For Quick Alerts
  ALLOW NOTIFICATIONS  
  For Daily Alerts

  46 ವರ್ಷದ ನಟಿ ಸಿತಾರಾ ಮದುವೆ ಆಗದಿರಲು ಕಾರಣ ಆ ಒಬ್ಬ ವ್ಯಕ್ತಿ

  |

  ನಟಿ ಸಿತಾರಾ ಯಾರಿಗೆ ಗೊತ್ತಿಲ್ಲ. ಕನ್ನಡ ಸಿನಿ ಪ್ರೇಕ್ಷಕರಂತೂ ಮರೆಯದ ಸಿನಿಮಾಗಳ ಭಾಗವಾಗಿದ್ದಾರೆ ಈ ನಟಿ. ಮಲೆಯಾಳಂ ಮೂಲವಾದರೂ ಕನ್ನಡ ಸಿನಿ ಪ್ರೇಕ್ಷಕರ ಮನದಲ್ಲಿ ಭದ್ರ ಸ್ಥಾನ ಗಳಿಸಿದ್ದಾರೆ.

  ಧಾರಾವಾಹಿ ಚಿತ್ರೀಕರಣಕ್ಕೆ ಅನುಮತಿ , ಆದರೂ ಸಂಕಷ್ಟ ತಪ್ಪಿದ್ದಲ್ಲ | Serial | Television

  ನಟಿ ಸಿತಾರಾ ಕೇವಲ ಕನ್ನಡವಷ್ಟೆ ಅಲ್ಲ, ತೆಲುಗು, ತಮಿಳು, ಮಲೆಯಾಳಂ ಹೀಗೆ ಎಲ್ಲಾ ಭಾಷೆಗಳಲ್ಲೂ ನಟಿಸಿದ್ದಾರೆ. ಕೇವಲ ನಟಿಸುವುದು ಮಾತ್ರವಲ್ಲ ಈ ಭಾಷೆಗಳಲ್ಲೂ ಸಹ ಅವರು ಬಹಳ ಖ್ಯಾತ ನಟಿ.

  ಈಗಲೂ ಲಕ್ಷಣವಾಗಿ ಕಾಣುವ ನಟಿ ಸಿತಾರಾ ಗೆ ಈಗ 46 ವಯಸ್ಸು. ಆದರೆ ಸಿತಾರಾ ಈವರೆಗೆ ಮದುವೆ ಆಗುವ ಮನಸ್ಸು ಮಾಡಿಲ್ಲ. ಕೌಟುಂಬಿಕ ಸಿನಿಮಾಗಳಿಂದಲೇ ಖ್ಯಾತವಾಗಿರುವ ಸಿತಾರಾ ಗೆ ಮದುವೆ ಆಗಿಲ್ಲ ಎಂಬುದು ಬಹುತೇಕರಿಗೆ ಗೊತ್ತೇ ಇಲ್ಲ. ತಾವೇಕೆ ಮದುವೆ ಆಗಲಿಲ್ಲ ಎಂದು ಸಂದರ್ಶನವೊಂದರಲ್ಲಿ ಅವರೇ ಹೇಳಿದ್ದಾರೆ.

  ಕೇರಳದ ಕಿಲಿಮನೂರ್‌ ನಲ್ಲಿ ಸಿತಾರಾ ಜನನ

  ಕೇರಳದ ಕಿಲಿಮನೂರ್‌ ನಲ್ಲಿ ಸಿತಾರಾ ಜನನ

  ನಟಿ ಸಿತಾರಾ ಕೇರಳದ ಕಿಲಿಮನೂರ್ ಎಂಬಲ್ಲಿ ಜನಿಸಿದರು. ಪೋಷಕರ ಹೆಸರು ರಾಮೇಶ್ವರನ್ ನಾಯರ್ ಮತ್ತು ವಲ್ಸಲಾ ನಾಯರ್. ಕಾಲೇಜು ಓದುವಾಗಲೇ ಸಿನಿಮಾಕ್ಕೆ ಪ್ರವೇಶಿಸಿದರು ಸಿತಾರಾ. ಕೆಲವೇ ದಿನಗಳಲ್ಲಿ ಖ್ಯಾತರಾಗಿಬಿಟ್ಟರು.

