ರಕ್ಷಾ ಬಂಧನ ವೇಳೆ ಅಣ್ಣ ದರ್ಶನ್ ನೆನೆದು ಸೋನಲ್ ಮಂಥೆರೊ ಭಾವುಕ ಪೋಸ್ಟ್
ಎಲ್ಲೆಡೆ 'ರಕ್ಷಾ ಬಂಧನ' ಸಂಭ್ರಮ ಮನೆ ಮಾಡಿದೆ. ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟಿ ಹಬ್ಬ ಆಚರಿಸಿ ಶುಭಾಶಯ ಕೋರುತ್ತಿದ್ದಾರೆ. ಇಂತಹ ಸಮಯದಲ್ಲಿ ನಟಿ ಸೋನಲ್ ಮಂಥೆರೋ ತಮ್ಮ ಅಣ್ಣನ ಸಮಾನರಾದ ದರ್ಶನ್ ನೆನೆದು ಭಾವುಕ ಪೋಸ್ಟ್ ಮಾಡಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿ 2 ತಿಂಗಳು ಕಳೆದಿದೆ. ಆಗಸ್ಟ್ 28ರವರೆಗೆ ಪ್ರಕರಣದ ಎಲ್ಲಾ ಆರೋಪಿಗಳಿಗೆ ನ್ಯಾಯಾಂಗ ಬಂಧನ ಮುಂದುವರೆದಿದೆ. ಇತ್ತೀಚಿನ ವರ್ಷಗಳಲ್ಲಿ ದರ್ಶನ್ ಅವರಿಗೆ ರಾಖಿ ಕಟ್ಟಿ ಸೋನಲ್ ರಕ್ಷಾ ಬಂಧನ ಹಬ್ಬ ಆಚರಿಸುತ್ತಿದ್ದರು. ಸಾಕಷ್ಟು ಜನ ಮಹಿಳಾ ಅಭಿಮಾನಿಗಳು ದರ್ಶನ್ ಮನೆಗೆ ಭೇಟಿ ನೀಡಿ ರಾಖಿ ಕಟ್ಟುತ್ತಿದ್ದರು. ಆದರೆ ಈ ಬಾರಿ ಎಲ್ಲದ್ದಕ್ಕೂ ಬ್ರೇಕ್ ಬಿದ್ದಿದೆ.

ಸೋನಲ್ ಹಾಗೂ ದರ್ಶನ್ ನಡುವೆ ಉತ್ತಮ ಒಡನಾಟವಿದೆ. ಸದಾ ಅಣ್ಣಾ ಎಂದು ಬಾಯಿತುಂಬಾ ಕರೆಯುತ್ತಾರೆ. ಆದರೆ ಇತ್ತೀಚೆಗೆ ನಡೆದ ಸೋನಲ್ ಹಾಗೂ ತರುಣ್ ಸುಧೀರ್ ಮದುವೆ ಸಮಾರಂಭದಲ್ಲಿ ಕೂಡ ದರ್ಶನ್ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ತರುಣ್ ಹಾಗೂ ದರ್ಶನ್ ಸ್ನೇಹ ಕೂಡ ಬಹಳ ಹಳೆಯದು. ಹೀಗೆ ಬಹಳ ಆಪ್ತರಾದ ಜೋಡಿಯ ಮದುವೆಗೆ ದರ್ಶನ್ ಭಾಗಿ ಆಗಲು ಸಾಧ್ಯವಾಗಲಿಲ್ಲ.
ಕಳೆದ ವರ್ಷ ದರ್ಶನ್‌ಗೆ ಸೋನಲ್ ರಾಖಿ ಕಟ್ಟಿದ್ದ ವೀಡಿಯೋ ಬಹಳ ವೈರಲ್ ಆಗಿತ್ತು. ಇನ್ನು ಈ ಬಾರಿ ರಕ್ಷಾ ಬಂಧನದ ದಿನ ದರ್ಶನ್ ನೆನೆನು ಸೋನಲ್ ಇನ್‌ಸ್ಟಾಗ್ರಾಮ್‌ನಲ್ಲಿ ಭಾವುಕ ಪೋಸ್ಟ್ ಮಾಡಿದ್ದಾರೆ. "ಈ ವಿಶೇಷ ದಿನದಂದು ನಾವು ಒಟ್ಟಿಗೆ ಇಲ್ಲದಿದ್ದರೂ, ನಮ್ಮ ಬಾಂಧವ್ಯ ಎಂದಿಗೂ ಮರೆಯಾಗುವುದಿಲ್ಲ. ನಾವು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಇನ್ನು ಸದಾ ಪ್ರೀತಿಸುತ್ತೇವೆ ಅಣ್ಣ. ರಕ್ಷಾಬಂಧನದ ಶುಭಾಶಯಗಳು" ಎಂದು ಬರೆದುಕೊಂಡಿದ್ದಾರೆ.
ದರ್ಶನ್ ನಟನೆಯ 'ರಾಬರ್ಟ್' ಚಿತ್ರದಲ್ಲಿ ಸೋನಲ್ ಮಂಥೆರೋ ಬಣ್ಣ ಹಚ್ಚಿದ್ದರು. ವಿನೋದ್ ಪ್ರಭಾಕರ್ ಜೋಡಿಯಾಗಿ ದರ್ಶನ್‌ಗೆ ತಂಗಿ ಸಮಾನವಾದ ಪಾತ್ರದಲ್ಲಿ ಮಿಂಚಿದ್ದರು. ಆ ಸಮಯದಿಂದಲೂ ಇಬ್ಬರ ನಡುವೆ ಉತ್ತಮ ಒಡನಾಟ ಬೆಳೆದಿತ್ತು. ಕೆಲ ದಿನಗಳ ಹಿಂದೆ ದರ್ಶನ್ ಹುಟ್ಟುಹಬ್ಬವನ್ನು ಪವಿತ್ರಾ ಗೌಡ, ಮೇಘಾ ಶೆಟ್ಟಿ ಹಾಗೂ ಸೋನಲ್ ಆಚರಿಸಿದ್ದ ವೀಡಿಯೋ ವೈರಲ್ ಆಗಿತ್ತು.
ಮದುವೆಗೂ ಮುನ್ನ ತರುಣ್- ಸೋನಲ್ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಜೈಲಿಗೆ ಹೋಗಿ ದರ್ಶನ್ ಭೇಟಿ ಮಾಡಿ ಮದುವೆ ಆಮಂತ್ರಣ ಕೊಡಲ್ವಾ? ಎನ್ನುವ ಪ್ರಶ್ನೆ ಸೋನಲ್‌ಗೆ ಎದುರಾಗಿತ್ತು. ಅದಕ್ಕೆ ಉತ್ತರಿಸಿದ ಸೋನಲ್ "ಇಲ್ಲ ತರುಣ್ ಹೋಗಿ ಕರೆದಿದ್ದಾರೆ. ನನಗೆ ಅಲ್ಲಿಗೆ ಹೋಗಿ ದರ್ಶನ್ ಅವರನ್ನು ಭೇಟಿ ಮಾಡಲು ಇಷ್ಟವಿಲ್ಲ. ಯಾವಾಗಲೂ ಅವರನ್ನು ಬೇರೆ ರೀತಿಯಲ್ಲಿ ನೋಡಿದ್ದೆವು. ಈಗ ಅಲ್ಲಿ ಭೇಟಿ ಆಗುವುದು ಇಷ್ಟವಿಲ್ಲ" ಎಂದಿದ್ದರು.


Click it and Unblock the Notifications











