ಕಿಚ್ಚ 46 ಚಿತ್ರದಲ್ಲಿ ನಟಿಯಾಗಲು ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಸ್ ಎಂದ ಮಿಲ್ಕಿ ಬ್ಯೂಟಿ; ಸತ್ಯಾಂಶ ಬೇರೇನೆ ಇದೆ!

Actress Simrat Kaurs fake tweet about Kichcha 46 goes viral

ವಿಕ್ರಾಂತ್ ರೋಣ ಬಳಿಕ ಕಿಚ್ಚ ಸುದೀಪ್ ಯಾವ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಕುತೂಹಲ ಹಾಗೂ ಪ್ರಶ್ನೆ ಸುದೀಪ್ ಅಭಿಮಾನಿಗಳಲ್ಲಿ ಹಾಗೂ ಸಿನಿ ರಸಿಕರನ್ನು ಕಾಡಿತ್ತು. ಈ ಹಿಂದೆ ಘೋಷಣೆಯಾಗಿದ್ದ ಅನುಪ್ ಭಂಡಾರಿ ನಿರ್ದೇಶನದ ಬಿಲ್ಲಾ ರಂಗ ಭಾಷಾ ಚಿತ್ರವನ್ನೇ ಸುದೀಪ್ ಕೈಗೆತ್ತಿಕೊಳ್ಳಲಿದ್ದಾರಾ ಅಥವಾ ಹೊಸ ನಿರ್ದೇಶಕರ ಜತೆ ಕೈಜೋಡಿಸಲಿದ್ದಾರಾ ಎಂಬ ಪ್ರಶ್ನೆ ಎದ್ದಿತ್ತು.

ಇನ್ನು ವಿಕ್ರಾಂತ್ ರೋಣ ಬಳಿಕ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಟೂರ್ನಿ ಹಾಗೂ ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ನಿರತರಾಗಿದ್ದ ಸುದೀಪ್ ಮೂರು ಚಿತ್ರಗಳ ಸ್ಕ್ರಿಪ್ಟ್ ಕೇಳಿರುವುದಾಗಿ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದರು. ಈ ಮೂಲಕ ತಮ್ಮ ಮುಂದಿನ ಚಿತ್ರವನ್ನು ಯಾರ ಜತೆ ಮಾಡಬೇಕೆಂದು ಸುದೀಪ್ ಸಮಯ ತೆಗೆದುಕೊಂಡು ಆರಿಸಿದ್ದಾರೆ ಎಂಬುದು ತಿಳಿದುಬಂದಿತ್ತು ಹಾಗೂ ಯಾವ ನಿರ್ದೇಶಕನ ಜತೆ ಕೈಜೋಡಿಸಬಹುದು ಎಂಬ ಕುತೂಹಲವೂ ಹೆಚ್ಚಾಗಿತ್ತು.

ಇದಾದ ಕೆಲವೇ ದಿನಗಳಲ್ಲಿ ಕಿಚ್ಚ ಸುದೀಪ್ ಮೇ 24ರಂದು ತಮ್ಮ ಮುಂದಿನ ಸಿನಿಮಾದ ಮಾಹಿತಿಯನ್ನು ಹಂಚಿಕೊಂಡಿದ್ದರು. ತಮಿಳಿನ ಕಲೈಪುಲಿ ಎಸ್ ತನು ಎಂಬ ನಿರ್ಮಾಪಕರ ಚಿತ್ರದಲ್ಲಿ ನಟಿಸುವುದಾಗಿ ಸುದೀಪ್ ಅಧಿಕೃತವಾಗಿ ಟ್ವೀಟ್ ಮಾಡುವ ಮೂಲಕ ತಿಳಿಸಿದರು.
ಈ ಚಿತ್ರದ ಶೀರ್ಷಿಕೆಯಾಗಲಿ, ನಿರ್ದೇಶಕರಾಗಲಿ, ನಾಯಕಿಯಾಗಲಿ ಹಾಗೂ ಇತರೆ ಕಲಾವಿದರ ಮತ್ತು ತಂತ್ರಜ್ಞರ ಬಗ್ಗೆಯಾಗಲಿ ಚಿತ್ರತಂಡ ಮಾಹಿತಿ ಹಂಚಿಕೊಂಡಿರಲಿಲ್ಲ. ಇನ್ನು ಕಿಚ್ಚ ಮುಂದಿನ ಚಿತ್ರ ಯಾವುದೆಂದು ಅರಿತ ಸುದೀಪ್ ಅಭಿಮಾನಿಗಳಲ್ಲಿ ಆ ಚಿತ್ರದ ನಾಯಕಿ ಹಾಗೂ ನಿರ್ದೇಶಕರು ಯಾರು ಎಂಬ ಪ್ರಶ್ನೆಗಳು ಹುಟ್ಟುಕೊಂಡಿದ್ದವು.

