ಶ್ರೀಲೀಲಾ 21ನೇ ಹುಟ್ಟುಹಬ್ಬ: ಡಾಕ್ಟರ್ ಆಗಲಿದ್ದಾರೆ ಕಿಸ್ ಬೆಡಗಿ!
ಕನ್ನಡ ಸಿನಿಮಾರಂಗ ಕಂಡ ಯಶಸ್ವಿ ನಟಿಯರಲ್ಲಿ ನಟಿ ಶ್ರೀಲೀಲಾ ಕೂಡ ಒಬ್ಬರು. ಶ್ರೀಲೀಲಾ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು, ಇದೀಗ ತೆಲುಗು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಕನ್ನಡದಲ್ಲಿ ಮೂರು ಸಿನಿಮಾಗಳನ್ನು ಮಾಡಿದ ಶ್ರೀಲೀಲಾ ಕಡಿಮೆ ಸಮಯದಲ್ಲಿಯೇ ಹೆಚ್ಚು ಖ್ಯಾತಿ ಗಳಿಸಿದ್ದಾರೆ.
ಈಗ ಶ್ರೀಲೀಲಾ ಬಗ್ಗೆ ಮಾತನಾಡೋಕೆ ಕಾರಣ ಆಕೆಯ ಹುಟ್ಟುಹಬ್ಬ. ಇಂದು ಅಂದರೆ ಜೂನ್ 14ರಂದು ನಟಿ ಶ್ರೀಲೀಲಾ ಹುಟ್ಟುಹಬ್ಬ. ಹುಟ್ಟುಹಬ್ಬ ಅಂದಾಕ್ಷಣ ಆಕೆಯ ವಯಸ್ಸು ಎಷ್ಟಿರಬಹುದು ಎನ್ನುವ ಕುತೂಹಲ ಹುಟ್ಟಿಕೊಳ್ಳುತ್ತೆ. ಹಲವು ತಾರೆಯರು ವಯಸ್ಸು ಹೇಳಿಕೊಳ್ಳುವುದಿಲ್ಲ. ಆದರೆ ಶ್ರೀಲೀಲಾ ವಯಸ್ಸು ಗೊಟ್ಟಾಗಿ ಉಳಿದಿಲ್ಲ.
ಶ್ರೀಲೀಲಾ 20 ತುಂಬುವ ಮೊದಲೇ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟವರು. 2001ರಲ್ಲಿ ಶ್ರೀಲೀಲಾ ಜನಿಸಿದರು. ಹಾಗಾಗಿ ಈಗ 21 ವರ್ಷ ತುಂಬಿದೆ. ಈ ಮುದ್ದು ಮುಖದ ಚೆಲುವೆಯ ಸಿನಿಮಾ ಜರ್ನಿ ಮತ್ತು ವೈಯಕ್ತಿಕ ಬದುಕಿನ ಕೆಲವು ಇಂಟ್ರಸ್ಟಿಂಗ್ ವಿಚಾರಗಳು ಇಲ್ಲಿದೆ ಮುಂದೆ ಓದಿ....
ಹೈದ್ರಾಬಾದ್‌ನಲ್ಲಿ ಶ್ರೀಲೀಲಾ ಹುಟ್ಟಹಬ್ಬ ಆಚರಣೆ!
ನಟಿ ಶ್ರೀಲೀಲಾ ಸದ್ಯ ಹೃದ್ರಾಬಾದ್‌ನಲ್ಲಿ ಇದ್ದಾರೆ. ಅಲ್ಲೇ ಹುಟ್ಟುಹಬ್ಬದ ಆಚರೆಣೆ ಮಾಡಿಕೊಳ್ಳುತ್ತಿದ್ದಾರೆ. ಹೈದ್ರಾಬಾದ್‌ನ ಪದ್ದಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಶ್ರೀಲೀಲಾ ಮೊದಲು ಪರಿಚಯವಾಗಿದ್ದು 'ಕಿಸ್' ಸಿನಿಮಾದ ಮೂಲಕ. ಮೊದಲ ಸಿನಿಮಾ ಆದ್ರೂ ಕೂಡ ತನ್ನ ಬಬ್ಲಿ ನಟನೆಯಿಂದ ಮತ್ತು ಕ್ಯೂಟ್ ಲುಕ್‌ನಿಂದ ಶ್ರೀಲೀಲಾ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡರು. ಅಂದಗಾತಿ ಶ್ರೀಲೀಲಾ ಲುಕ್‌ನಲ್ಲಿ ಮಾತ್ರವಲ್ಲದೆ, ಅಭಿನಯದಲ್ಲೂ ಸೈ ಎನಿಸಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಶುರುವಾದ ಶ್ರೀಲೀಲಾ ಜರ್ನಿ ಇದೀಗ ಉನ್ನತ ಮಟ್ಟದಲ್ಲಿ ಸಾಗಿದೆ.
