ನಟಿ ಶ್ರೀಲೀಲಾಗೆ ಕನ್ನಡದ ಹೀರೋ ಮೇಲೆ ಲವ್!

ನಟಿ ಶ್ರೀಲೀಲಾಗೆ ಕನ್ನಡ ಮತ್ತು ತೆಲುಗು ಎರಡೂ ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದಾರೆ. ಸದ್ಯ ಕನ್ನಡದ ಜೊತೆಗೆ ತೆಲುಗು ಸಿನಿಮಾಗಳಲ್ಲೂ ಕೂಡ ಶ್ರೀಲೀಲಾ ಮಿಂಚುತ್ತಿದ್ದಾರೆ.‌ ಈ ನಡುವೆ ನಟಿ ಶ್ರೀಲೀಲಾ ಅವರ ಹೊಸ ಲವ್ ಸ್ಟೋರಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಶ್ರೀಲೀಲಾ ತೆಲುಗಿನ ಪೆಳ್ಳಿ ಸಂದಡಿ ಸಿನಿಮಾದ ಮೂಲಕ ಹೆಸರುವಾಸಿ ಆಗಿದ್ದಾರೆ. ಈ ಚಿತ್ರದಲ್ಲಿ ತೆಲುಗು ಪ್ರೇಕ್ಷಕರಿಗೆ ಶ್ರೀಲೀಲಾ ಇಷ್ಟವಾಗಿದ್ದು, ಅಲ್ಲಿನ ಆಫರ್‌ಗಳು ಕೂಡ ಹೆಚ್ಚಾಗಿವೆ.

ಇತ್ತ ಕನ್ನಡದಲ್ಲಿ ಶ್ರೀಲೀಲಾ ಅಭಿನಯದ ಬೈ ಟು ಲವ್ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಇದರ ನಡುವೆಯೂ ಆಕೆಯ ಲವ್ ಕಹಾನಿ ಸದ್ದು ಮಾಡ್ತಿದೆ. ಶ್ರೀಲೀಲಾಳ ಈ ಲವ್ ಕಹಾನಿ ಏನು? ಆ ಹುಡುಗ ಆದ್ರೂ ಯಾರು ಅಂತೀರಾ? ಮುಂದೆ ಓದಿ...

Actress Sreeleela Is In Love With sandalwood Hero

ಲವ್ ಮ್ಯಾರೇಜ್ ಆಗಲು ಮನಸಾರೆ ಒಪ್ಪಿದ ಶ್ರೀಲೀಲಾ!

ನಟಿ ಶ್ರೀಲೀಲಾ ಮೊದಲು ತನ್ನ ಜೀವನದಲ್ಲಿ ಫ್ರೆಂಡ್ಸ್, ಲವ್, ಮದುವೆ ಈ ಮೂರು ಬೇಡ ಎಂದು ನಿರ್ಧಾರ ಮಾಡಿದ್ದರಂತೆ. ಆದರೆ ಈಗ ಮನಸ್ಸು ಬದಲಾಯಿಸಿ, ಫ್ರೆಂಡ್ ಶಿಪ್‌ಗೆ ಓಕೆ ಎಂದಿದ್ದಾರೆ. ಅಷ್ಟೇ ಯಾಕೆ ಲವ್ ಮಾಡೋದಕ್ಕೂ ಎಸ್ ಅಂದಿದ್ದಾರೆ. ಮದುವೆ ಒಂದೇ ಬಾಕಿ ಇದೆ. ಅದು ಮತ್ಯಾರು ಅಲ್ಲ ನಟ ಧನ್ವಿರ್. ಬೈಟು ಲವ್ ಚಿತ್ರದಲ್ಲಿ ಲೀಲಾ ಇಷ್ಟೇಲ್ಲಾ ಸರ್ಕಸ್ ಮಾಡ್ತಾರೆ. ಅದು ಚಿತ್ರದ ಮೊದಲ ಹಾಡಿನಲ್ಲಿ ರಿವೀಲ್ ಆಗಿದೆ.

ಬೈಟು ಲವ್ ಚಿತ್ರ ಲವ್ ಹಾಡು ರಿಲೀಸ್!

ಸದ್ಯ ಬೈಟು ಲವ್ ಚಿತ್ರದ ಹೊಸ ಹಾಡು ರಿಲೀಸ್ ಆಗಿದೆ. ಈ ಹಾಡಿನಲ್ಲಿ ನಾಯಕಿಗೆ, ನಾಯಕನ ಮೇಲೆ ಹೇಗೆ ಲವ್ ಆಗುತ್ತೆ ಎನ್ನುವುದನ್ನು ಹೇಳಲಾಗಿದೆ. ನಾಯಕನೊಂದಿಗೆ ನೋ‌ ಫ್ರೆಂಡ್‌ಶಿಪ್, ನೋ ಲವ್, ನೋ ಮದುವೆ ಎಂದು ಕೊಂಡಿದ್ದ, ನಾಯಕಿಯ ನಿರ್ಧಾರ ನಿಧಾನವಾಗಿ ಹೇಗೆ ಬದಲಾಗುತ್ತೆ. ಮತ್ತು ಆಕೆ ನಾಯಕನಿಗೆ ಹೇಗೆ ಮರುಳಾಗುತ್ತಾಳೆ ಎನ್ನುವುದನ್ನು ಹಾಡಿನಲ್ಲಿ ಕಟ್ಟಿ ಕೊಡಲಾಗಿದೆ.

ನಿರ್ದೇಶಕ ಹರಿ ಸಂತೋಷ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಸುಪ್ರೀತ್ ಬಂಡವಾಳ ಹೂಡಿದ್ದಾರೆ. ಹರಿ ಸಂತೋಷ್ ಈಗಾಗಲೇ ಯಶಸ್ವಿ ನಿರ್ದೇಶಕ ಆಗಿದ್ದಾರೆ. ಹಾಗಾಗಿ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳು ಮನೆ ಮಾಡಿದೆ. ಇನ್ನು ಧನ್ವೀರ್ ಮತ್ತು ಶ್ರೀಲೀಲಾ ಜೋಡಿ ಸೂಪರ್ ಎನಿಸಿಕೊಂಡಿದೆ.

More from Filmibeat

English summary
Actress Sreeleela Is In Love With sandalwood Hero Dhanveer,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X