ನಟ ಶ್ರೀಕಾಂತ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ನಟಿ ಶ್ರೀರೆಡ್ಡಿ

By Bharath Kumar

ಇತ್ತೀಚಿಗಷ್ಟೆ ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಅರೆನಗ್ನ ಪ್ರತಿಭಟನೆ ಮಾಡಿದ್ದ ನಟಿ ಶ್ರೀರೆಡ್ಡಿ ಈಗ ಮತ್ತೊಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. ಶ್ರೀರೆಡ್ಡಿ ವಿರುದ್ಧವಾಗಿ ಯಾರೇ ಮಾತನಾಡಿದ್ರು, ಅವರ ಬಗ್ಗೆ ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸುತ್ತಿದ್ದಾರೆ.

ಇದೀಗ, ತೆಲುಗು ನಟ ಶ್ರೀಕಾಂತ್ ಅವರ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿ ಟಾಲಿವುಡ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಶ್ರೀರೆಡ್ಡಿ ಅವರ ಆರೋಪಗಳೆಲ್ಲವೂ ಸುಳ್ಳು ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಶ್ರೀಕಾಂತ್ ಗೆ ಶ್ರೀರೆಡ್ಡಿ ಕೂಡ ತಿರುಗೇಟು ನೀಡಿದ್ದಾರೆ.

'ಕಾಸ್ಟಿಂಗ್ ಕೌಚ್' ವಿವಾರದಲ್ಲಿ ತೆಲುಗು ಇಂಡಸ್ಟ್ರಿಯನ್ನ ಬೆಂಬಿಡದೆ ಕಾಡುತ್ತಿರುವ ಶ್ರೀರೆಡ್ಡಿ ಒಬ್ಬೊಬ್ಬರ ಬಗ್ಗೆಯೇ ಹೇಳಿಕೆಗಳನ್ನ ಕೊಡ್ತಿದ್ದಾರೆ. ಶ್ರೀರೆಡ್ಡಿಯ ಈ ವೇಗಕ್ಕೆ ಬ್ರೇಕ್ ಹಾಕಿರುವ ಕಲಾವಿದರ ಸಂಘ, ಆಕೆಯ ಜೊತೆ ಸಿನಿಮಾಗಳನ್ನ ಮಾಡದಂತೆ ಸೂಚನೆ ನೀಡಿದೆ. ಅಷ್ಟಕ್ಕೂ, ಶ್ರೀಕಾಂತ್ ಬಗ್ಗೆ ಶ್ರೀರೆಡ್ಡಿ ಏನಂದ್ರು.? ಮುಂದೆ ಓದಿ....

ಶ್ರೀರೆಡ್ಡಿ ಬಗ್ಗೆ ಶ್ರೀಕಾಂತ್ ಏನು ಹೇಳಿದ್ದರು.?

ಶ್ರೀರೆಡ್ಡಿ ಬಗ್ಗೆ ಶ್ರೀಕಾಂತ್ ಏನು ಹೇಳಿದ್ದರು.?

ನಟ ಶ್ರೀಕಾಂತ್ ಬಗ್ಗೆ ಏನಂದ್ರು ಎನ್ನವುದಕ್ಕೂ ಮೊದಲು, ಶ್ರೀರೆಡ್ಡಿ ಬಗ್ಗೆ ಶ್ರೀಕಾಂತ್ ಏನು ಹೇಳಿದ್ದರು ಎಂಬುದು ತಿಳಿಯಬೇಕಿದೆ. ವಾಣಿಜ್ಯ ಮಂಡಳಿಯ ಎದುರು ಅರೆನಗ್ನ ಪ್ರತಿಭಟನೆ ಮಾಡಿದ ನಂತರ ಕಲಾವಿದರ ಸಂಘ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಕಾಂತ್ ''ಟಿವಿಯಲ್ಲಿ ಶ್ರೀರೆಡ್ಡಿಯ ಪ್ರತಿಭಟನೆ ನೋಡಿ ಎಲ್ಲರಿಗೂ ಶಾಕ್ ಆಗಿದೆ. ಮಕ್ಕಳು, ಹೆಂಗಸರು ನೋಡಿದ್ದಾರೆ. ಸಿನಿಮಾ ಇಂಡಸ್ಟ್ರಿಗೆ ಬರಬೇಕು ಎಂದುಕೊಂಡಿದ್ದವರೆಲ್ಲ ಇಂತಹ ಘಟನೆ ನೋಡಿ ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ'' ಎಂದಿದ್ದರು.

