»   » ತಾರಾ ದಂಪತಿ ಸ್ನೇಹಾ ಪ್ರಸನ್ನ ಮಧುಚಂದ್ರಕ್ಕೆ ಬ್ರೇಕ್

ತಾರಾ ದಂಪತಿ ಸ್ನೇಹಾ ಪ್ರಸನ್ನ ಮಧುಚಂದ್ರಕ್ಕೆ ಬ್ರೇಕ್

Posted By:
Subscribe to Filmibeat Kannada

ಒಂದು ವಾರದ ಹಿಂದಷ್ಟೇ ಪ್ರಸನ್ನ ಕೈಹಿಡಿದ ಕನ್ನಡ, ತೆಲುಗು ಹಾಗೂ ತಮಿಳು ತಾರೆ ಸ್ನೇಹಾ ಇನ್ನೇನು ಮಧುಚಂದ್ರಕ್ಕೆ ಯು.ಎಸ್‌ ವಿಮಾನ ಹತ್ತುವುದರಲ್ಲಿದ್ದರು. ಆದರೆ ಅಷ್ಟರಲ್ಲಾಗಲೇ ಆಕೆಯ ಮಧುಚಂದ್ರಕ್ಕೆ ಸಡನ್ನಾಗಿ ಬ್ರೇಕ್ ಬಿದ್ದಿದೆ.

ಹನಿಮೂನ್‌ಗೆ ಹೋಗುವುದನ್ನು ಬಿಟ್ಟು ಚಿತ್ರೀಕರಣಕ್ಕೆ ಆಗಮಿಸಿದ್ದಾರೆ ಸ್ನೇಹಾ. ಕನ್ನಡದ ಕಿಶೋರ್ ಮುಖ್ಯಭೂಮಿಕೆಯಲ್ಲಿರುವ ತಮಿಳು ಚಿತ್ರ ಹರಿದಾಸ್ ಚಿತ್ರೀಕರಣದಲ್ಲಿ ಸ್ನೇಹಾ ಈಗ ಬಿಜಿಯಾಗಿದ್ದಾರೆ. ತಮ್ಮ ಹೃದಯಕ್ಕೆ ಹತ್ತಿರವಾದ ಕಥಾಹಂದರ ಈ ಚಿತ್ರಕ್ಕಿದೆಯಂತೆ.

'ಹರಿದಾಸ್' ಚಿತ್ರದಲ್ಲಿ ಸ್ನೇಹಾ ಅವರದು ನಿರ್ಣಾಯಕ ಪಾತ್ರವಂತೆ. ಎಂಟು ವರ್ಷ ಬಾಲಕನೊಬ್ಬನ ಸುತ್ತ ಕತೆ ಸುತ್ತುತ್ತದೆ. ಹರಿದಾಸ್ ಚಿತ್ರಕ್ಕಾಗಿ ರಜನಿಕಾಂತ್ ಅವರ ಮಹತ್ವಾಕಾಂಕ್ಷಿ ಚಿತ್ರ 'ಕೋಚಡಯಾನ್'ನಿಂದಲೂ ಹೊರಬಂದಿದ್ದರು ಸ್ನೇಹಾ.

ಚಿತ್ರಕತೆ ಸಿಕ್ಕಾಪಟ್ಟೆ ಇಷ್ಟವಾಯಿತು. ಹಾಗಾಗಿ ಕೂಡಲೆ ಈ ಚಿತ್ರವನ್ನು ಒಪ್ಪಿಕೊಂಡಿದ್ದೇನೆ. ತಾನು ಇದುವರೆಗೂ ಕೇಳಿರುವ 80 ಚಿತ್ರಕತೆಗಳಲ್ಲಿ ಹರಿದಾಸ್‌ನಷ್ಟು ಯಾವುದೂ ತಮ್ಮನ್ನು ಕಾಡಲಿಲ್ಲ ಎಂದಿದ್ದಾರೆ ಸ್ನೇಹಾ. ಅದೆಲ್ಲಾ ಸರಿ ಪಾಪ ಹನಿಮೂನ್ ಧ್ಯಾನದಲ್ಲಿದ್ದ ಪ್ರಸನ್ನ ಪ್ರಾಬ್ಲಂ ಯಾರಿಗೇಳೋಣ! (ಏಜೆನ್ಸೀಸ್)

English summary
Recently married actress Sneha honeymoon postponed to indefinite lenght of time, who got married last week to Prasanna. Because she has to complete work for her Haridas, a film close to her heart.
Please Wait while comments are loading...