ಶ್ರೀದೇವಿ ನಮಗೆಲ್ಲ ದೊಡ್ಡ ಸ್ಫೂರ್ತಿ ಎಂದ ಕನ್ನಡ ಚಿತ್ರರಂಗದ ನಟಿಯರು

By Naveen

ಬಾಲಿವುಡ್ ಚಿತ್ರರಂಗ ಸುರಸುಂದರಿ ನಟಿ ಶ್ರೀದೇವಿ (54) ನಿಧನ ಹೊಂದಿದ್ದಾರೆ. ನಿನ್ನೆ ರಾತ್ರಿ (ಶನಿವಾರ) ಹೃದಯಾಘಾತದಿಂದ ಅವರು ದುಬೈನಲ್ಲಿ ವಿಧಿವಶರಾಗಿದ್ದಾರೆ. ಶ್ರೀದೇವಿ ನಿಧನಕ್ಕೆ ಭಾರತ ಚಿತ್ರರಂಗದ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

ಶ್ರೀ ದೇವಿ ಭಾರತ ಚಿತ್ರರಂಗದ ಮೊದಲ ಲೇಡಿ ಸೂಪರ್ ಸ್ಟಾರ್ ಆಗಿರುವ ನಟಿ. ಇಂತಹ ನಟಿ ಎಲ್ಲ ನಾಯಕಿಯರಿಗೆ ಒಂದು ಸ್ಫೂರ್ತಿ. ಇನ್ನು ಶ್ರೀ ದೇವಿ ಅವರ ಅಗಲಿಕೆ ಕನ್ನಡ ಚಿತ್ರರಂಗದ ಅನೇಕ ನಟಿಯರಿಗೆ ದುಖಃ ತರಿಸಿದೆ. ಅವರ ಜೊತೆಗೆ ಕೆಲಸ ಮಾಡಿರುವ ಕೆಲವು ನಟಿಯರು ಸೇರಿದಂತೆ ಸ್ಯಾಂಡಲ್ ವುಡ್ ನಟಿಯರು ಶ್ರೀ ದೇವಿ ಜೊತೆಗಿನ ತಮ್ಮ ನೆನಪನ್ನು ಹಂಚಿಕೊಂಡಿದ್ದಾರೆ. ಇದು ನಿಜಕ್ಕೂ ಶಾಕಿಂಗ್ ಸುದ್ದಿ ಎಂದು ಹೇಳುವ ಮೂಲಕ ನಾಯಕಿಯರು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಮುಂದೆ ಓದಿ...

ತುಂಬ ನೋವಿನ ವಿಷಯ

ತುಂಬ ನೋವಿನ ವಿಷಯ

''ಇದು ತುಂಬ ನೋವಿನ ವಿಷಯ. ಇದು ಹೇಗೆ ಆಗಲು ಸಾಧ್ಯ. ಶ್ರೀದೇವಿ ಅವರು ಇಷ್ಟ ಇಲ್ಲ ಅಂತ ಯಾರು ಹೇಳಲು ಸಾಧ್ಯನೇ ಇಲ್ಲ. ನಾನು ಚಿಕ್ಕ ವಯಸ್ಸಿನಿಂದ ಅವರ ದೊಡ್ಡ ಅಭಿಮಾನಿ. ಅವರ ಎಲ್ಲ ಸಿನಿಮಾವನ್ನು ನೋಡಿದ್ದೇನೆ. ಅವರು ಯಾವಾಗಲೂ ನಮಗೆ ಸ್ಫೂರ್ತಿ''- ಸುಧಾರಾಣಿ, ನಟಿ

ಅವರ ಹೆಣ್ಣು ಮಕ್ಕಳ ಗತಿ ಏನು?

ಅವರ ಹೆಣ್ಣು ಮಕ್ಕಳ ಗತಿ ಏನು?

