Sonu Gowda: ಸೋನು ಗೌಡ ಫುಲ್ ಬ್ಯುಸಿಯಂತೆ, ಕೈಯಲ್ಲಿರೋ ಚಿತ್ರಗಳೆಷ್ಟು?

By ಪ್ರಿಯಾ ದೊರೆ

'ಇಂತಿ ನಿನ್ನ ಪ್ರೀತಿಯ' ಸಿನಿಮಾ ಮೂಲಕ ಸೋನು ಗೌಡ ಕನ್ನಡ ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟರು. ಸೋನು ಗೌಡ ಅನೇಕ ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ಕಳೆದ ಹದಿನೈದು ವರ್ಷಗಳಿಂದ ಸೋನು ಗೌಡ ಸಿನಿಮಾ ಇಂಡಸ್ಟ್ರಿಯಲ್ಲಿದ್ದಾರೆ.

ಸೋನು ಗೌಡ ಕನ್ನಡ ಸಿನಿಮಾರಂಗದ ಅಪರೂಪದ ಪ್ರತಿಭೆ ಎಂದರೆ ತಪ್ಪಾಗಲಾರದು. 2018ರಲ್ಲಿ ಸೋನು ಗೌಡ ನಟಿಸಿದ 'ಗುಳ್ಟು' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕಮಾಲ್ ಮಾಡಿತ್ತು. ಇದಾದ ನಂತರ ಹಲವು ಚಿತ್ರಗಳಲ್ಲಿ ಸೋನು ಗೌಡ ನಟಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ಅಭಿನಯದ 'ಯುವರತ್ನ' ಚಿತ್ರಕ್ಕೂ ಸೋನು ಬಣ್ಣ ಹಚ್ಚಿದ್ದಾರೆ.

ಕಾರ್ಮಲ್ ಶಾಲೆಯಲ್ಲಿ ಸೋನು ಗೌಡ ವಿದ್ಯಾಬ್ಯಾಸ. ಇವರ ತಂದೆ ರಾಮಕೃಷ್ಣ ಕನ್ನಡ ಚಿತ್ರರಂಗದಲ್ಲಿ ಮೇಕಪ್ ಮ್ಯಾನ್ ಆಗಿದ್ದರು. ಇವರ ಮೂಲಕವೇ ಸೋನು ಗೌಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಸೋನು ಗೌಡ ಸಹೋದರಿ ನೇಹಾ ಗೌಡ ಕೂಡ ಕಿರುತೆರೆಯಲ್ಲಿದ್ದಾರೆ.

Actress Sonu Gowda Busy In 5 Upcomming Movie

ಸಾಲು ಸಾಲು ಚಿತ್ರಗಳಲ್ಲಿ ಸೋನು ಬ್ಯುಸಿ!

ಸೋನು ಗೌಡ ಈಗಾಗಲೇ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ, ತಮಿಳು ಹಾಗೂ ಮಳಯಾಳಂ ಚಿತ್ರಗಳಲ್ಲಿ ನಟಿಸಿರುವ ಸೋನು ಗೌಡ ಅಪರೂಪದ ಪ್ರತಿಭೆ. 'ಕಿರಗೂರಿನ ಗಯ್ಯಾಳಿಗಳು', 'ಯುವರತ್ನ', 'ಐ ಲವ್ ಯೂ', 'ರೆಡ್', 'ಗುಲಾಮ', 'ಪರಮೇಶ ಪಾನ್ ವಾಲಾ', 'ಹ್ಯಾಪಿ ನ್ಯೂ ಇಯರ್' ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಮಳಯಾಳಂನಲ್ಲಿ 'ಬೆಸ್ಟ್ ಆಕ್ಟರ್', 'ಡಬಲ್ಸ್', 'ಒನ್ ಬೈ ಟು' ಸೇರಿದಂತೆ ಇನ್ನೂ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಸೋನು ಕೈಯಲ್ಲಿ 5ಕ್ಕೂ ಹೆಚ್ಚು ಸಿನಿಮಾಗಳಿದ್ದು, 'ಶಬ್ದ', 'ಚಂಬಲ್', 'ವೆಡ್ಡಿಂಗ್ ಗಿಫ್ಟ್', 'ವಸುಂಧರಾದೇವಿ', 'ಟೆನೆಂಟ್', 'ಶಾಲಿನಿ ಐಪಿಎಸ್', 'ನೋಡಿದವರು ಏನಂತಾರೆ' ಎಂಬ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ವೆಡ್ಡಿಂಗ್ ಗಿಫ್ಟ್' ಸಿನಿಮಾ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು, ಮೇ ತಿಂಗಳಿನಲ್ಲಿ ಚಿತ್ರ ತೆರೆಗೆ ಬರಲಿದೆ ಎನ್ನಲಾಗಿದೆ. ಇನ್ನು ಈ ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ ಎಂದು ಸ್ವತಃ ಸೋನು ಗೌಡ ಅವರೇ ಹೇಳಿದ್ದಾರೆ.

