twitter
    For Quick Alerts
    ALLOW NOTIFICATIONS  
    For Daily Alerts

    ಸೌಂದರ್ಯ ಅಗಲಿ ಇಂದಿಗೆ 16 ವರ್ಷ: ಮಹಾನಟಿಯ ಮರೆಯಲಾಗದ ನೆನಪು

    |

    ಅದು 2004ರ ಏಪ್ರಿಲ್ 17. ಕನ್ನಡ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗಕ್ಕೆ ಬರಸಿಡಿಲಿನಂತೆ ಅಪ್ಪಳಿಸಿದ್ದು ಒಂದು ದುರಂತ ಘಟನೆಯ ಸುದ್ದಿ. ರಾಜಕೀಯ ಪ್ರಚಾರದ ಕಾರ್ಯಕ್ಕಾಗಿ ತಮ್ಮ ಸಹೋದರ ಅಮರನಾಥ್ ಜತೆಗೆ ಸಣ್ಣ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ನಟಿ ಸೌಂದರ್ಯ, ಭೀಕರ ಅಪಘಾತದಲ್ಲಿ ಅಸುನೀಗಿದ್ದಾರೆ ಎಂಬ ಸುದ್ದಿ ಆಘಾತ ಮೂಡಿಸಿತ್ತು. ಅವರೊಂದಿಗೆ ಅಣ್ಣ ಅಮರನಾಥ್ ಕೂಡ ಬಲಿಯಾಗಿದ್ದರು. ಅಂದು ಚಿತ್ರರಂಗ ಅಕ್ಷರಶಃ ರೋಧಿಸಿತ್ತು.

    ಸೌಂದರ್ಯ ಹೆಸರಿಗೆ ತಕ್ಕಂತೆ ಇದ್ದವರು. ಅವರ ರೂಪ ಮಾತ್ರವಲ್ಲ, ಗುಣದಲ್ಲಿಯೂ ಅವರ ವ್ಯಕ್ತಿತ್ವ ಅಷ್ಟೇ ಸುಂದರವಾಗಿತ್ತು. ವಿವಾದ, ಗಾಸಿಪ್ ಮುಂತಾದವುಗಳಿಂದ ದೂರವಿದ್ದರು. ಹೀಗಾಗಿ ಅದ್ಭುತ ನಟನೆಯ ಮೂಲಕವಷ್ಟೇ ಅಲ್ಲದೆ, ತಮ್ಮ ಸನ್ನಡತೆಯಿಂದಲೂ ಜನರ ಪ್ರತೀತಿಗೆ ಪಾತ್ರವಾಗಿದ್ದವರು. ಅವರ ಸಾವು ಇಂದಗೂ ಮರೆಯಲಾಗದ ನೋವನ್ನು ಉಳಿಸಿ ಹೋಗಿದೆ. ಮುಂದೆ ಓದಿ..

    ವೈದ್ಯೆಯಾಗಬೇಕೆಂದುಕೊಂಡಿದ್ದರು

    ವೈದ್ಯೆಯಾಗಬೇಕೆಂದುಕೊಂಡಿದ್ದರು

    ಸೌಂದರ್ಯ ಜನಿಸಿದ್ದು 1972ರ ಜುಲೈ 18ರಂದು. ಕಿರಿಯ ವಯಸ್ಸಿನಲ್ಲಿಯೇ ಅಮಿತಾಬ್ ಬಚ್ಚನ್ ಜತೆ (ಸೂರ್ಯವಂಶ್) ಚಿತ್ರದಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದವರು. ಅವರ ತಂದೆ ಉದ್ಯಮಿ, ಸಿನಿಮಾ ಬರಹಗಾರ-ನಿರ್ಮಾಪಕ ಕೆ.ಎಸ್. ಸತ್ಯನಾರಾಯಣ. ವೈದ್ಯೆಯಾಗಬೇಕು ಎಂಬ ಹಂಬಲ ಹೊಂದಿದ್ದವರನ್ನು ಆಕಸ್ಮಿಕವಾಗಿ ಸಿನಿಮಾ ರಂಗ ಸೆಳೆದುಕೊಂಡಿತು. ಅಲ್ಲಿಂದ ಅವರು ಮತ್ತೆ ಹೊರಹೋಗಲು ಆಗಲಿಲ್ಲ.

    ಸೌಂದರ್ಯ ಬದುಕಿದ್ದರೆ...

    ಸೌಂದರ್ಯ ಬದುಕಿದ್ದರೆ...

    ನಟಿ ಸೌಂದರ್ಯ ಮರಣ ಹೊಂದುವಾಗ ಅವರ ವಯಸ್ಸು ಕೇವಲ 31. ಅವರು ಬದುಕಿದ್ದರೆ ಈ 16 ವರ್ಷಗಳಲ್ಲಿ ಇನ್ನೆಷ್ಟು ಅದ್ಭುತ ಸಿನಿಮಾಗಳನ್ನು ನೀಡುತ್ತಿದ್ದರೇನೋ. ಏಕೆಂದರೆ ಅವರಲ್ಲಿ ಸಿನಿಮಾ ಅನುಭವ ವಿಶಿಷ್ಟ ಪ್ರಬುದ್ಧತೆಯನ್ನು ಮೂಡಿಸಿತ್ತು. ಆ ವಯಸ್ಸಿನಲ್ಲಿಯೇ ನಿರ್ಮಾಪಕರಾಗಿ ಕನ್ನಡದಲ್ಲಿ 'ದ್ವೀಪ' ಚಿತ್ರವನ್ನು ನಿರ್ಮಿಸಿದ್ದರು. ಈ ಚಿತ್ರ ಸ್ವರ್ಣ ಕಮಲ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿತ್ತು.

