For Quick Alerts
  ALLOW NOTIFICATIONS  
  For Daily Alerts

  ರೋರಿಂಗ್ ಸ್ಟಾರ್ ಶ್ರೀ ಮುರಳಿ ಜೊತೆಯಾದ ಶ್ರೀಲೀಲಾ

  By Pavithra
  |
  ಶ್ರೀ ಮುರಳಿ ಹೊಸ ಸಿನಿಮಾ ನಾಯಕಿ ಇವಳೇ. | Filmibeat Kannada

  'ಭರ್ಜರಿ' ಚಿತ್ರ ಯಶಸ್ಸಿನ ನಂತರ ನಿರ್ದೇಶಕ ಚೇತನ್ ಕುಮಾರ್ ರೋರಿಂಗ್ ಸ್ಟಾರ್ ಶ್ರೀ ಮುರಳಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿನ್ನೆಯಷ್ಟೇ ಜೋರು ಎನ್ನುವ ಪದಕ್ಕೆ ಇನ್ನೊಂದು ಹೆಸರು ಕೊಡ್ತಿರಾ? ಅಂತ ಫೇಸ್ ಬುಕ್ ಮೂಲಕ ಅಭಿಮಾನಿಗಳನ್ನ ಕೇಳಿದ್ದ ಶ್ರೀ ಮುರಳಿ ಇಂದು ತಮ್ಮ ಚಿತ್ರದ ನಾಯಕಿ ಯಾರು ಎನ್ನುವುದನ್ನು ತಿಳಿಸಿದ್ದಾರೆ.

  ಎ ಪಿ ಅರ್ಜುನ್ ನಿರ್ದೇಶನದ 'ಕಿಸ್' ಸಿನಿಮಾದಲ್ಲಿ ನಾಯಕಿ ಆಗಿದ್ದ ನಟಿ ಶ್ರೀ ಲೀಲಾ ಇದೇ ಮೊದಲ ಬಾರಿಗೆ ಶ್ರೀ ಮುರಳಿ ಜೊತೆಯಾಗಿ ಅಭಿನಯ ಮಾಡುತ್ತಿದ್ದಾರೆ. ಶ್ರೀ ಲೀಲಾ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರತಂಡ ಈ ಸುದ್ದಿಯನ್ನ ಹೊರಹಾಕಿದೆ.

  ಚೇತನ್ ನಿರ್ದೇಶನದಲ್ಲಿ 'ಟ್ರೆಂಡ್' ಬದಲಿಸಿದ ಶ್ರೀಮುರಳಿ ಚೇತನ್ ನಿರ್ದೇಶನದಲ್ಲಿ 'ಟ್ರೆಂಡ್' ಬದಲಿಸಿದ ಶ್ರೀಮುರಳಿ

  ಸಾಕಷ್ಟು ದಿನಗಳ ನಂತರ ಶ್ರೀಮುರಳಿ ಫ್ಯಾಮಿಲಿ ಎಂಟರ್ಟೈನ್ ಮೆಂಟ್ ಸಿನಿಮಾದಲ್ಲಿ ಮತ್ತೆ ಅಭಿನಯ ಮಾಡುತ್ತಿದ್ದು 'ಬಹದ್ದೂರ್' ಹಾಗೂ 'ಭರ್ಜರಿ'ಯಂತಹ ಹಿಟ್ ಚಿತ್ರಗಳನ್ನು ನೀಡಿರುವ ಚೇತನ್ ಹ್ಯಾಟ್ರಿಕ್ ಹಿಟ್ ಸಿನಿಮಾ ನೀಡಲು ತಯಾರಿ ಮಾಡಿಕೊಂಡಿದ್ದಾರೆ.

  ಇನ್ನು ಪ್ರೀ ಪ್ರೊಡಕ್ಷನ್ ಕೆಲಸ ಅಂತ್ಯದಲ್ಲಿದ್ದು ಮುಂದಿನ ವಾರದಲ್ಲಿ ಸಿನಿಮಾದ ಟೈಟಲ್ ಅನೌನ್ಸ್ ಮಾಡುವ ತಯಾರಿ ಮಾಡಿಕೊಂಡಿದ್ದಾರೆ ನಿರ್ದೇಶಕ ಚೇತನ್. ಅಂದಹಾಗೆ, ಶ್ರೀ ಮುರಳಿ ಅವರ ಸ್ನೇಹಿತರೇ ಸೇರಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

  English summary
  Kannada actress Sree Leela is the heroine of the new movie starring actor Sri Murali. Chetan Kumar is directing this untitled film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X