»   » ಜಯಲಲಿತಾರನ್ನು ಭೇಟಿ ಮಾಡಿದ ನವವಧು ಸ್ನೇಹಾ

ಜಯಲಲಿತಾರನ್ನು ಭೇಟಿ ಮಾಡಿದ ನವವಧು ಸ್ನೇಹಾ

Posted By:
Subscribe to Filmibeat Kannada
ಕನ್ನಡ, ತಮಿಳು,ತೆಲುಗು ಹಾಗೂ ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿರುವ ತಾರೆ ಸ್ನೇಹಾಗೆ ಈಗ ಮದುವೆ ಸಂಭ್ರಮ. ಈಗಾಕೆ ಮದುವೆ ಆಮಂತ್ರಣ ಪತ್ರಗಳನ್ನು ಹಂಚುವುದರಲ್ಲಿ ಬಿಜಿಯಾಗಿದ್ದಾರೆ. ಸ್ನೇಹಾ ಮದುವೆ ಪ್ರಸನ್ನ ಜೊತೆ ಮೇ 11ರಂದು ಬೆಳಗ್ಗೆ 9ಗಂಟೆಯ ಶುಭ ಮುಹೂರ್ತದಲ್ಲಿ ನೆರವೇರಲಿದೆ.

ತಮಿಳುನಾಡಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರನ್ನು ಇತ್ತೀಚೆಗೆ ಭೇಟಿ ಮಾಡಿ, ತಮ್ಮ ಮದುವೆಗೆ ತಪ್ಪದೆ ಬರಬೇಕು ಎಂದು ಆಹ್ವಾನ ಪತ್ರಿಕೆಯನ್ನು ನೀಡಿದ್ದಾರೆ. ಜಯಲಲಿತಾ ಕೂಡ ಖಂಡಿತ ಬರುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಮದುವೆ ಬಳಿಕ ಸ್ನೇಹಾ ಚಿತ್ರಗಳಲ್ಲಿ ಅಭಿನಯಿಸುವುದು ಬಿಡುವುದು ಆಕೆಗೆ ಬಿಟ್ಟದ್ದು. ಈ ವಿಚಾರದಲ್ಲಿ ತಾನು ಮೂಗು ತೂರಿಸುವುದಿಲ್ಲ ಎಂದು ಸ್ನೇಹಾರ ಭಾವಿ ಪತಿ ಪ್ರಸನ್ನ ಹೇಳಿದ್ದಾರೆ. ಕಳೆದ 12 ವರ್ಷಗಳಿಂದ ಸ್ನೇಹಾ ಚಿತ್ರರಂಗದಲ್ಲಿದ್ದಾರೆ. ಸ್ನೇಹಾರ ಸಾಕಷ್ಟು ಚಿತ್ರಗಳು ಇನ್ನೂ ನಿರ್ಮಾಣ ಹಂತದಲ್ಲಿವೆ. (ಏಜೆನ್ಸೀಸ್)

English summary
South Indian actress Sneha met J Jayalalithaa in Chennai on Wednesday to invite the chief minister to her wedding. Sneha will wed Prasanna on May 11. Sneha was accompanied by her parents on this visit.
Please Wait while comments are loading...