    ಸೋದರ ಮಾವನ ಜತೆ ಮದುವೆ

    ಸೋದರ ಮಾವನ ಜತೆ ಮದುವೆ

    ಸೌಂದರ್ಯ ಅಗಲುವ ಒಂದು ವರ್ಷದ ಹಿಂದಷ್ಟೇ ಮದುವೆಯಾಗಿದ್ದರು (2003ರ ಏಪ್ರಿಲ್ 7). ಸಂಬಂಧಿಯೇ ಆದ ಸಾಫ್ಟ್‌ವೇರ್ ಉದ್ಯಮಿ ಜಿ.ಎಸ್. ರಘು, ಸೌಂದರ್ಯ ಜತೆಗೆ ಸಪ್ತಪದಿ ತುಳಿದಿದ್ದರು. ಇಬ್ಬರೂ ಬಾಲ್ಯದ ಒಡನಾಡಿಗಳಾಗಿದ್ದರಿಂದ ಅವರ ಬಾಂಧವ್ಯ ಸೊಗಸಾಗಿತ್ತು. ಆದರೆ ವಿಧಿಯಾಟ ಬೇರೆಯದೇ ಆಗಿತ್ತು. ಈ ಚೆಂದ ಜೋಡಿಯನ್ನು ವಿಧಿ ಸಹಿಸಿಕೊಳ್ಳಲಿಲ್ಲ.

    ಪತಿಗಾಗಿ ಶೂಟಿಂಗ್ ನಿಲ್ಲಿಸಿ ಬಂದಿದ್ದರು

    ಪತಿಗಾಗಿ ಶೂಟಿಂಗ್ ನಿಲ್ಲಿಸಿ ಬಂದಿದ್ದರು

    ಏಪ್ರಿಲ್ 6 ರಘು ಅವರ ಜನ್ಮದಿನ. ಆಗ ಸೌಂದರ್ಯ ಮೈಸೂರಿನಲ್ಲಿ ಆಪ್ತಮಿತ್ರ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು. ಗಂಡನ ಜನ್ಮದಿನದಂದು ಜತೆಯಲ್ಲಿ ಇರಲಿಲ್ಲವೆಂದರೆ ಹೇಗೆ ಎಂದು, ನಿರ್ದೇಶಕರಿಗೆ ಮನವಿ ಮಾಡಿ ಅನುಮತಿ ಪಡೆದು ಬೆಂಗಳೂರಿಗೆ ಬಂದು, ಪತಿಗೆ ವಿಷ್ ಮಾಡಿದ್ದರು. ಅವರ ಗೆಳೆಯರೊಂದಿಗೆ ಸಂತೋಷಕೂಟದಲ್ಲಿ ಭಾಗಿಯಾಗಿದ್ದರು. ಆದರೆ ಅದಾಗಿ ಕೇವಲ 11 ದಿನಗಳಲ್ಲಿಯೇ ಸೌಂದರ್ಯ ಮರೆಯಾದರು.

    ಎರಡು ವಾರದ ಬಳಿಕ ಅದೇ ಜಾಗಕ್ಕೆ ಹೋಗುವಾಗ...

    ಎರಡು ವಾರದ ಬಳಿಕ ಅದೇ ಜಾಗಕ್ಕೆ ಹೋಗುವಾಗ...

    ಆಪ್ತಮಿತ್ರ ಚಿತ್ರದ ಕೊನೆಯ ಹಂತದ ಶೂಟಿಂಗ್ ಮೈಸೂರಿನ ಗೋಸಾಯಿ ಘಾಟ್‌ನಲ್ಲಿ ನಡೆದಿತ್ತು. ಸೌಂದರ್ಯ ನಿಧನರಾಗುವ ಎರಡು ವಾರಗಳ ಹಿಂದಷ್ಟೇ ಸೌಂದರ್ಯ ಪತಿ ರಘು ಮತ್ತು ಅವರ ಅಕ್ಕ (ಸೌಂದರ್ಯ ತಾಯಿ) ಶೂಟಿಂಗ್ ನೋಡಲು ಅಲ್ಲಿಗೆ ತೆರಳಿದ್ದರು. ಅಲ್ಲಿ ವಿಷ್ಣುವರ್ಧನ್ ಮತ್ತು ಪ್ರೇಮಾ ಸೇರಿದಂತೆ ಎಲ್ಲರೂ ಇದ್ದರು. ಆದರೆ ಎರಡು ವಾರದ ಬಳಿಕ ಅದೇ ಜಾಗಕ್ಕೆ ಸೌಂದರ್ಯ ಮತ್ತು ಅಮರನಾಥ್ ಅಸ್ಥಿಯನ್ನು ಬಿಡಲು ಹೋಗುವಂತಾಯಿತು. ಇದು ತಮ್ಮ ನೋವನ್ನು ಹೆಚ್ಚಿಸಿತ್ತು ಎಂದು ರಘು ಸಂದರ್ಶನವೊಂದರಲ್ಲಿ ತಿಳಿಸಿದ್ದರು.

    English summary
    On 2004, April 17 cinema industry has lost a great personality, actress Soundarya.
    Friday, April 17, 2020, 9:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X