For Quick Alerts
  ALLOW NOTIFICATIONS  
  For Daily Alerts

  'ಡ್ರೀಮ್ ಗರ್ಲ್' ಶ್ರೀದೇವಿ ವಿಧಿವಶ: ಕಿಚ್ಚ ಸುದೀಪ್ ಹೃದಯ ಛಿದ್ರ

  By Harshitha
  |
  ನಟಿ ಶ್ರೀದೇವಿ ನಿಧನಕ್ಕೆ ಸಂತಾಪ ಸೂಚಿಸಿದ ನಟ ಸುದೀಪ್ | Filmibeat Kannada

  ವಿವಾಹ ಮಹೋತ್ಸವ ಒಂದರಲ್ಲಿ ಪಾಲ್ಗೊಳ್ಳಲು ದುಬೈಗೆ ಕುಟುಂಬ ಸಮೇತ ತೆರಳಿದ್ದ ನಟಿ ಶ್ರೀದೇವಿ ತಾಯ್ನಾಡಿಗೆ ವಾಪಸ್ ಬರಲೇ ಇಲ್ಲ. ನಿನ್ನೆ ರಾತ್ರಿ ಹೃದಯಾಘಾತಕ್ಕೊಳಗಾದ ನಟಿ ಶ್ರೀದೇವಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

  ನಟಿ ಶ್ರೀದೇವಿ ಅವರ ಹಠಾತ್ ನಿಧನದಿಂದ ಇಡೀ ಭಾರತೀಯ ಚಿತ್ರರಂಗ ಶೋಕ ಸಾಗರದಲ್ಲಿ ಮುಳುಗಿದೆ. ನಟಿ ಶ್ರೀದೇವಿ ವಿಧಿವಶರಾದ ಸುದ್ದಿ ಕೇಳಿ ಕನ್ನಡ ನಟ ಕಿಚ್ಚ ಸುದೀಪ್ ಹೃದಯ ಛಿದ್ರಗೊಂಡಿದೆ.

  ಕಾಲಿವುಡ್, ಟಾಲಿವುಡ್, ಬಾಲಿವುಡ್ ಹಾಗೂ ಮಾಲಿವುಡ್ ನಲ್ಲಿ ಬಹು ಬೇಡಿಕೆಯ ನಾಯಕಿ ಆಗಿ ಮೆರೆದಿದ್ದ ನಟಿ ಶ್ರೀದೇವಿ ಜೊತೆಗೆ ಕಿಚ್ಚ ಸುದೀಪ್ 'ಪುಲಿ' ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು. ಮುಂದೆ ಓದಿರಿ...

  ತಮಿಳಿನಲ್ಲಿ ಶ್ರೀದೇವಿ ಕಮ್ ಬ್ಯಾಕ್ ಸಿನಿಮಾ

  ತಮಿಳಿನಲ್ಲಿ ಶ್ರೀದೇವಿ ಕಮ್ ಬ್ಯಾಕ್ ಸಿನಿಮಾ

  ಹತ್ತತ್ರ ಮೂರು ದಶಕಗಳ ಬಳಿಕ ನಟಿ ಶ್ರೀದೇವಿ ಕಾಲಿವುಡ್ ಕಡೆ ಮುಖ ಮಾಡಿದ್ದೇ 2015 ರಲ್ಲಿ ತೆರೆಕಂಡ 'ಪುಲಿ' ಚಿತ್ರದ ಮೂಲಕ. 'ಪುಲಿ' ಚಿತ್ರದಲ್ಲಿ 'ರಾಣಿ' ಪಾತ್ರದಲ್ಲಿ ಶ್ರೀದೇವಿ ಕಾಣಿಸಿಕೊಂಡಿದ್ದರು. ಇದೇ ಚಿತ್ರದಲ್ಲಿ ಕಿಚ್ಚ ಸುದೀಪ್ ಹಾಗೂ ಕೂಡ ಅಭಿನಯಿಸಿದ್ದರು.