''ಇದು ನಿಜಕ್ಕೂ ಶಾಕಿಂಗ್ ಸುದ್ದಿ. ಅವರನ್ನು ಕಂಡರೆ ನನಗೆ ತುಂಬ ಇಷ್ಟ. ನಾನು ಅವರನ್ನು ತುಂಬ ಫಾಲೋ ಮಾಡುತ್ತಿದ್ದೇ. ಆ ಕಾಲದಲ್ಲಿ ಅವರು ಅಂದರೆ ನನಗೆ ತುಂಬ ಹುಚ್ಚು. ನನ್ನ ರೀತಿ ಎಷ್ಟೊ ನಟಿಯರಿಗೆ ಅವರು ಸ್ಫೂರ್ತಿ. ಅವರ ಇಬ್ಬರು ಹೆಣ್ಣು ಮಕ್ಕಳು ತುಂಬ ಚಿಕ್ಕವರು ಅವರು ಗತಿ ಏನು?.'' - ತಾರಾ, ನಟಿ

ಬಾಲನಟಿಯಾಗಿ ಅವರ ಜೊತೆಗೆ ಸಿನಿಮಾ ಮಾಡಿದ್ದೆ

ಬಾಲನಟಿಯಾಗಿ ಅವರ ಜೊತೆಗೆ ಸಿನಿಮಾ ಮಾಡಿದ್ದೆ

''ನಾನು ತುಂಬ ಲಕ್ಕಿ. ಯಾಕಾಂದ್ರೆ ನಾನು ಒಬ್ಬ ಬಾಲನಟಿಯಾಗಿ ಅವರ ಜೊತೆಗೆ ಒಂದು ತಮಿಳು ಚಿತ್ರದಲ್ಲಿ ನಟಿಸಿದ್ದೇನೆ. ನಾನು ಹಿರೋಯಿನ್ ಆದಾಗ ಅವರೇ ಒಮ್ಮೆ ಫೋನ್ ಮಾಡಿ ವಿಶ್ ಮಾಡಿದ್ದರು. ನನಗೆ ಅವರ ಸಾವಿನ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ.''- ಮಾಲಾಶ್ರೀ, ನಟಿ

ಪಾತ್ರವೇ ತಾನಾಗಿ ಬಿಡುತ್ತಿದ್ದರು

ಪಾತ್ರವೇ ತಾನಾಗಿ ಬಿಡುತ್ತಿದ್ದರು

''ಶ್ರೀದೇವಿ ಪಾತ್ರವೇ ತಾನಾಗಿ ಬಿಡುತ್ತಿದ್ದರು. ಅವರ ಎಲ್ಲ ಸಿನಿಮಾಗಳು ತುಂಬ ಚೆನ್ನಾಗಿತ್ತು. ಅವರ ಒಂದು ಸಿನಿಮಾದ ಶೂಟಿಂಗ್ ಬೆಂಗಳೂರಿನಲ್ಲಿ ನಡೆಯುತ್ತಿದ್ದ ವೇಳೆ ನಾನು ಕೂಡ ಅವರನ್ನು ಬೇಟಿ ಮಾಡಿದ್ದೆ. ಇಂತಹ ಒಬ್ಬ ಕಲಾವಿದೆಯನ್ನು ನಾವು ಇಂದು ಕಳೆದುಕೊಂಡಿದ್ದೇವೆ.'' - ಗಿರಿಜಾ ಲೋಕೇಶ್, ಹಿರಿಯ ನಟಿ

