ಮದುವೆ ಪ್ಲ್ಯಾನ್ ಬಿಚ್ಚಿಟ್ಟ ಬಹುಭಾಷಾ ನಟಿ ಶ್ರೀಲೀಲಾ

ಕನ್ನಡ ನಟಿ ಶ್ರೀಲೀಲಾ ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಶೀಘ್ರದಲ್ಲೇ ಬಾಲಿವುಡ್ ಹಾಗೂ ಕಾಲಿವುಡ್ ಅಂಗಳಕ್ಕೂ ಜಿಗಿಯುತ್ತಿದ್ದಾರೆ. ಬಾಲಿವುಡ್‌ನಲ್ಲಿ ಹೆಚ್ಚು ಹೆಚ್ಚು ಅವಕಾಶಗಳ ನಿರೀಕ್ಷೆಯಲ್ಲಿದ್ದಾರೆ. ಇದೆಲ್ಲದರ ನಡುವೆ ಶ್ರೀಲೀಲಾ ಮದುವೆ ಬಗ್ಗೆ ಊಹಾಪೋಹ ಶುರುವಾಗಿತ್ತು.

ಸಿನಿಮಾ ತಾರೆಯರ ಲವ್, ಮ್ಯಾರೇಜ್ ಬಗ್ಗೆ ಗುಸುಗುಸು ಹೊಸದೇನು ಅಲ್ಲ. ಸೋಶಿಯಲ್ ಮೀಡಿಯಾ ಜಮಾನ ಶುರುವಾದ ಬಳಿಕ ಇಂತ ಅಂತೆ ಕಂತೆ ಸುದ್ದಿ ಹರಿದಾಡುವುದು ಹೆಚ್ಚಾಯಿತು. ಶ್ರೀಲೀಲಾ ಬಗ್ಗೆ ಕೂಡ ಇಂಥದ್ದೆ ವದಂತಿ ಪದೇ ಪದೆ ಕೇಳಿಬರ್ತಿದೆ. ಕಾರ್ತಿಕ್ ಆರ್ಯನ್ ಜೊತೆ ಶ್ರೀಲೀಲಾ ಪ್ರೀತಿ ಬಿದ್ದಿದ್ದಾರೆ, ಶೀಘ್ರದಲ್ಲೇ ಮದುವೆ ಅಂತೆ, ಸದ್ದಿಲ್ಲದೇ ಮದುವೆ ನಡೆದೇಹೋಯ್ತು ಅಂತೆಲ್ಲಾ ಊಹಾಪೋಹ ಕೇಳಿಬಂದಿತ್ತು.

Actress Sreeleela Reacts on relationship and marriage rumors

ತಮ್ಮ ರಿಲೇಷನ್‌ಶಿಪ್, ಮದುವೆ ವದಂತಿಗೆ ಸ್ವತಃ ಶ್ರೀಲೀಲಾ ಫುಲ್‌ ಸ್ಟಾಪ್ ಇಟ್ಟಿದ್ದಾರೆ. ಮನ ಸ್ಟಾರ್ಸ್ ಯೂಟ್ಯೂಬ್ ವಾಹಿನಿ ಸಂದರ್ಶನದಲ್ಲಿ ಮಾತನಾಡಿ "ನಾನು ಪ್ರೀತಿಲಿ ಬಿದ್ದಿದ್ದೀನಿ ಅಂತ ಎಲ್ಲರೂ ಅಂದುಕೊಂಡಿದ್ದಾರೆ, ಆದರೆ ಅಮ್ಮ ಯಾವಾಗಲೂ ನನ್ನ ಜೊತೆ ಇರ್ತಾರೆ, ನಾನು ಹೇಗೆ ಪ್ರೀತಿಲಿ ಬೀಳಲು ಸಾಧ್ಯ. ಆದರೂ ಈ ಬಗ್ಗೆ ವದಂತಿ ಹರಡುತ್ತಲೇ ಇದೆ" ಎಂದು ಹೇಳಿದ್ದಾರೆ.

ಇತ್ತೀಚೆಗೆ ಶ್ರೀಲೀಲಾ ಮದುಮಗಳಂತೆ ಕಂಗೊಳಿಸಿದ್ದ ಫೋಟೊಗಳು ವೈರಲ್ ಆಗಿತ್ತು. ಅದನ್ನು ನೋಡಿ ಮದುವೆ ನಡೆದೇ ಹೋಯ್ತು ಎಂದು ಕೆಲವರು ಭಾವಿಸಿದ್ದರು. ಆಕೆಯನ್ನು ಬುಟ್ಟಿಯಲ್ಲಿ ಹೊತ್ತುಕೊಂಡು ಬರುವ ಫೋಟೊ ಕೂಡ ಇತ್ತು. ಅದು ಹುಟ್ಟುಹಬ್ಬದ ಸಂಭ್ರಮದಲ್ಲಿ ನಡೆದ ಕಾರ್ಯಕ್ರಮ. ಅದು ನಮ್ಮ ಸಂಪ್ರದಾಯ ಎಂದಿದ್ದಾರೆ.