  ಅಪ್ಪನನ್ನು ವಿಪರೀತ ಹಚ್ಚಿಕೊಂಡಿದ್ದ ಸಿತಾರಾ

  ಅಪ್ಪನನ್ನು ವಿಪರೀತ ಹಚ್ಚಿಕೊಂಡಿದ್ದ ಸಿತಾರಾ

  ಆ ಸಮಯದಲ್ಲೆಲ್ಲಾ ತಂದೆಯೊಂದಿಗೆ ಚಿತ್ರೀಕರಣಕ್ಕೆ ಹೋಗುವುದು ಬರುವುದು ಮಾಡುತ್ತಿದ್ದರು. ತಂದೆ ರಾಮೇಶ್ವರನ್ ನಾಯರ್ ಅವರನ್ನು ಬಹುವಾಗಿ ಹಚ್ಚಿಕೊಂಡಿದ್ದರು ಸಿತಾರಾ. ಅವರ ನೆರಳಲ್ಲೇ ಸಿತಾರಾ ಇದ್ದರು. ನಾಲ್ಕೂ ಭಾಷೆಗಳಲ್ಲಿ ಹಲವು ಸಿನಿಮಾಗಳನ್ನು ಅವರು ಮಾಡುತ್ತಿದ್ದರು.

  ಅಪ್ಪನ ಅಗಲಿಕೆಯಿಂದ ಆಘಾತಕ್ಕೊಳಗಾದ ಸಿತಾರಾ

  ಅಪ್ಪನ ಅಗಲಿಕೆಯಿಂದ ಆಘಾತಕ್ಕೊಳಗಾದ ಸಿತಾರಾ

  ಆದರೆ ಅಪ್ಪ ತೀರಿಕೊಂಡಾಗ ತೀವ್ರ ಆಘಾತಕ್ಕೆ ಒಳಗಾದ ಸಿತಾರಾ ಸಿನಿಮಾಗಳಿಂದಲೂ ದೂರ ಉಳಿದುಬಿಟ್ಟರು. ಅಷ್ಟೆ ಅಲ್ಲ ಮದುವೆ ಬಗ್ಗೆ ಯೋಚನೆ ಸಹ ಅವರು ಮಾಡಲಿಲ್ಲ. ನಂತರವೂ ಅದೇ ಗುಂಗಿನಲ್ಲಿದ್ದ ಸಿತಾರಾಗೆ ಮದುವೆಯ ಆಲೋಚನೆಯೇ ಬರಲಿಲ್ಲವಂತೆ.

  ''ಅಪ್ಪ ಇದ್ದಿದ್ದರೆ ಹೀಗಿರುತ್ತಿರಲಿಲ್ಲ''

  ''ಅಪ್ಪ ಇದ್ದಿದ್ದರೆ ಹೀಗಿರುತ್ತಿರಲಿಲ್ಲ''

  ಸಿತಾರಾ ತಂದೆ ಬದುಕಿದ್ದಿದ್ದರೆ ಮದುವೆ ಮಾಡುತ್ತಿದ್ದರೇನೋ, ಆದರೆ ಅದಾಗಲಿಲ್ಲ. ಹಾಗೆಯೇ ಕಾಲ ಸರಿದು ಹೋಯಿತು. ಸಿತಾರಾ ಸಹ ಸಿನಿಮಾಗಳಲ್ಲಿ ಬ್ಯುಸಿ ಆದ ಕಾರಣ ಮದುವೆಯತ್ತ ಗಮನವೇ ಹರಿಯಲಿಲ್ಲ. ಹೀಗೆಯೇ ಸಮಯ ಉರುಳಿ ಈಗ ಸಿತಾರಾ ಅವರಿಗೆ 46 ವರ್ಷ ವಯಸ್ಸು.

  ಬಚ್ಚಿಟ್ಟು ಮದುವೆ ಆಗುವುದಿಲ್ಲ: ಸಿತಾರಾ

  ಬಚ್ಚಿಟ್ಟು ಮದುವೆ ಆಗುವುದಿಲ್ಲ: ಸಿತಾರಾ

  ಸಂದರ್ಶನದಲ್ಲಿ ಅವರೇ ಹೇಳಿದಂತೆ, 'ನನಗೆ ಮದುವೆ ಆಗಿಲ್ಲ, ಇದು ಬಹಳ ಜನರಿಗೆ ಗೊತ್ತಿಲ್ಲ. ಆದರೆ ನಾನೊಂದು ಮದುವೆ ಆದರೆ ಖಂಡಿತ ಅದನ್ನು ಗುಟ್ಟಾಗಿ ಇಡುವುದಿಲ್ಲ, ಎಲ್ಲರಿಗೂ ತಿಳಿಸುತ್ತೇನೆ' ಎಂದಿದ್ದಾರೆ.

  English summary
  Actress Sithara is 46 now. She is not married yet. She talked about her life in an interview and told why she did not marry till now.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X