ನಮಗೆ ದೂರು ನೀಡಬೇಕು

ನಮಗೆ ದೂರು ನೀಡಬೇಕು

''ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ, ಕಲಾವಿದರ ಸಂಘ ಹೀಗೆ ಪ್ರತಿಯೊಂದಕ್ಕು ಸಂಘಟನೆಗಳಿವೆ. ಏನಾದರೂ ಸಮಸ್ಯೆಗಳು ಇದ್ದರೇ, ಆಯಾ ವಿಭಾಗಕ್ಕೆ ದೂರು ನೀಡಿ. ಇಲ್ಲಿ ಸದಸ್ಯರು ಆಗಿರಲೇಬೇಕು ಅಂತ ಇಲ್ಲ. ಅದನ್ನ ಬಿಟ್ಟು ಟಿವಿಯಲ್ಲಿ ಕೂತು, ಸೋಶಿಯಲ್ ಮೀಡಿಯಾದಲ್ಲಿ ಕಿರುಚಾಡಿದ್ರೆ ಸಮಸ್ಯೆಯಾಗುವುದು ನಮಗೆ'' ಎಂದು ಶ್ರೀರೆಡ್ಡಿಗೆ ಬುದ್ದಿವಾದ ಹೇಳಿದ್ರು.

ನೀವು ಸಿನಿಮಾ ಮಾಡುವಾಗ ನಾಚಿಕೆ ಆಗಲ್ವಾ.?

ನೀವು ಸಿನಿಮಾ ಮಾಡುವಾಗ ನಾಚಿಕೆ ಆಗಲ್ವಾ.?

''ಕಪ್ಪು ಕನ್ನಡಕಗಳನ್ನ ಹಾಕ್ಕೊಂಡು, ಕಾರುಗಳಲ್ಲಿ ಓಡಾಡ್ಕೊಂಡು ಸಿನಿಮಾ ಮಾಡ್ತೀರ. ನೀವು ಮಾಡುವಂತಹ ಸಿನಿಮಾಗಳಿಂದ ಮಕ್ಕಳಿಗೆ ನಾಚಿಕೆ ಆಗಲ್ವಾ.? ಉತ್ತರ ಕರ್ನಾಟಕದಿಂದ ನಟಿಯರನ್ನ ಕರೆಸಿ ಎಕ್ಸ್ ಪೋಸ್ ಮಾಡಿಸುವಾಗ ನಾಚಿಕೆ ಅನಿಸಿಲ್ವಾ.? ಎಂದು ಶ್ರೀರೆಡ್ಡಿ ಪ್ರಶ್ನಿಸಿದ್ದಾರೆ.

ಮದುವೆ ಆಗಿದ್ದರೂ ಮೈಮೇಲೆ ಬೀಳುವಾಗ ನಾಚಿಕೆ ಆಗಲ್ವಾ.?

ಮದುವೆ ಆಗಿದ್ದರೂ ಮೈಮೇಲೆ ಬೀಳುವಾಗ ನಾಚಿಕೆ ಆಗಲ್ವಾ.?

''ನಿಮಗೆ ಮದುವೆ ಆಗಿದ್ದರೂ ಮತ್ತೊಬ್ಬರ ಪಕ್ಕದಲ್ಲಿ ಕೂತ್ಕೊಂಡು ಅವರ ಮೇಲೆ ಕೈ ಹಾಕಿವುದು, ಮೈಮೇಲೆ ಬೀಳುವಾಗ ನಾಚಿಕೆ ಆಗಿಲ್ವಾ. ಮಕ್ಕಳು ಈಗ ನೆನಪಾಗ್ತಾರೆ ಅಂದ್ರೆ, ನೀವು ಸಿನಿಮಾ ಮಾಡುವಾಗ ಮಕ್ಕಳು ನೆನಪಾಗಲಿಲ್ಲ. ನಿಮ್ಮ ಸಿನಿಮಾಗಳನ್ನ ಮಕ್ಕಳು ನೋಡುವಂತಿದೆಯಾ.?'' ಎಂದು ಶ್ರೀರೆಡ್ಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

More from Filmibeat

English summary
Actress Sri Reddy replied back to actor Srikanth comments on her in MAA association press meet. She says if the semi-dressed protest is not correct then is it right to play chemistry in movies with heroines and to watch the film with family.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X