»   » ಸ್ಟುಡಿಯೋಗೆ ಕರೆಸಿ ನನ್ನನ್ನ ಬಳಸಿಕೊಂಡ ದೊಡ್ಡ ನಿರ್ಮಾಪಕನ ಮಗ: ಶ್ರೀರೆಡ್ಡಿ

ಸ್ಟುಡಿಯೋಗೆ ಕರೆಸಿ ನನ್ನನ್ನ ಬಳಸಿಕೊಂಡ ದೊಡ್ಡ ನಿರ್ಮಾಪಕನ ಮಗ: ಶ್ರೀರೆಡ್ಡಿ

By Bharath Kumar
Subscribe to Filmibeat Kannada
For Quick Alerts
ALLOW NOTIFICATIONS
For Daily Alerts
  ಮತ್ತೊಂದು ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಶ್ರೀರೆಡ್ಡಿ | Filmibeat Kannada

  'ಕಾಸ್ಟಿಂಗ್ ಕೌಚ್' ಬಗ್ಗೆ ಸೆನ್ಸೆಷ್ನಲ್ ಹೇಳಿಕೆ ನೀಡಿ ಇಡೀ ಟಾಲಿವುಡ್ ಇಂಡಸ್ಟ್ರಿಯನ್ನ ಬೆಚ್ಚಿಬೀಳಿಸುತ್ತಿರುವ ನಟಿ ಶ್ರೀರೆಡ್ಡಿ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ದೊಡ್ಡ ನಿರ್ಮಾಪಕರ ಮಗನ ಕಾಮಪುರಾಣವನ್ನ ಬಹಿರಂಗಪಡಿಸಿದ್ದಾರೆ.

  ತೆಲುಗು ಇಂಡಸ್ಟ್ರಿಯನ್ನ ನಾಲ್ಕು ಸ್ಟಾರ್ ನಟರ ಕುಟುಂಬವೇ ಆಳುತ್ತಿದೆ ಎಂದು ಪದೇ ಪದೇ ಆರೋಪ ಮಾಡುತ್ತಿರುವ ಶ್ರೀರೆಡ್ಡಿ ಅವರಿಂದಲೇ ತೆಲುಗು ನಟಿಯರ ಮೇಲೆ ಇಂತಹ ದೌರ್ಜನ್ಯ ನಡೆಯುತ್ತಿದೆ ಎಂದಿದ್ದಾರೆ.

  ಈ ಮಧ್ಯೆ ಕೆಲವು ನಿರ್ಮಾಪಕ ಹಾಗೂ ಸಹ ನಟರ ಜೊತೆ ಶ್ರೀರೆಡ್ಡಿ ಮಾತುಕತೆ ನಡಸಿರುವ ವಾಟ್ಸಾಪ್ ಸಂಭಾಷಣೆಯನ್ನ ಲೀಕ್ ಮಾಡಿದ್ದಾರೆ. ಇಂಡಸ್ಟ್ರಿಯಲ್ಲಿ ನಟಿಯರನ್ನ ಹೇಗೆ ಬಳಸಿಕೊಳ್ತಾರೆ ನೋಡಿ ಎಂದು ಸಂಭಾಷಣೆಯ ಸ್ಕ್ರೀನ್ ಶಾಟ್ ರಿಲೀಸ್ ಮಾಡಿದ್ರು. ಆದ್ರೀಗ, ನಿರ್ಮಾಪಕರ ಮಗನೊಬ್ಬನ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟಿದ್ದಾರೆ. ಮುಂದೆ ಓದಿ....

  ನಿರ್ಮಾಪಕರ ಮಗ ನನ್ನನ್ನ ಬಳಸಿಕೊಂಡ.!

