ಸ್ನೇಹಾ ಮದುವೆ ಗ್ಯಾಲರಿ ಸೂಪರ್ ಡೂಪರ್ ಹಿಟ್
ಕನ್ನಡ, ತೆಲುಗು, ತಮಿಳು ಚಿತ್ರರಂಗದ ತಾರೆ ಸ್ನೇಹಾ ನೂತನ ದಾಂಪತ್ಯ ಜೀವನಕ್ಕೆ ಮೇ 11ರಂದು ಅಡಿಯಿಟ್ಟ ಸುದ್ದಿ ಗೊತ್ತೇ ಇದೆ. ಆಕೆಯ ಮದುವೆಯ ಸಂಭ್ರಮ ಸಡಗರದ ಫೋಟೋಗಳನ್ನು ಒನ್‌ಇಂಡಿಯಾ ಕನ್ನಡ ಸಮಗ್ರವಾಗಿ ಪ್ರಕಟಿಸಿತ್ತು. ನಮ್ಮ ಓದುಗ ದೊರೆಗಳಿಂದ ಇದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಒನ್‌ಇಂಡಿಯಾ ಬಳಗದ ಎಲ್ಲ ತಾಣಗಳಿಂದ ಸ್ನೇಹಾ ಗ್ಯಾಲರಿ ಸೂಪರ್ ಡೂಪರ್ ಹಿಟ್ ಆಗಿದೆ. ನಮ್ಮ ಎಲ್ಲ ವಾಹಿನಿಗಳಿಂದ ಸರಿಸುಮಾರು 40 ಲಕ್ಷದಷ್ಟು ಕ್ಲಿಕ್ಸ್ ಬಂದಿವೆ ಎಂದು ತಿಳಿಸಲು ಸಂತಸವಾಗುತ್ತಿದೆ. ನಿಮ್ಮ ಪ್ರೀತಿ, ವಿಶ್ವಾಸ ಹೀಗೇ ಮುಂದುವರಿಯಲಿ ಎಂದು ಒನ್‌ಇಂಡಿಯಾ ಕನ್ನಡ ಆಶಿಸುತ್ತದೆ. ಸ್ನೇಹಾರ ಮದುವೆ ವಿಡಿಯೋಗೂ ಇದೇ ರೀತಿಯ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ.
ಈ ಹಿಂದೊಮ್ಮೆ ಅಣ್ಣಾವ್ರ ಹುಟ್ಟುಹಬ್ಬದಂದು ಡಾ.ರಾಜ್ ಕುಮಾರ್ ಅವರ ಅಪರೂಪದ ಫೋಟೋಗಳನ್ನು ಸಂಗ್ರಹಿಸಿ ಗ್ಯಾಲರಿ ರೂಪದಲ್ಲಿ ನಿಮ್ಮ ಮುಂದಿಟ್ಟಿದ್ದೆವು. ಅಣ್ಣಾವ್ರ ಅಪರೂಪದ ಗ್ಯಾಲರಿಗೂ ಓದುಗರಿಂದ ಇದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಣ್ಣಾವ್ರ ಅಪರೂಪದ ಫೋಟೋಗಳು ಬಿಸಿಬೇಳೆ ಬಾತ್‌ನಂತೆ ಡೌನ್‌ಲೋಡ್ ಆಗಿವೆ, ಇನ್ನೂ ಅಗುತ್ತಿವೆ. (ಒನ್‌ಇಂಡಿಯಾ ಕನ್ನಡ)
English summary
Actress Sneha and Prasanna's Oneindia wedding gallery draws good response from our readers. The wedding ceremony was held at Sri Vari Venkatachalapathy Palace, Chennai on May 11, 2012.


Click it and Unblock the Notifications