Actress Sonu Gowda Busy In 5 Upcomming Movie

ದೇಶ ಸುತ್ತಿ ಕೋಶ ಓದುವ ಆಸೆ!

ಸಿನಿಮಾ ಬಿಟ್ಟು ನೋಡುವುದಾದರೆ ಸೋನು ಗೌಡ ಅವರಿಗೆ ವಿಭಿನ್ನ ಹವ್ಯಾಸಗಳು ಇದೆ. ಸೋನು ಗೌಡಗೆ ದೇಶ ಸುತ್ತಿ ಕೋಶ ಓದುವ ಆಸೆ ಇದೆಯಂತೆ. ಸೋನು ಗೌಡ ಸದ್ಯಕ್ಕೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಈ ಬ್ಯುಸಿ ಶೆಡ್ಯುಲ್‌ನಲ್ಲೂ ಸೋನು ಆಗಾಗ ಪ್ರವಾಸ ಕೈಗೊಳ್ಳುತ್ತಾರಂತೆ. ಇತ್ತೀಚೆಗಷ್ಟೇ ವಾರಣಾಸಿಗೆ ಹೋಗಿದ್ದವರು, ಮುಂದೆ ನಾರ್ತ್ ಇಂಡಿಯಾ ಟೂರು ಹೋಗುವ ಆಸೆ ಇದೆಯಂತೆ. ಸೋನುಗೆ ಓದುವ ಹವ್ಯಾಸವೂ ಇದೆಯಂತೆ.

ಕಿರುತೆರೆಯಲ್ಲೂ ಸೋನು ಮಿಂಚಿಂಗ್!

ಸಿನಿಮಾಗಳಲ್ಲಿ ಬ್ಯುಸಿ ಇರುವ ಸೋನು ಗೌಡ ಈಗ ಕಿರುತೆರೆಗೂ ಆಗಮಿಸಿದ್ದಾರೆ. 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ರಾಜನಂದಿನಿ ಪಾತ್ರ ನಿರ್ವಹಿಸುತ್ತಿರುವ ಸೋನು ಗೌಡ, ವರ್ಧನ್ ಗ್ರೂಪ್ಸ್‌ನ ಸಂಸ್ಥಾಪಕನ ಮಗಳಾಗಿರುತ್ತಾಳೆ. ಈಕೆಗೆ ಸುಭಾಷ್ ಪಾಟೀಲ್ ಪರಿಚಯವಾಗಿ ಆತನನ್ನು ಪ್ರೀತಿಸಲು ಶುರು ಮಾಡುತ್ತಾಳೆ. ಮುಂದೆ ಈಕೆಯ ಬದುಕಲ್ಲಿ ಏನೆಲ್ಲಾ ತಿರುವುಗಳು ಪಡೆದುಕೊಳ್ಳುತ್ತವೆ. ರಾಜನಂದಿನಿ ಸಾವಿಗೆ ಯಾರು ಕಾರಣ. ಸುಭಾಷ್ ಪಾಟೀಲ್ ಆರ್ಯವರ್ಧನ್ ಆಗಿದ್ದು ಹೇಗೆ ಎಂಬ ಕಥೆಯನ್ನು ಈ ಧಾರಾವಾಹಿಯಲ್ಲಿ ತೋರಿಸಲಾಗುತ್ತಿದೆ. ಸದ್ಯ ಧಾರಾವಾಹಿಯೂ ಕುತೂಹಲದ ಘಟ್ಟ ತಲುಪಿದೆ.

More from Filmibeat

English summary
Actress Sonu Gowda Busy In 5 Upcomming Movie Know More About It
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X