  ನಿರ್ಮಾಪಕರ ಮಗನೊಬ್ಬ ನನ್ನನ್ನ ಬಳಸಿಕೊಂಡಿದ್ದಾನೆ ಎಂದು ಶ್ರೀರೆಡ್ಡಿ ದೂರಿದ್ದಾರೆ. ''ಸರ್ಕಾರ ನೀಡಿರುವ ಸ್ಟುಡಿಯೋವೊಂದರಲ್ಲಿ ನನ್ನನ್ನು ಬಳಸಿಕೊಂಡಿದ್ದಾನೆ. ನಾನು ಬಲಿಪಶುವಾಗಿದ್ದೇನೆ. ಸರ್ಕಾರ ಇವರಿಗೆ ಸ್ಟುಡಿಯೋ ನಿರ್ವಹಣೆ ಮಾಡಲು ನೀಡಿದೆ. ಆದ್ರೆ, ಇವರು ಮಾಡ್ತಿರೋದೇನು.?'' ಎಂದು ಶ್ರೀರೆಡ್ಡಿ ಪ್ರಶ್ನಿಸಿದ್ದಾರೆ.

  ನಟ ಶ್ರೀಕಾಂತ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ನಟಿ ಶ್ರೀರೆಡ್ಡಿ

  ಯಾರೆಂದು ಹೇಳುತ್ತೇನೆ.?

  ''ಈ ಕೃತ್ಯ ಯಾರು ಮಾಡಿರುವುದು ಎಂದು ಸದ್ಯದಲ್ಲೇ ಹೇಳುತ್ತೇನೆ. ಅದಕ್ಕೆ ಸಮಯ ಇದಲ್ಲ. ಸಮಯಕ್ಕಾಗಿ ಕಾಯುತ್ತೀದ್ದೇನೆ. ಅದಕ್ಕೆ ಬೇಕಾಗಿರುವ ಸಾಕ್ಷ್ಯಗಳನ್ನ ಕೂಡ ನಾನು ಒದಗಿಸುತ್ತೇನೆ. ಅದುವೇ ನನ್ನ ಬ್ರಹ್ಮಸ್ತ್ರ ಎಂದು ಶ್ರೀರೆಡ್ಡಿ ಕುತೂಹಲ ಮೂಡಿಸಿದ್ದಾರೆ.

  ಸ್ಟುಡಿಯೋಗೆ ಬರಹೇಳಿ ದೌರ್ಜನ್ಯವೆಸಗಿದ್ದಾರೆ

  ''ನನ್ನನ್ನು ಸ್ಟುಡಿಯೋಗೆ ಕರೆಸಿದ ನಿರ್ಮಾಪಕರ ಮಗ ನನ್ನೊಂದಿಗೆ ಸೆಕ್ಸ್ ಮಾಡುವಂತೆ ಆಗ್ರಹಿಸಿದ ಮತ್ತು ನನ್ನ ಮೇಲೆ ದೌರ್ಜನ್ಯ ಕೂಡ ಎಸೆಗಿದ. ಚಿತ್ರರಂಗವನ್ನ ಆಳುತ್ತಿರುವ ನಿರ್ಮಾಪಕರ ಪೈಕಿ ಇವರು ಕೂಡ ಒಬ್ಬರು. ನಾನು ಮೊದಲೇ ಹೇಳಿದ್ದೆ, ನಾನು ಕೇವಲ ಮಾತುಕತೆಗೆ ಮಾತ್ರ ಹೋಗುತ್ತೇನೆ. ಲೈಂಗಿಕ ಕ್ರಿಯೆಗಲ್ಲ ಎಂದು. ಆದ್ರೆ, ಅಲ್ಲಿ ಹೋದ ನಂತರ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡರು'' ಎಂದು ಸ್ಫೋಟಕ ವಿಚಾರ ರಟ್ಟು ಮಾಡಿದ್ದಾರೆ.