ಒಬ್ಬ ಒಳ್ಳೆಯ ಹೆಣ್ಣು ಮಗಳನ್ನು ಕಳೆದುಕೊಂಡಿದ್ದೇವೆ

ಒಬ್ಬ ಒಳ್ಳೆಯ ಹೆಣ್ಣು ಮಗಳನ್ನು ಕಳೆದುಕೊಂಡಿದ್ದೇವೆ

''ಅವರ ರೀತಿಯ ಒಬ್ಬ ನಟಿಯನ್ನು ನೋಡಲು ಆಗುವುದಿಲ್ಲ. ಕೊನೆಯ ತನಕ ಅವರು ಒಳ್ಳೆಯ ಸಿನಿಮಾದಲ್ಲಿ ನಟಿಸಿದ್ದಾರೆ. ನನ್ನ ಜೊತೆಗೆ ನನ್ನ ತಂಗಿಯಾಗಿ ಅನೇಕ ಸಿನಿಮಾದಲ್ಲಿ ನಟಿಸಿದ್ದಾರೆ. ಯಾವತ್ತು ಕೋಪ, ಬೇಜಾರು ಮಾಡಿಕೊಳ್ಳದ ಹುಡುಗಿ. ನಾವು ಒಬ್ಬ ಕಲಾವಿದೆಯನ್ನು ಕಳೆದುಕೊಂಡಿದ್ದೇವೆ ಎನ್ನುವುದಕ್ಕಿಂತ ಒಬ್ಬ ಒಳ್ಳೆಯ ಹೆಣ್ಣು ಮಗಳನ್ನು ಕಳೆದುಕೊಂಡಿದ್ದೇವೆ'' - ಹಿರಿಯ ಲಕ್ಷ್ಮಿ, ನಟಿ

ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ

ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ

''ಶ್ರೀದೇವಿಯವರನ್ನು ಇಷ್ಟು ಬೇಗ ಕಳೆದುಕೊಳ್ಳುತ್ತೇವೆ ಎನ್ನುವುದನ್ನು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಈ ವಯಸ್ಸಿನಲ್ಲಿಯೇ ಅವರು ಎಂತಹ ಪಾತ್ರಗಳನ್ನು ಮಾಡುತ್ತಿದ್ದರು. ಒಂದು ಅಮೂಲ್ಯ ರತ್ನವನ್ನು ಇಂದು ಕಳೆದುಕೊಂಡಿದ್ದೇವೆ. ಇದು ಚಿತ್ರರಂಗಕ್ಕೆ ಆಗಿರುವ ದೊಡ್ಡ ಆಘಾತ.'' - ಶೃತಿ, ನಟಿ

ಅವರು ಲೇಡಿ ಸೂಪರ್ ಸ್ಟಾರ್

ಅವರು ಲೇಡಿ ಸೂಪರ್ ಸ್ಟಾರ್

''ಶ್ರೀದೇವಿ ಅಭಿನಯ, ಅಂದ ಚಂದ ಮತ್ತು ಪಾತ್ರಗಳ ಮೂಲಕ ಲೇಡಿ ಸೂಪರ್ ಸ್ಟಾರ್ ಆಗಿರುವ ನಟಿ. ಅವರು ಬಹಳ ಒಳ್ಳೆಯ ಹುಡುಗಿ. ಎಲ್ಲರಿಗೂ ಮರಿಯಾದೆ ಕೊಡುತ್ತಿದ್ದರು. ಯಾರ ಬಗ್ಗೆಯೇ ಅವರು ಕೆಟ್ಟ ಯೋಚನೆ ಮಾಡುತ್ತಿರಲಿಲ್ಲ.'' - ಹೇಮಾ ಚೌಧರಿ, ನಟಿ

ಅವರು ಒಬ್ಬ ಲೆಜೆಂಡ್

ಅವರು ಒಬ್ಬ ಲೆಜೆಂಡ್

''ಅವರು ಒಬ್ಬ ಲೆಜೆಂಡ್. ಅವರಿಗೆ ಈಗಲೂ ದೊಡ್ಡ ಕ್ರೇಜ್ ಇತ್ತು. ಅವರಿಗೆ ಸರಿ ಸಮವಾದ ಮತ್ತೊಬ್ಬ ನಟಿ ಯಾರು ಇಲ್ಲ. ನಾನು ಕ್ಯಾಮರಾ ಫೇಸ್ ಮಾಡಿದ ಮೊದಲ ಚಿತ್ರದಲ್ಲಿ ಅವರು ಹಿರೋಯಿನ್ ಆಗಿದ್ದರು.'' - ಸುಮಲತಾ, ನಟಿ


More from Filmibeat

English summary
Bollywood Actress Sridevi passed away on Saturday night (Feb 24th) after a cardiac arrest. She was 54. Saddened by the news of her sudden demise, Kannada actress express his grief
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X