twitter
    For Quick Alerts
    ALLOW NOTIFICATIONS  
    For Daily Alerts

    ಶ್ರೀದೇವಿಯನ್ನು ಬಿ ಟೌನ್ ರಾಣಿ ಪಟ್ಟಕ್ಕೆ ಏರಿಸಿದ 10 ಸಿನಿಮಾಗಳು

    By Naveen
    |

    Recommended Video

    ಸೂಪರ್ ಸ್ಟಾರ್ ಶ್ರೀದೇವಿಯ ಟಾಪ್ 10 ಸಿನಿಮಾಗಳ ಪಟ್ಟಿ | Filmibeat Kannada

    ಸೌತ್ ಸಿನಿರಂಗದಿಂದ ಬಂದು ಬಾಲಿವುಡ್ ನಲ್ಲಿ ಒಬ್ಬ ದೊಡ್ಡ ನಟಿಯಾಗಬಹುದು ಎಂದು ತೋರಿಸಿಕೊಟ್ಟ ನಟಿ ಶ್ರೀದೇವಿ. ಆಕೆಯ ನಟನೆ, ಸೌಂದರ್ಯ, ಪಾತ್ರಗಳ ಜಾಣತನದ ಆಯ್ಕೆ ಎಲ್ಲವೂ ಆಕೆಯನ್ನು ಸ್ಟಾರ್ ನಟಿಯನ್ನಾಗಿ ಮಾಡಿತು. ಹಿಂದಿ ಚಿತ್ರರಂಗದಲ್ಲಿ ಮಾತ್ರವಲ್ಲ ಇಡೀ ಭಾರತದಲ್ಲಿಯೇ ಲೇಡಿ ಸೂಪರ್ ಸ್ಟಾರ್ ಆದ ಮೊದಲ ನಟಿ ಅಂದರೆ ಅದು ಶ್ರೀದೇವಿ.

    ಒಬ್ಬ ನಟಿಯಾಗಬೇಕು ಅಂತಲೇ ಹುಟ್ಟಿದ್ದ ಶ್ರೀದೇವಿ ಜಾಸ್ತಿ ತಡ ಮಾಡಲೇ ಇಲ್ಲ. ತಮ್ಮ ನಾಲ್ಕು ವರ್ಷದಿಂದಲೇ ಈ ಪುಟ್ಟ ಹುಡುಗಿ ದೊಡ್ಡ ಕನಸು ಹೊತ್ತು ಬಣ್ಣದ ಜಗತ್ತಿಗೆ ಬಂದರು. ತಮಿಳಿನಿಂದ ಶುರು ಮಾಡಿ ನಂತರ ಹಿಂದಿ, ಕನ್ನಡ, ತೆಲುಗು ಹೀಗೆ ಅನೇಕ ಭಾಷೆಗಳಲ್ಲಿ ನಟಿಸಿದರು. ತನ್ನ ಗ್ಲಾಮರ್ ಮತ್ತು ನಟನ ಸಾಮರ್ಥ್ಯ ಎರಡನ್ನು ಚೆನ್ನಾಗಿ ಸಿನಿಮಾದಲ್ಲಿ ಬಳಸಿದರು. ಸ್ಟಾರ್ ನಟರನ್ನು ಮೀರಿಸುವ ಹೆಸರು ಮತ್ತು ಕ್ರೇಜ್ ಸೃಷ್ಟಿ ಮಾಡಿದ್ದರು.

    ಬಿಗ್ ಬಿಗೆ ಶ್ರೀದೇವಿ ಸಾವಿನ ಮುನ್ಸೂಚನೆ ಸಿಕ್ಕಿತ್ತೇ? ಬಿಗ್ ಬಿಗೆ ಶ್ರೀದೇವಿ ಸಾವಿನ ಮುನ್ಸೂಚನೆ ಸಿಕ್ಕಿತ್ತೇ?

    ಇಷ್ಟೆಲ್ಲ ಸಾಧನೆ ಮಾಡಿರುವ ಇಂತಹ ಮಹಾನ್ ನಟಿ ನಿನ್ನೆ ರಾತ್ರಿ (ಶನಿವಾರ) ಹೃದಯಾಘಾತದಿಂದ ದುಬೈನಲ್ಲಿ ವಿಧಿವಶರಾಗಿದ್ದಾರೆ. ಈ ಹಿನ್ನಲೆಯಲ್ಲಿ ಅವರ ಅಭಿನಯದ ಎಂದು ಮರೆಯಲಾಗದ ಟಾಪ್ 10 ಚಿತ್ರಗಳ ಪಟ್ಟಿ ಮುಂದಿದೆ ಓದಿ..

    'ತುನೈವನ್'

    'ತುನೈವನ್'

    ತಮ್ಮ 4ನೇ ವಯಸ್ಸಿನಲ್ಲಿಯೇ ಶ್ರೀದೇವಿ ನಟನೆಯನ್ನು ಶುರು ಮಾಡಿದರು. 1969ರಲ್ಲಿ 'ತುನೈವನ್' ಎಂಬ ತಮಿಳು ಚಿತ್ರದ ಮೂಲಕ ನಟಿ ಶ್ರೀ ದೇವಿ ಸಿನಿಮಾ ಜರ್ನಿಯನ್ನು ಶುರು ಮಾಡಿದರು. ಮೊದಲು ನಿರ್ದೇಶಕ ತ್ರಿರುಮುಘಮ್ ಶ್ರೀದೇವಿ ಅವರಿಗೆ ನಟನೆ ಮಾಡುವ ಅವಕಾಶ ನೀಡಿದರು.