ಇನ್ನು ಕಲೈಪುಲಿ ಎಸ್ ತನು ಎಂಬುವವರು ವಿಶೇಷ ಟೀಸರ್ ಬಿಡುಗಡೆ ಮಾಡುವ ಮೂಲಕ ಕಿಚ್ಚ 46 ಚಿತ್ರವನ್ನು ಘೋಷಣೆ ಮಾಡಿದ್ದರು. ಕಿಚ್ಚ ಸುದೀಪ್ ತಮ್ಮ ಕಾರಿನಿಂದ ಇಳಿದು ಬಂದು ನಿರ್ಮಾಪಕರ ಕೈಕುಲುಕಿ ಕನ್ನಡಿ ಮುಂದೆ ನಿಂತು ಚಿತ್ರೀಕರಣಕ್ಕೆ ಸಿದ್ಧವಾಗುತ್ತಿರುವ ದೃಶ್ಯಗಳು ಈ ವಿಡಿಯೊದಲ್ಲಿ ಇದ್ದು, 'ಸ್ಟೆಪಿಂಗ್ ಇನ್‌ಟು ಎ ನ್ಯೂ ವರ್ಲ್ಡ್ ಆಫ್ ???' ಎಂಬ ಪ್ರಶ್ನೆಯನ್ನು ಇಟ್ಟು ಕುತೂಹಲ ಕೆರಳಿಸಲಾಗಿತ್ತು ಹಾಗೂ ಟೀಸರ್‌ನೊಂದಿಗೆ ನಿಮ್ಮ ಮುಂದೆ ಬರುತ್ತೇವೆ ಎಂದು ಚಿತ್ರತಂಡ ಘೋಷಿಸಿತ್ತು.

ಇಷ್ಟು ಮಾಹಿತಿಯನ್ನು ಮಾತ್ರ ಚಿತ್ರದ ನಿರ್ಮಾಪಕರು ಹಂಚಿಕೊಂಡಿದ್ದರು. ಬಿಟ್ಟರೆ ಚಿತ್ರದ ತಂತ್ರಜ್ಞರ ಬಗ್ಗೆಯಾಗಲಿ, ನಿರ್ದೇಶಕರ ಬಗ್ಗೆಯಾಗಲಿ ಅಥವಾ ನಾಯಕಿಯ ಬಗ್ಗೆಯಾಗಲಿ ನಿರ್ಮಾಪಕರು ಮಾಹಿತಿಯನ್ನು ಬಿಟ್ಟುಕೊಟ್ಟಿರಲಿಲ್ಲ. ಆದರೆ ಕಳೆದ ಎರಡು ಮೂರು ದಿನಗಳಿಂದ ಹಲವು ಸುದ್ದಿ ವೆಬ್ ತಾಣಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಮುಂಬೈ ಮೂಲದ ಚೆಲುವೆ ಸಿಮ್ರಾತ್ ಕೌರ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿಗಳು ದೊಡ್ಡ ಮಟ್ಟದಲ್ಲಿ ಹರಿದಾಡಿದ್ದವು.

ಈ ಸುದ್ದಿ ಹರಿದಾಡಿದ ಬೆನ್ನಲ್ಲೇ ಸಿನಿ ರಸಿಕರು ಈ ನಟಿಯ ಇನ್ಸ್ಟಾಗ್ರಾಮ್ ಖಾತೆಗೆ ತೆರಳಿ ಆಕೆಯ ಫೋಟೊಗಳನ್ನು ನೋಡಿ ಫಿದಾ ಆಗಿದ್ದರು. ಹೀಗೆ ಈ ಊಹಾಪೋಹದ ಸುದ್ದಿಗಳು ಹರಿದಾಡಿದ ಬೆನ್ನಲ್ಲೇ ಟ್ವಿಟರ್‌ನಲ್ಲಿ ಈ ನಟಿಯ ಹೆಸರಿನಲ್ಲಿ ಟ್ವೀಟ್ ಒಂದು ವೈರಲ್ ಆಗಿದೆ. ಸಿಮ್ರಾತ್ ಕೌರ್ ಎಂಬ ಹೆಸರಿರುವ ಖಾತೆಯಿಂದ "ಸುದೀಪ್ ಸರ್ ಜತೆ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ. ಈ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದ" ಎಂದು ಟ್ವೀಟ್ ಬಂದಿದೆ.

tweet

ಆದರೆ ಈ ಟ್ವೀಟ್ ಬಂದಿರುವುದು ನಕಲಿ ಖಾತೆಯಿಂದ. ಹೌದು, ನಟಿಯ ಹೆಸರಿನಲ್ಲಿ ನಕಲಿ ಖಾತೆ ತೆರೆದು ಇಂತಹ ಗೊಂದಲ ಮೂಡಿಸುವ ಟ್ವೀಟ್ ಮಾಡಲಾಗಿದೆ. ಅಲ್ಲದೇ ನಿರ್ಮಾಪಕ ಕಲೈಪುಲಿ ಹೆಸರಿನಲ್ಲಿಯೂ ಸಹ ನಕಲಿ ಖಾತೆ ತೆರೆಯಲಾಗಿದ್ದು, "ಕಿಚ್ಚ 46 ಚಿತ್ರದ ನಾಯಕಿಯಾಗಿ ಬರುತ್ತಿರುವ ಸಿಮ್ರಾತ್ ಕೌರ್‌ಗೆ ಸ್ವಾಗತ. ನೀವು ಕುಟುಂಬದ ನೂತನ ಸದಸ್ಯೆ. ಈ ಪ್ರಯಾಣ ತುಂಬಾ ದಿನಗಳವರೆಗೆ ಸಾಗಲಿ" ಎಂದು ಬರೆದುಕೊಂಡಿದ್ದಾರೆ. ಹೀಗೆ ನಿರ್ಮಾಪಕ ಹಾಗೂ ಈ ನಾಯಕಿ ಹೆಸರಿನಲ್ಲಿ ಮಾಡಲಾಗಿರುವ ಈ ನಕಲಿ ಟ್ವೀಟ್‌ಗಳು ವೈರಲ್ ಆಗಿದ್ದು, ಗೊಂದಲವನ್ನೂ ಸಹ ಹುಟ್ಟುಹಾಕಿವೆ.

More from Filmibeat

English summary
Actress Simrat Kaur's fake tweet about Kichcha 46 goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X