»   » ಸಿನಿಮಾದಲ್ಲಿ ನಟಿಸಲು ಬೆತ್ತಲೆ ಫೋಟೋ ಕೊಡಬೇಕಂತೆ: ನಟಿ ಬಿಚ್ಚಿಟ್ಟ ಸ್ಪೋಟಕ ಸುದ್ದಿ

ಸಿನಿಮಾದಲ್ಲಿ ನಟಿಸಲು ಬೆತ್ತಲೆ ಫೋಟೋ ಕೊಡಬೇಕಂತೆ: ನಟಿ ಬಿಚ್ಚಿಟ್ಟ ಸ್ಪೋಟಕ ಸುದ್ದಿ

Posted By:
Subscribe to Filmibeat Kannada

ಸಿನಿಮಾ ಇಂಡಸ್ಟ್ರಿಯಲ್ಲಿ ಮೋಸ ಮಾಡುವವರು ಹೆಚ್ಚಾಗಿದ್ದಾರೆ ಎನ್ನುವುದನ್ನ ದಿನನಿತ್ಯ ವರದಿಯಾಗುತ್ತಲೆ ಇರುತ್ತೆ. ಕಿರುಕುಳ, ಮೋಸಕ್ಕೆ ಒಳಗಾದ ಹಲವು ನಟಿಯರು ಇದನ್ನ ಬಹಿರಂಗವಾಗಿ ಹೇಳಿಕೊಂಡಿರುವ ಸಾಕಷ್ಟು ಉದಾಹರಣೆಗಳಿವೆ.

ಹೀಗಿರುವಾಗ, ಸಿನಿಮಾ ಹೆಸರಲ್ಲಿ ಯುವತಿಯರಿಗೆ ಮೋಸ ಮಾಡುವ ಖತರ್ನಾಕ್ ವ್ಯಕ್ತಿ ಬಗ್ಗೆ ನಟಿಯೊಬ್ಬರು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಸಿನಿಮಾದಲ್ಲಿ ಅವಕಾಶ ಬೇಕು ಅಂದ್ರೆ ತಮ್ಮ ಬೆತ್ತಲೆ ಫೋಟೋ ಕಳುಹಿಸಿ ಎಂದು ಈ ವ್ಯಕ್ತಿ ಕೇಳುತ್ತಾನಂತೆ.

ಇವನು ನಿರ್ದೇಶಕನಲ್ಲ, ನಿರ್ಮಾಪನಲ್ಲ, ನಟನೂ ಅಲ್ಲ. ಆದ್ರೂ, ಸಿನಿಮಾ ಹೆಸರಿನಲ್ಲಿ ಯುವತಿಯರಿಗೆ ಮೋಸ ಮಾಡುತ್ತಾನೆಂದು ಕಿರುತೆರೆ ಹಾಗೂ ಸಿನಿಮಾ ನಟಿ ಶ್ರೀಮಯ್ಯ ಸ್ಪೋಟಕ ಮಾಹಿತಿಯನ್ನ ಬಿಚ್ಚಿಟ್ಟಿದ್ದಾರೆ. ಯಾರದು? ಮುಂದೆ ಓದಿ....

ಚಾನ್ಸ್ ಕೊಡಿಸ್ತಿನಿ ಎಂದು ಮೋಸ

''ಚಂದ್ರಕಾಂತ್ ಸೂನದ್ ಎಂಬ ವ್ಯಕ್ತಿಯೊಬ್ಬ ಡಾಕ್ಯೂಮೆಂಟರಿ ಸಿನಿಮಾ ಮಾಡ್ತೀನಿ, ಅದರಲ್ಲಿ ನಿಮಗೆ ಅವಕಾಶ ಕೊಡ್ತೀನಿ ಎಂದು ಹೇಳಿಕೊಂಡು ಯುವತಿಯರಿಗೆ ಆಮಿಶಾ ತೋರಿಸುತ್ತಾನೆ. ನಂತರ ಅವರ ಬಳಿ ಅಸಹ್ಯವಾಗಿ ನಡೆದುಕೊಳ್ಳುತ್ತಾನೆ'' - ಶ್ರೀ ಮಯ್ಯ, ನಟಿ