  ರಸ್ತೆಯಲ್ಲಿ ಬಟ್ಟೆ ಬಿಚ್ಚಿ ಅರೆನಗ್ನ ಪ್ರತಿಭಟನೆ ಮಾಡಿದ ನಟಿ ಶ್ರೀರೆಡ್ಡಿ

  ಸ್ಟುಡಿಯೋಗಳು ಇಂತಹ ಕೆಲಸಕ್ಕೆ ಒಳ್ಳೆ ಸ್ಥಳ

  ಇಂತಹ ಕೆಲಸಗಳಿಗೆಲ್ಲ ಸ್ಟುಡಿಯೋಗಳನ್ನ ಬಳಸಲಾಗುತ್ತಿದೆ. ನಿರ್ಮಾಪಕರು, ನಿರ್ದೇಶಕರು, ಹೀರೋಗಳು ಎಲ್ಲರೂ ಸ್ಟುಡಿಯೋಗಳನ್ನ ರೆಡ್ ಲೈಟ್ ಏರಿಯಾದಂತೆ ಬಳಸಿಕೊಳ್ಳುತ್ತಿದ್ದಾರೆ. ಪೊಲಿಸರು ಕೂಡ ಈ ಕಡೆ ಬರಲ್ಲ. ಯಾಕಂದ್ರೆ, ಸರ್ಕಾರಿ ಸ್ಟುಡಿಯೋಗಳು ಎಂಬ ಕಾರಣವಿರಬಹುದು. ಆದ್ರೆ, ಇಲ್ಲಿ ನಡೆಯುವುದೆಲ್ಲ ಅನಾಚಾರ ಎಂದು ತೆಲುಗು ನಟಿ ಭಯಾನಕ ಸಂಗತಿಗಳನ್ನ ಬಿಚ್ಚಿಟ್ಟಿದ್ದಾರೆ.

  ಪರಭಾಷೆ ನಾಯಕಿಯರು ಎಲ್ಲದಕ್ಕೂ ಒಪ್ಪುತ್ತಾರೆ

  ''ತೆಲುಗು ನಟಿಯರಿಗೆ ಯಾಕೆ ಅವಕಾಶ ಸಿಗುತ್ತಿಲ್ಲ ಎಂದರೆ ನಮ್ಮವರು ಎಲ್ಲದಕ್ಕೂ ಒಪ್ಪುವುದಿಲ್ಲ. ಆದ್ರೆ, ಉತ್ತರ ಭಾರತದಿಂದ ಅಥವಾ ಬೇರೆ ರಾಜ್ಯಗಳಿಂದ ಬರುವ ನಟಿಯರು ಎಲ್ಲ ರೀತಿಯಲ್ಲೂ ಅವರಿಗೆ ಒಪ್ಪುತ್ತಾರೆ. ಅದಕ್ಕೆ ಅವರಿಗೆ ಸುಲಭವಾಗಿ ಅವಕಾಶಗಳು ಸಿಗುತ್ತೆ'' ಎಂದು ಶ್ರೀರೆಡ್ಡಿ ಆರೋಪಿಸಿದ್ದಾರೆ.

  ರಕುಲ್ ಪ್ರೀತ್ ಸಿಂಗ್ ಹೇಳಿಕೆಗೆ ತಿರುಗೇಟು ನೀಡಿದ ಮಾಧವಿ ಲತಾ.!

  ನಾನು ವಿಡಿಯೋ ಕಳುಹಿಸಿದ್ದೇನೆ

  ''ನನಗೂ ಇಂತಹ ಸಮಸ್ಯೆಗಳು ಬಹಳಷ್ಟು ಎದುರಾಗಿದೆ. ಹಲವು ನಿರ್ದೇಶಕ ಮತ್ತು ನಿರ್ಮಾಪಕರಿಗೆ ನಾನು ನನ್ನ ನಗ್ನ ವಿಡಿಯೋ ಮತ್ತು ಫೋಟೋಗಳನ್ನ ಕಳುಹಿಸಿದ್ದೇನೆ. ಆದ್ರೆ, ನನ್ನ ಬಳಿ ಫೋಟೋ ಮತ್ತು ವಿಡಿಯೋ ತಗೊಂಡು ಯಾವುದೇ ಅವಕಾಶ ನೀಡಿಲ್ಲ. ಈ ಬಗ್ಗೆ ನನ್ನ ಬಳಿ ಆಧಾರಗಳಿವೆ'' ಎಂದು ತೆಲುಗು ಇಂಡಸ್ಟ್ರಿಯ ಕರಾಳ ಮುಖವನ್ನ ಹೊರಜಗತ್ತಿಗೆ ಪರಿಚಯಿಸುತ್ತಿದ್ದಾರೆ.

  English summary
  Telugu actress Sri Reddy was protesting against the casting couch in Tollywood and demanding that more roles be given to native Telugu actresses. now, Actress sri reddy reveled about top producer's son in an exclusive interview.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more