಡ್ ಪಾತ್ರ ಅಂದ್ರೆ ವೇಶ್ಯೆ ಪಾತ್ರ.

  ಹೀರೋಯಿನ್ ಗಳ ತಾಕತ್ತನ್ನ ಬಸಿದುಬಿಡೋ ವೇಶ್ಯೆ ಪಾತ್ರ ಮಾಡ್ಬೇಕು ಅಂತ ಅದೆಷ್ಟೋ ನಟಿಯರು ಹಂಬಲಿಸ್ತಾರೆ. ಆ ಪಾತ್ರವನ್ನ ಮಾಡೋಕು ಧೈರ್ಯ ಬೇಕು. ನಿರ್ದೇಶಕ ಕೂಡ ಅಂತಹಾ ಪಾತ್ರವನ್ನ ಕೊಡುವ ಮುಂಚೆ ಯಾರಿಗೆ ಕೊಟ್ರೆ ಈ ಪಾತ್ರಕ್ಕೆ ನ್ಯಾಯ ಒದಗಿಸ್ತಾರೆ ಅಂತ ಯೋಚಿಸ್ತಾನೆ. [ತಾಜಾ ಅನುಭವದ 'ಫೇರ್ ಅಂಡ್ ಲವ್ಲಿ' ಹಾಡುಗಳು]

  ಅಂತಹ ಪಾತ್ರವೊಂದನ್ನ ನಾಯಕಿಯಾಗಿ ಎರಡನೇ ಸಿನಿಮಾದಲ್ಲೇ ಮಾಡಿದ್ದಾರೆ ಶ್ವೇತಾ ಶ್ರೀವಾತ್ಸವ್. 'ಫೇರ್ ಅಂಡ್ ಲವ್ಲಿ' ಸಿನಿಮಾದಲ್ಲಿ ಶ್ವೇತಾ ಮಾಡೋ ಬೇರೆ ಬೇರೆ ಶೇಡ್ ನ ಪಾತ್ರಗಳಲ್ಲಿ ವೇಶ್ಯೆ ಶೇಡ್ ನ ಪಾತ್ರ ಕೂಡ ಒಂದು.

  ವೇಶ್ಯೆಯರು ಅಂದರೆ ಕೆಟ್ಟದ್ದಾಗಿ ನೋಡೋ ಸಮಾಜ 'ಫೇರ್ ಅಂಡ್ ಲವ್ಲಿ' ಸಿನಿಮಾ ನೋಡಿದ್ರೆ ಅದೇ ವೇಶ್ಯೆಯರಿಗೆ ಚಪ್ಪಾಳೆ ಹೊಡೆಯುತ್ತೆ ಅನ್ನೋ ನಿರ್ದೇಶಕ ರಘುರಾಮ್.

  'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ'ಯಲ್ಲಿ ರಗಡ್ ಆಗಿ ಕಾಣಿಸಿಕೊಂಡಿದ್ದ ಶ್ವೇತಾ, ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಗೆದ್ದ ಆರು ತಿಂಗಳ ನಂತರ ಕೂಡ ಬೇರೆ ಸಿನಿಮಾ ಆಯ್ಕೆ ಮಾಡಿಕೊಂಡಿರಲಿಲ್ಲ. ಹತ್ತಕ್ಕೂ ಹೆಚ್ಚು ಕಥೆಗಳನ್ನ ರಿಜೆಕ್ಟ್ ಮಾಡಿದ್ರು.

  ಅದರ ಸೀಕ್ರೇಟ್ ಈಗ ಗೊತ್ತಾಗಿದೆ. ಶ್ವೇತಾ ಯಾಕೆ ಇಷ್ಟು ಸಿನಿಮಾಗಳನ್ನ ರಿಜೆಕ್ಟ್ ಮಾಡಿದ್ರು ಅನ್ನೋದ್ರ ಹಿಂದಿರೋದು ಇಂತಹಾ ಕಥೆ ಮತ್ತು ಪಾತ್ರ ಅನ್ನೋದು.

  English summary
  Why Kannada actress Shwetha Srivatsav gets choosy? After 'Simple Agi Ondh Love Story' the actress accepted Fair and Lovely movie with Stylish Star Prem. Here is the Shwetha's winning secret. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X