ಹೊಸಬರೇ ಇವನ ಟಾರ್ಗೆಟ್

''ಇವನಿಗೆ ಹೊಸಬರೇ ಟಾರ್ಗೆಟ್. ಯಾಕಂದ್ರೆ, ಇವರಿಗೆ ಸಾಕಷ್ಟು ಕನಸುಗಳು ಇರುತ್ತೆ. ಇಂಡಸ್ಟ್ರಿ ಬಗ್ಗೆ ಗೊತ್ತಿರಲ್ಲ. ಯಾರ ಪರಿಚಯವೂ ಇರಲ್ಲ. ಹೀಗಾಗಿ, ಬೇಗ ನಂಬಿಸಬಹುದು ಅಂತ'' - ಶ್ರೀ ಮಯ್ಯ, ನಟಿ

ಬೆತ್ತಲೆ ಫೋಟೋ ಕೇಳ್ತಾನೆ

''ಈ ಡಾಕ್ಯೂಮೆಂಟರಿಗೆ ನಿಮ್ಮ ಫೋಟೋ ಬೇಕು ಎಂದು ಕೇಳ್ತಾನೆ. ಸಾಮಾನ್ಯವಾದ ಫೋಟೋಗಳನ್ನ ಕೊಟ್ಟರೆ ಒಪ್ಪದ ಈತ, ತುಂಬಾ ಎಕ್ಸ್ ಪೋಸ್ ಮಾಡಿರುವ ಫೋಟೋ ಕೊಡಿ, ಪೂರ್ತಿ ದೇಹವನ್ನ ತೋರಿಸುವಂತಹ ಫೋಟೋ ಕೊಡಿ ಎಂದು ಕೇಳುತ್ತಾನೆ'' - ಶ್ರೀ ಮಯ್ಯ, ನಟಿ

ನನಗೂ ಇವನು ಕಾಡಿದ್ದ

''ನನಗೂ ಇವನು ಪರಿಚಯವಿದ್ದ. ನನ್ನ ವಿಚಾರದಲ್ಲೂ ಈ ರೀತಿಯ ಪ್ರಯತ್ನ ಮಾಡಿದ್ದ. ಆದ್ರೆ, ನನಗೆ ಇವನ ವಿಷ್ಯ ಗೊತ್ತಾಯಿತು. ನಂತರ ನಾನು ಅವನನ್ನ ದೂರವಿಟ್ಟೆ. ದಯವಿಟ್ಟು ಇವನಿಂದ ಹುಷಾರ್ ಆಗಿರಿ. ಇವನ ಫೇಸ್ ಬುಕ್ ಅಕೌಂಟ್ ಬ್ಲ್ಯಾಕ್ ಮಾಡಿದ್ದೀನಿ. ಅವನು ಕೂಡ ಡಿ-ಆಕ್ಟಿವೇಟ್ ಮಾಡಿದ್ದಾನೆ''-, ಶ್ರೀ ಮಯ್ಯ, ನಟಿ

ಇಂಡಸ್ಟ್ರಿಯಲ್ಲಿ ಈ ತರ ವ್ಯಕ್ತಿಗಳು ತುಂಬಾ ಇದ್ದಾರೆ

''ಇಂಡಸ್ಟ್ರಿಯಲ್ಲಿ ತುಂಬಾ ಒಳ್ಳೆಯವರು ಇದ್ದಾರೆ. ಇಂತವರಿಂದ ಎಲ್ಲರಿಗೂ ಕೆಟ್ಟ ಹೆಸರು. ಇಂತಹ ವ್ಯಕ್ತಿಗಳಿಂದ ಹುಷಾರ್ ಆಗಿರಿ'' ಎಂದು ಸಿನಿಮಾ ಎಂಬ ಹೆಸರಿನಲ್ಲಿ ಯಾವ ರೀತಿ ವ್ಯಕ್ತಿಗಳು ಮೋಸ ಮಾಡುತ್ತಾರೆ ಎಂದು ನಟಿ ಬಹಿರಂಗಪಡಿಸಿದ್ದಾರೆ.

ನಟಿ ಶ್ರೀಮಯ್ಯ ಮಾತನಾಡಿರುವ ಪೂರ್ತಿ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ....

English summary
Actress Sree Mayya revealed the possibility of cheating in film industry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada