For Quick Alerts
  ALLOW NOTIFICATIONS  
  For Daily Alerts

  ಸದ್ದಿಲ್ಲದೆ ಚಿತ್ರರಂಗದಲ್ಲಿ ಶೈನ್ ಆಗುತ್ತಿದ್ದಾಳೆ ಶ್ರೀಲೀಲಾ

  By Pavithra
  |
  ಮಾಡಿದ್ದು ಒಂದೇ ಸಿನಿಮಾ ಆದ್ರೂ ಈಕೆ ಕೈಯಲ್ಲಿದೆ ದೊಡ್ಡ ದೊಡ್ಡ ಆಫರ್ಸ್ | FIlmibeat Kannada

  ಕನ್ನಡ ಸಿನಿಮಾರಂಗದಲ್ಲಿ ನಾಯಕ ನಟಿಯರ ಅಭಾವ ಹೆಚ್ಚಾಗಿದೆ. ಪ್ರೇಕ್ಷಕರು ಅದೇ ನಾಯಕಿಯರನ್ನ ನೋಡಿ ನೋಡಿ ಸಾಕಾಗಿದೆ ಎನ್ನುವ ಅಭಿಪ್ರಾಯ ತಿಳಿಸುತ್ತಲೇ ಬರುತ್ತಿದ್ದಾರೆ. ಇನ್ನೊಂದು ಕಡೆ ಪರ ಭಾಷೆಯಿಂದ ಹೀರೋಯಿನ್ಸ್ ಗಳನ್ನ ಕರೆ ತಂದರೆ 'ಹಿತ್ತಲ ಗಿಡ ಮದ್ದಲ್ಲ.. ನಮ್ಮ ನಾಯಕಿಯರಿಗೆ ಬೆಲೆ ಇಲ್ಲ..' ಎನ್ನುವ ಮಾತು ಕೇಳಿ ಬರುತ್ತೆ.

  ಸದ್ಯ ಈಗ ನಾಯಕಿಯರ ಬಗ್ಗೆ ಚರ್ಚೆ ಯಾಕಪ್ಪ ಅಂದರೆ ಕನ್ನಡದಲ್ಲೊಬ್ಬಳು ದೀಪಿಕಾ ಪಡುಕೋಣೆ ಹುಟ್ಟುಕೊಂಡಿದ್ದಾಳೆ. ಹೌದು, ಅಭಿನಯಿಸಿದ ಮೊದಲನೇ ಚಿತ್ರದಲ್ಲೇ ಭರವಸೆ ಮೂಡಿಸಿ ಚಿತ್ರ ಬಿಡುಗಡೆಗೂ ಮುನ್ನವೇ ಕನ್ನಡದ ಸ್ಟಾರ್ ನಾಯಕರ ಜೊತೆಯಲ್ಲಿ ಅಭಿನಯಿಸಲು ಅವಕಾಶ ಪಡೆದುಕೊಂಡಿದ್ದಾರೆ.

  'ಜೋರು' ಎಂಬ ಪದಕ್ಕೆ ಇನ್ನೊಂದು ಹೆಸರು ಕೊಡ್ತೀರಾ.?'ಜೋರು' ಎಂಬ ಪದಕ್ಕೆ ಇನ್ನೊಂದು ಹೆಸರು ಕೊಡ್ತೀರಾ.?

  ಕನ್ನಡದ ನಟಿ ಶ್ರೀಲೀಲಾ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸಖತ್ ಸುದ್ದಿ ಮಾಡುತ್ತಿದ್ದಾರೆ. ಎ ಪಿ ಅರ್ಜುನ್ ಆಕ್ಷನ್ ಕಟ್ ಹೇಳಿರುವ 'ಕಿಸ್' ಸಿನಿಮಾದಲ್ಲಿ ಶ್ರೀಲೀಲಾ ನಾಯಕಿಯಾಗಿ ಅಭಿನಯ ಮಾಡುತ್ತಿದ್ದು ಇದರ ಜೊತೆಯಲ್ಲಿ ಎರಡು ಚಿತ್ರದಲ್ಲಿ ಅಭಿನಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅಂದಹಾಗೆ, ಯಾರು ಈ ಶ್ರೀ ಲೀಲಾ? ಆಕೆ ಅಭಿನಯಿಸುತ್ತಿರುವ ಚಿತ್ರಗಳು ಯಾವುವು? ಎಂಬ ಸಂಪೂರ್ಣ ಮಾಹಿತಿ ಮುಂದಿದೆ ಓದಿ...

