ಪುಟಾಣಿ ತರುಣ್ ಅಥವಾ ಸೋನಲ್; ತಾಯಿಯಾಗುವ ಬಗ್ಗೆ ನಟಿ ಸೋನಲ್ ಮನದಾಳ
ನಟ, ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮಂತೆರೋ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಕಳೆದ ವರ್ಷ ಆಗಸ್ಟ್ 11ಕ್ಕೆ ಜೋಡಿ ಹೊಸಬಾಳಿಗೆ ಕಾಲಿಟ್ಟಿದ್ದರು. ಶೀಘ್ರದಲ್ಲೇ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಲು ಜೋಡಿ ಸಿದ್ಧವಾಗುತ್ತಿದೆ. ಇದೆಲ್ಲದರ ನಡುವೆ ತಾಯಿಯಾಗುವ ಬಗ್ಗೆ ನಟಿ ಸೋನಲ್ ಮುಕ್ತವಾಗಿ ಮಾತನಾಡಿದ್ದಾರೆ.
ಮಂಗಳೂರು ಮೂಲದ ಸೋನಲ್ ಮೊದಲಿಗೆ ತುಳು ಸಿನಿಮಾಗಳಲ್ಲಿ ನಟಿಸಿದ್ದರು. 'ಅಭಿಸಾರಿಕೆ' ಚಿತ್ರದಲ್ಲಿ ನಟಿಸಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಇನ್ನು ಖ್ಯಾತ ಖಳನಟ ಸುಧೀರ್ ಪುತ್ರ ತರುಣ್ ಸುಧೀರ್ ಕೂಡ ತಂದೆ ಹಾದಿಯಲ್ಲಿ ಚಿತ್ರರಂಗಕ್ಕೆ ಬಂದವರು. ಆರಂಭದಲ್ಲಿ ನಟನಾಗಿ ಅದೃಷ್ಟಪರೀಕ್ಷೆ ಮಾಡಿಕೊಂಡಿದ್ದ ತರುಣ್ ಬಳಿಕ ಸಿನಿಮಾ ನಿರ್ದೇಶನ ಹಾಗೂ ನಿರ್ಮಾಣದತ್ತ ಮುಖ ಮಾಡಿದ್ದರು.

ದರ್ಶನ್ ನಟನೆಯ 'ರಾಬರ್ಟ್' ಚಿತ್ರವನ್ನು ತರುಣ್ ಸುಧೀರ್ ಕಟ್ಟಿಕೊಟ್ಟಿದ್ದರು. ಆ ಚಿತ್ರದಲ್ಲಿ ಸೋನಲ್ ಒಂದು ಪಾತ್ರ ಮಾಡಿದ್ದರು. ಅದೇ ಸಮಯದಲ್ಲಿ ಇಬ್ಬರ ಪರಿಚಯವಾಗಿತ್ತು. ಬಳಿಕ ಸ್ನೇಹಕ್ಕೆ ತಿರುಗಿತ್ತು. ಇಂಡಸ್ಟ್ರಿಯಲ್ಲಿ ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಟಾಕ್ ಶುರುವಾಗಿತ್ತು. ಅಲ್ಲಿಯವರೆಗೂ ಇಬ್ಬರಿಗೂ ಅಂತಹ ಆಲೋಚನೆಯೇ ಇರಲಿಲ್ಲವಂತೆ. 'ರಾಬರ್ಟ್' ಸಿನಿಮಾ ಮುಗಿದು 'ಕಾಟೇರ' ಸಮಯದಲ್ಲಿ ಮತ್ತೆ ಇಬ್ಬರ ನಡುವೆ ಮಾತು, ಸ್ನೇಹ ಶುರುವಾಗಿ ಕೊನಗೆ ಪ್ರೀತಿಸಿ ಮದುವೆ ಆಗಲು ನಿರ್ಧರಿಸಿದ್ದರು.
ಸಿನಿಮಾ ತಾರೆಯರ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಊಹಾಪೋಹ, ಅಂತೆಕಂತೆ ಸುದ್ದಿ ಹರಿದಾಡುತ್ತಿರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವದಂತಿ ವೈರಲ್ ಆಗುತ್ತಿರುತ್ತದೆ. ಇನ್ನು ಟ್ರೋಲ್ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿರುತ್ತದೆ. ತರುಣ್, ಸೋನಲ್ ಮದುವೆ ಘೋಷಣೆ ಆಗಿದ್ದಾಗಲೂ ಒಂದಷ್ಟು ಟ್ರೋಲ್ಸ್ ಎದುರಾಗಿತ್ತು. ಈ ಬಗ್ಗೆ 'ಬಾಸ್ ಟಿವಿ' ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಸೋನಲ್ ಮಾತನಾಡಿದ್ದಾರೆ.
"ನಾನು ಚಿತ್ರರಂಗದಲ್ಲಿ ಇದ್ದಿದ್ದರಿಂದ ಈ ಟ್ರೋಲ್ಸ್ ಎನ್ನುವುದು ಅರಿವಿತ್ತು. ಆದರೆ ನಮ್ಮ ಪೋಷಕರಿಗೆ ಇರಲಿಲ್ಲ. ನಾವು ಪಬ್ಲಿಕ್ ಫಿಗರ್ಸ್, ಕಾಮೆಂಟ್ ಮಾಡುವ ರೈಟ್ಸ್ ಇದೆ ಮಾಡ್ಲಿ. ಆದರೆ ಒಮ್ಮೆ ಅವ್ರು ಯೋಚನೆ ಮಾಡಬೇಕು, ನಮಗೂ ಫ್ಯಾಮಿಲಿ ಇರುತ್ತೆ. ತಾಯಿಗೆ ಮಗಳು ಮದುವೆ ಆಗುತ್ತಿದ್ದಾಳೆ ಎನ್ನುವುದೇ ದೊಡ್ಡ ಕಷ್ಟದ ಸಂಗತಿ. ಹೀಗಿರುವಾಗ ಟ್ರೋಲ್ಸ್ ಎನ್ನುವುದು ಮತ್ತಷ್ಟು ನೋವು ಕೊಡುತ್ತದೆ. ಆದರೂ ತರುಣ್ ಅವ್ರ ಮೇಲೆ ಎಲ್ಲರಿಗೂ ನಂಬಿಕೆ ಇತ್ತು. ಎಲ್ಲರ ಹಾರೈಕೆ ಇತ್ತು. ನಮ್ಮ ರಿಸೆಪ್ಷನ್‌ಗೆ 10 ಸಾವಿರ ಜನ ಬಂದಿದ್ದರು. ಕೆಲವ್ರು ಟ್ರೋಲ್ ಮಾಡಿದ್ರು, ಪರವಾಗಿಲ್ಲ, ನಾವು ಸಾಧಿಸಿ ತೋರಿಸಿದ್ದೇವೆ" ಎಂದಿದ್ದಾರೆ.