  ಹೃದಯಾಘಾತದಿಂದ ಬಾಲಿವುಡ್ ನಟಿ ಶ್ರೀದೇವಿ ನಿಧನ ಹೃದಯಾಘಾತದಿಂದ ಬಾಲಿವುಡ್ ನಟಿ ಶ್ರೀದೇವಿ ನಿಧನ

  ದಿಗ್ಭ್ರಮೆಗೊಂಡ ಸುದೀಪ್

  ದಿಗ್ಭ್ರಮೆಗೊಂಡ ಸುದೀಪ್

  ಅಂದು ಶ್ರೀದೇವಿ ಜೊತೆ ಸ್ಕ್ರೀನ್ ಶೇರ್ ಮಾಡಿದ್ದ ಸುದೀಪ್ ಇಂದು ಶ್ರೀದೇವಿ ಅವರ ನಿಧನದ ವಾರ್ತೆ ಕೇಳಿ ದಿಗ್ಭ್ರಮೆಗೊಂಡಿದ್ದಾರೆ.

  ಶ್ರೀದೇವಿ ನಿಧನದ ವಾರ್ತೆ ಕೇಳಿ ಶಾಕ್ ಆದ ರಜನಿಕಾಂತ್ ಶ್ರೀದೇವಿ ನಿಧನದ ವಾರ್ತೆ ಕೇಳಿ ಶಾಕ್ ಆದ ರಜನಿಕಾಂತ್

  ಟ್ವೀಟ್ ಮಾಡಿದ್ದಾರೆ ಸುದೀಪ್

  ಟ್ವೀಟ್ ಮಾಡಿದ್ದಾರೆ ಸುದೀಪ್

  ''ಶ್ರೀದೇವಿ ಅಂತ ಉತ್ಕೃಷ್ಟ ತಾರೆ ಜೊತೆಗೆ ಕೆಲ ಕಾಲ ಕಳೆಯುವ ಅವಕಾಶ ಸಿಕ್ಕಿದ್ದಕ್ಕೆ ನಾನು ಲಕ್ಕಿ ಅಂತ ಭಾವಿಸಬೇಕಾ.? ಶ್ರೀದೇವಿ ಬಹುತೇಕರಿಗೆ ಸ್ಫೂರ್ತಿಯ ಚಿಲುಮೆ. ಕೆಲವೊಂದನ್ನ ನಂಬುವುದು ಕಷ್ಟ, ಸ್ವೀಕರಿಸುವುದು ಅದಕ್ಕಿಂತ ಕಷ್ಟ. ಹೃದಯ ಛಿದ್ರಗೊಂಡಿದೆ. ಶ್ರೀದೇವಿ ಅವರ ಆತ್ಮಕ್ಕೆ ಸಿಗಲಿ'' ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

  'ಅತಿಲೋಕ ಸುಂದರಿ' ಶ್ರೀದೇವಿ ಅಗಲಿಕೆಗೆ ಕಂಬನಿ ಮಿಡಿದ ಬಾಲಿವುಡ್'ಅತಿಲೋಕ ಸುಂದರಿ' ಶ್ರೀದೇವಿ ಅಗಲಿಕೆಗೆ ಕಂಬನಿ ಮಿಡಿದ ಬಾಲಿವುಡ್

  ಹೃದಯಾಘಾತಕ್ಕೆ ಒಳಗಾದ ನಟಿ ಶ್ರೀದೇವಿ

  ಹೃದಯಾಘಾತಕ್ಕೆ ಒಳಗಾದ ನಟಿ ಶ್ರೀದೇವಿ

  ಹಿರಿಯ ನಟಿ ಶ್ರೀದೇವಿ ಹೃದಯಾಘಾತದಿಂದ ನಿನ್ನೆ ರಾತ್ರಿ (ಫೆಬ್ರವರಿ 24) ದುಬೈನಲ್ಲಿ ವಿಧಿವಶರಾದರು. ದುಬೈನಲ್ಲಿ ಮೋಹಿತ್ ಮಾರ್ವಾ ಅವರ ವಿವಾಹ ಮಹೋತ್ಸವ ಇತ್ತು. ಅದರಲ್ಲಿ ಪಾಲ್ಗೊಳ್ಳಲು ಕುಟುಂಬದ ಸಮೇತ ಶ್ರೀದೇವಿ ದುಬೈಗೆ ತೆರಳಿದ್ದರು. ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಶ್ರೀದೇವಿ ಹೃದಯಾಘಾತಕ್ಕೆ ಒಳಗಾದರು.

  English summary
  Bollywood Actress Sridevi passed away on Saturday night (Feb 24th) after a cardiac arrest. She was 54. Saddened by the news of her sudden demise, Kannada Actor Kiccha Sudeep have tweeted expressing his grief.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X