  ಚಂದನವನದ ಉದಯೋನ್ಮುಖ ನಟಿ

  ಚಂದನವನದ ಉದಯೋನ್ಮುಖ ನಟಿ

  ಶ್ರೀ ಲೀಲಾ ಸದ್ಯ ಕನ್ನಡ ಸಿನಿಮಾರಂಗಕ್ಕೆ 'ಕಿಸ್' ಚಿತ್ರದ ಮೂಲಕ ಪರಿಚಯವಾಗುತ್ತಿರುವ ನಟಿ. ಮೂಲತಃ ಬೆಂಗಳೂರಿನವರೇ ಆದ ಶ್ರೀಲೀಲಾ ಸದ್ಯ ಸೆಕೆಂಡ್ ಪಿ ಯು ಸಿ ವ್ಯಾಸಂಗ ಮಾಡುತ್ತಿದ್ದಾರೆ. 'ಕಿಸ್' ಸಿನಿಮಾ ಆರಂಭ ಆಗುವ ಮುನ್ನವೇ ಚಿತ್ರದ ಫೋಟೋಶೂಟ್ ನಲ್ಲೇ ಶ್ರೀ ಲೀಲಾ ಪ್ರೇಕ್ಷಕರ ಗಮನ ಸೆಳೆದಿದ್ದರು.

  ಅರಸಿ ಬರುತ್ತಿವೆ ಅವಕಾಶಗಳು

  ಅರಸಿ ಬರುತ್ತಿವೆ ಅವಕಾಶಗಳು

  'ಕಿಸ್' ಸಿನಿಮಾದ ಫೋಟೋ ಹಾಗೂ ಟೀಸರ್ ನಲ್ಲಿ ಶ್ರೀ ಲೀಲಾ ಅವರನ್ನು ನೋಡಿರುವ ಸಿನಿಮಾ ಮಂದಿ ಹೊಸ ಚಿತ್ರಗಳಲ್ಲಿ ಅಭಿನಯಿಸಲು ಅವಕಾಶ ನೀಡುತ್ತಿದ್ದಾರೆ. ಅದಷ್ಟೇ ಅಲ್ಲದೆ ಇಬ್ಬರು ಸ್ಟಾರ್ ನಟರ ಜೊತೆ ಶ್ರೀ ಲೀಲಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

  ರೋರಿಂಗ್ ಸ್ಟಾರ್ ಜೊತೆ ಅಭಿನಯ

  ರೋರಿಂಗ್ ಸ್ಟಾರ್ ಜೊತೆ ಅಭಿನಯ

  ರೋರಿಂಗ್ ಸ್ಟಾರ್ ಶ್ರೀ ಮುರಳಿ ಹಾಗೂ 'ಭರ್ಜರಿ' ಖ್ಯಾತಿಯ ಚೇತನ್ ಕುಮಾರ್ ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾಗೆ ಶ್ರೀ ಲೀಲಾ ಅವರನ್ನೇ ನಾಯಕಿಯಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಶುರುವಾಗಲಿದೆ.

  ಆಕ್ಷನ್ ಪ್ರಿನ್ ಜೋಡಿಯಾಗಿ ಶ್ರೀಲೀಲಾ

  ಆಕ್ಷನ್ ಪ್ರಿನ್ ಜೋಡಿಯಾಗಿ ಶ್ರೀಲೀಲಾ

  ಧ್ರುವ ಸರ್ಜಾ ಅಭಿನಯದ ಮುಂದಿನ ಸಿನಿಮಾ 'ಪೊಗರು' ಸಿನಿಮಾಗೂ ಶ್ರೀಲೀಲಾ ನಾಯಕಿ ಆಗುವ ಸಾಧ್ಯತೆಗಳು ಹೆಚ್ಚಾಗಿವೆಯಂತೆ. ಈಗಾಗಲೇ ಮಾತು ಕತೆ ನಡೆದಿದ್ದು ಅಧಿಕೃತವಾಗಿ ಮಾಹಿತಿ ಮಾತ್ರ ಹೊರ ಬರಬೇಕಾಗಿದೆ.

  ಭರವಸೆ ಮೂಡಿಸುತ್ತಿರುವ ನಟಿ

  ಭರವಸೆ ಮೂಡಿಸುತ್ತಿರುವ ನಟಿ

  ನಟಿ ಶ್ರೀಲೀಲಾ ಅಭಿನಯದ ಒಂದು ಚಿತ್ರವೂ ತೆರೆಕಂಡಿಲ್ಲ. ಆದರೆ ಸಿನಿಮಾದ ಮೇಕಿಂಗ್ ಸೀನ್ ಗಳನ್ನ ನೋಡಿರುವ ಸ್ಯಾಂಡಲ್ ವುಡ್ ನಿರ್ದೇಶಕರು ಈಕೆ ಭರವಸೆ ನಟಿಯಾಗಿ ಉಳಿದುಕೊಳ್ಳುವ ಎಲ್ಲಾ ಸೂಚನೆ ಇದೆ ಎಂದಿದ್ದಾರೆ.

  English summary
  Kannada actress Sreeleela is celebrating her birthday today. The actress is acting with Sree Murali and Dhruv Sarja, including Kiss movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X