ಮದುವೆ ಯಾವಾಗ ಎನ್ನುವ ಪ್ರಶ್ನೆಗೂ ಶ್ರೀಲೀಲಾ ಉತ್ತರ ಕೊಟ್ಟಿದ್ದಾರೆ. ನನಗೆ ಈಗ 23 ವರ್ಷ ವಯಸ್ಸು, ಹೆಚ್ಚು ಕಮ್ಮಿ ಇನ್ನು 10 ವರ್ಷ ಮದುವೆ ಆಗುವ ಆಲೋಚನೆ ಇಲ್ಲ ಎಂದಿದ್ದಾರೆ. ಅಂದರೆ ವಯಸ್ಸು 30 ವರ್ಷ ದಾಟಿದ ಮೇಲೆ ಕಿಸ್ ಬೆಡಗಿ ಮದುವೆ ಎನ್ನುವುದು ಅರ್ಥವಾಗುತ್ತಿದೆ. ಇನ್ನಾದರೂ ಸುಳ್ಳು ವದಂತಿ ನಿಲ್ಲುತ್ತಾ ಕಾದು ನೋಡಬೇಕಿದೆ.

Actress Sreeleela Reacts on relationship and marriage rumors

ಸದ್ಯ ಗಾಲಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಜೊತೆ ಶ್ರೀಲೀಲಾ ನಟನೆಯ 'ಜ್ಯೂನಿಯರ್' ಸಿನಿಮಾ ತೆರೆಗೆ ಬಂದಿದೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಈ ಸಿನಿಮಾ ಬಿಡುಗಡೆ ಆಗಿದೆ. ಕಿರೀಟಿಯನ್ನು ಹೀರೊ ಆಗಿ ಲಾಂಚ್ ಮಾಡಲು ಮಾಡಿರುವ ಸಿನಿಮಾ ಇದು ಎಂದು ಪ್ರತಿ ದೃಶ್ಯದಲ್ಲಿ ಕೂಡ ಗೊತ್ತಾಗುತ್ತದೆ. ಅಷ್ಟರಮಟ್ಟಿಗೆ ಆತನ ಸುತ್ತಾ ಸಿನಿಮಾ ಕಥೆ ಸಾಗುತ್ತದೆ.

ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ಮಿಂಚಿದ್ದು ಭಾರೀ ಸಂಭಾವನೆ ಪಡೆದಿದ್ದಾರೆ. 'ವೈರಲ್ ವಯ್ಯಾರಿ' ಸಾಂಗ್ ಹಿಟ್ ಆಗಿದ್ದು ಶ್ರೀಲೀಲಾ ಡ್ಯಾನ್ಸ್ ಅಭಿಮಾನಿಗಳ ಗಮನ ಸೆಳೆದಿದೆ. ಸಿನಿಮಾಗಳ ವಿಚಾರಕ್ಕೆ ಬಂದರೆ ತೆಲುಗಿನಲ್ಲಿ ಒಂದೆರಡು ಸಿನಿಮಾ ಚೆಲುವೆಯ ಕೈಯಲ್ಲಿದೆ. ಇನ್ನುಳಿದಂತೆ ಬಾಲಿವುಡ್‌ನಲ್ಲಿ 'ಆಶಿಕಿ- 3' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕಾರ್ತಿಕ್ ಆರ್ಯನ್ ಜೋಡಿಯಾಗಿ ಮಿಂಚುತ್ತಿದ್ದಾರೆ. ಮತ್ತಷ್ಟು ಕತೆಗಳನ್ನು ಕೇಳುತ್ತಿದ್ದಾರೆ. 'ಆಶಿಕಿ- 3' ಬಿಡುಗಡೆಗೂ ಮುನ್ನ ಮತ್ತೊಂದು ಬಾಲಿವುಡ್ ಸಿನಿಮಾ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ.

'ಪರಾಶಕ್ತಿ' ಎಂಬ ಸಿನಿಮಾ ಮೂಲಕ ಶ್ರೀಲೀಲಾ ತಮಿಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಮುಂದೆ ಅಲ್ಲಿ ಕೂಡ ಹೆಚ್ಚಿನ ಅವಕಾಶಗಳ ನಿರೀಕ್ಷೆಯಲ್ಲಿದ್ದಾರೆ.

More from Filmibeat

English summary
Actress Sreeleela on her marriage plans
Read more about: sreeleela telugu kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X