ನನಗೆ ಒಳ್ಳೆ ಅತ್ತೆ ಸಿಕ್ಕಿದ್ದಾರೆ. ಮದುವೆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಅತ್ತೆ- ಸೊಸೆ ಜಗಳ ಅಂತ ಯಾರೋ ಹಾಕಿದ್ರು. ಆದರೆ ಆ ರೀತಿ ಏನು ಇಲ್ಲ. ನಮ್ಮ ಅಮ್ಮನ ರೀತಿ ತರುಣ್ ಅವರ ಅಮ್ಮ ಕೂಡ. ನಾವಿಬ್ಬರು ಸ್ನೇಹಿತರ ಇರ್ತೀವಿ. ನಾವು ಕೆಲ ಟ್ರೋಲ್ಸ್ ನೋಡಿ ನಗ್ತೀವಿ. ಎಂಜಾಯ್ ಮಾಡ್ತೀವಿ. "ನನ್ನ ಪ್ರಗ್ನೆನ್ಸಿ ಬಗ್ಗೆ ಕೂಡ ಒಂದಷ್ಟು ಟ್ರೋಲ್ಸ್ ಬಂತು. ನಾವಿಬ್ಬರು ವೆಟರ್ನಿಟಿ ಆಸ್ಪತ್ರೆ ಉದ್ಘಾಟನೆಗೆ ಹೋಗಿದ್ವಿ, ಅದನ್ನು ನೋಡಿ ಪ್ರೆಗ್ನೆಂಟ್ ಅಂತೆ ಚೆಕಪ್‌ಗೆ ಹೋಗಿದ್ದೀವಿ ಅಂತ ಹಾಕಿದ್ರು" ಎಂದು ಸೋನಲ್ ನಕ್ಕಿದ್ದಾರೆ.
ಯಾರೋ ಒಮ್ಮೆ ಅಪಾರ್ಟ್‌ಮೆಂಟ್ ಲಿಫ್ಟ್‌ನಲ್ಲಿ ಕಂಗ್ರಾಟ್ಸ್, ನಾವು ಸೋಶಿಯಲ್ ಮೀಡಿಯಾದಲ್ಲಿ ನೋಡಿದ್ವಿ, ಗುಡ್ ನ್ಯೂಸ್ ಅಂತೆ ಅಂದ್ರು. ಅದನ್ನೆಲ್ಲಾ ನಾವು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಲ್ಲ. ನಾನು ನಮ್ಮ ಅತ್ತೆ ಬಹಳ ಎಂಜಾಯ್ ಮಾಡ್ತೀವಿ ಇದನ್ನೆಲ್ಲಾ. ತಲೆ ಕೆಡಿಸಿಕೊಳ್ಳಲ್ಲ ಎಂದಿದ್ದಾರೆ. ಪುಟಾನಿ ತರುಣ್ ಅಥವಾ ಪುಟಾಣಿ ಸೋನಲ್ ಯಾವಾಗ ಬರ್ತಾರೆ ಎಂದು ಪ್ರೆಗ್ನೆನ್ಸಿ ಪ್ಲ್ಯಾನಿಂಗ್ ಬಗ್ಗೆ ಕೇಳಿದ ಪ್ರಶ್ನೆಗೆ "ಪ್ಲ್ಯಾನಿಂಗ್ ಅಂತೆಲ್ಲಾ ಏನು ಇಲ್ಲ, ದೇವರ ಆಶೀರ್ವಾದ ಯಾವಾಗ ಆಗಿದ್ರು ಸರಿ, ಅದನ್ನು ನಾನು ಒಪ್ಪಿಕೊಳ್ತೀನಿ" ಎಂದು ಸೋನಲ್ ಮಂತೆರೋ ಹೇಳಿದ್ದಾರೆ.


Click it and Unblock the Notifications