ಶ್ರೀಲೀಲಾ ಕನ್ನಡದಲ್ಲಿ 3 ಸಿನಿಮಾ!
ಮೊದಲ ಸಿನಿಮಾ 'ಕಿಸ್' ಬಳಿಕ ಕನ್ನಡದಲ್ಲಿ ಶ್ರೀಲೀಲಾ ಮತ್ತೆರಡು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟ ಶ್ರೀಮುರಳಿ ಜೊತೆಗೆ 'ಭರಾಟೆ' ಚಿತ್ರದಲ್ಲಿ ನಟಿಸಿದ್ದಾರೆ. ನಂತರ ಬಂದಿದ್ದು ಮತ್ತು 'ಬೈ ಟು ಲವ್' ಸಿನಿಮಾ. ಈ ಮೂರು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಭಿನ್ನ ಶೇಡ್‌ಗಳಲ್ಲಿ ಶ್ರೀಲೀಲಾ ಕಾಣಿಸಿಕೊಂಡಿದ್ದಾರೆ. ನಂತರ ಶ್ರೀಲೀಲಾಗೆ ತೆಲುಗಿನಿಂದ ಅವಕಾಶಗಳು ಬರುತ್ತಿವೆ. ಹಾಗಾಗಿ ಸದ್ಯ ತೆಲುಗು ಸಿನಿಮಾಗಳಲ್ಲಿ ನಟಿಸೋಕೆ ಶ್ರೀಲೀಲಾ ಮುಂದಾಗಿದ್ದಾರೆ.
'ಪೆಳ್ಳಿ ಸಂದಡಿ' ಮೂಲಕ ತೆಲುಗಿಗೆ ಎಂಟ್ರಿ!
ಇನ್ನು ಶ್ರೀಲೀಲಾ 'ಪೆಳ್ಳಿ ಸಂದಡಿ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ತೆಲುಗಿನಲ್ಲಿ ಒಂದು ಸಿನಿಮಾ ಮಾಡುತ್ತಲೆ ಹೆಚ್ಚಿನ ಗಮನ ಸೆಳೆದಿದ್ದಾರೆ. ಹಾಗಾಗಿ ಶ್ರೀಲೀಲಾಗೆ ಸಾಲು-ಸಾಲು ತೆಲುಗು ಸಿನಿಮಾಗಳ ಅವಕಾಶ ಒದಗಿಬಂದಿದೆ. ಸದ್ಯ ರವಿತೇಜ ಜೊತೆಗೆ 'ಧಮಾಕಾ' ಚಿತ್ರದಲ್ಲಿ ನಟಿಸುತ್ತಿದ್ದು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಇದರ ಜೊತೆಗೆ ಇತ್ತೀಚೆಗೆ ಕಿರೀಟಿ ರೆಡ್ಡಿ ಜೊತೆಗೆ ನಟಿಸುತ್ತಿರುವ ಸಿನಿಮಾ ಲಾಂಚ್ ಆಗಿದೆ. ಇನ್ನುಳಿದಂತೆ ಹಲವು ತೆಲುಗು ನಾಯಕ ಜೊತೆಗೆ ಶ್ರೀಲೀಲಾ ಹೆಸರು ಕೇಳಿ ಬರ್ತಿದೆ.
ಕಾಸ್ಮೆಟಿಕ್ ಡಾಕ್ಟರ್ ಆಗ್ತಾರೆ ಶ್ರೀಲೀಲಾ!
ಇನ್ನು 'ಶ್ರೀಲೀಲಾ' ವೈಯಕ್ತಿಕ ವಿಚಾರಕ್ಕೆ ಬರುವುದಾದರೆ, ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬಳಿಕ ತಮ್ಮ ತಂದೆಯ ವಿಚಾರವಾಗಿ ಸುದ್ದಿಯಾಗಿದ್ದರು. ಟಾಲಿವುಡ್‌ನಲ್ಲಿ ಈ ವಿಚಾರ ಹೆಚ್ಚು ಸದ್ದು ಮಾಡಿತ್ತು. ಇನ್ನು ಶ್ರೀಲೀಲಾ ಸಂಪೂರ್ಣವಾಗಿ ನಟನೆಯನ್ನೇ ಅವಲಂಬಿಸಿಲ್ಲ. ಶ್ರೀಲೀಲಾ ಕಾಸ್ಮೆಟಿಕ್ ಡಾಕ್ಟರ್ ಆಗಲಿದ್ದಾರೆ. ಸದ್ಯಕ್ಕೆ ಎಂಬಿಬಿಎಸ್ ಓದುತ್ತಿರುವ ಶ್ರೀಲೀಲಾ ಸದ್ಯದಲ್ಲಿಯೇ ಡಾಕ್ಟರ್ ಪಟ್ಟವನ್ನು ಅಲಂಕರಿಸಲಿದ್ದಾರೆ.


Click it and Unblock the Notifications