    'ಜಾಗ್ ಉಠಾ ಇನ್ ಸಾನ್'

    'ಜಾಗ್ ಉಠಾ ಇನ್ ಸಾನ್'

    1984 ರಲ್ಲಿ ಬಂದ 'ಜಾಗ್ ಉಠಾ ಇನ್ ಸಾನ್ 'ಸಿನಿಮಾ ಮೊದಲು ಶ್ರೀ ದೇವಿ ಅವರಿಗೆ ಸ್ಟಾರ್ ಪಟ್ಟ ತಂದುಕೊಟ್ಟ ಸಿನಿಮಾ. ಈ ಚಿತ್ರದಲ್ಲಿ ಅವರು ದೇವಸ್ಥಾನದಲ್ಲಿ ಇರುವ ನರ್ತಕಿಯ ಪಾತ್ರವನ್ನು ಮಾಡಿದ್ದರು.

    'ಸದ್ಮಾ'

    'ಸದ್ಮಾ'

    ಕಮಲ್ ಹಾಸನ್ ಮತ್ತು ಶ್ರೀದೇವಿ ಇಬ್ಬರದ್ದು ತುಂಬ ಜನಪ್ರಿಯವಾದ ಜೋಡಿ. ಈ ಜೋಡಿ ಮೊದಲ ಬಾರಿಗೆ ನಟಿಸಿದ್ದು 'ಸದ್ಮಾ' ಸಿನಿಮಾದಲ್ಲಿ. 1983ರಲ್ಲಿ ಬಂದ ಈ ಚಿತ್ರದಲ್ಲಿ ಕಮಲ್ ಹಾಸನ್ ಜೊತೆಗೆ ತಮ್ಮ ನಟನೆಯ ಮೂಲಕ ಶ್ರೀದೇವಿ ಗಮನ ಸೆಳೆದರು.ಈ ಸಿನಿಮಾದಲ್ಲಿ ಅವರು ಮಾನಸಿಕ ಅಸ್ವಸ್ಥೆ ಪಾತ್ರವನ್ನು ಮಾಡಿದ್ದಾರೆ.

    ಕೊನೆಯುಸಿರೆಳೆದ ಶ್ರೀದೇವಿ: ಮಮ್ಮಲ ಮರುಗಿದ ದಕ್ಷಿಣ ಭಾರತ ಚಿತ್ರರಂಗ ಕೊನೆಯುಸಿರೆಳೆದ ಶ್ರೀದೇವಿ: ಮಮ್ಮಲ ಮರುಗಿದ ದಕ್ಷಿಣ ಭಾರತ ಚಿತ್ರರಂಗ

    'ನಾಗಿನ್'

    'ನಾಗಿನ್'

    ಶ್ರೀ ದೇವಿ ಅವರಿಗೆ ದೊಡ್ಡ ಹೆಸರು ತಂದು ಕೊಟ್ಟ ಸಿನಿಮಾಗಳಲ್ಲಿ ಪ್ರಮುಖವಾಗಿರುವ ಸಿನಿಮಾ 'ನಾಗಿನ್'. 1986ರಲ್ಲಿ ಬಂದ ಈ ಚಿತ್ರದಲ್ಲಿ ಶ್ರೀ ದೇವಿ ಹೆಣ್ಣು ಹಾವಿನ ಪಾತ್ರ ಮಾಡಿದ್ದರು. ಅವರ ಅಭಿಮಾನಿಗಳಿಗೆ ಇಂದಿಗೂ ಈ ಸಿನಿಮಾ ಸಖತ್ ಫೇವರೇಟ್.

    ಶ್ರೀದೇವಿ ನಮಗೆಲ್ಲ ದೊಡ್ಡ ಸ್ಫೂರ್ತಿ ಎಂದ ಕನ್ನಡ ಚಿತ್ರರಂಗದ ನಟಿಯರುಶ್ರೀದೇವಿ ನಮಗೆಲ್ಲ ದೊಡ್ಡ ಸ್ಫೂರ್ತಿ ಎಂದ ಕನ್ನಡ ಚಿತ್ರರಂಗದ ನಟಿಯರು

    'ಮಿಸ್ಟರ್ ಇಂಡಿಯಾ'

    'ಮಿಸ್ಟರ್ ಇಂಡಿಯಾ'

    'ಮಿಸ್ಟರ್ ಇಂಡಿಯಾ' ಶ್ರೀದೇವಿ ಕೆರಿಯರ್ ನಲ್ಲಿ ಒಂದು ತಿರುವು ನೀಡಿದ್ದ ಸಿನಿಮಾ. ಈ ಸಿನಿಮಾದಲ್ಲಿ ಶ್ರೀದೇವಿ ಜರ್ನಲಿಸ್ಟ್ ಪಾತ್ರವನ್ನು ಮಾಡಿದ್ದರು. ಸಿನಿಮಾದ ಒಂದು ಹಾಡು ಶ್ರೀದೇವಿಗೆ ದೊಡ್ಡ ಹೆಸರು ತಂದು ಕೊಟ್ಟಿತ್ತು.

    'ಚಾಂದನಿ'

    'ಚಾಂದನಿ'

    1989ರಲ್ಲಿ ಶ್ರೀ ದೇವಿ ನಟನೆಯ 'ಚಾಂದನಿ' ಸಿನಿಮಾ ಬಿಡುಗಡೆಯಾಗಿದೆ. ಈ ಚಿತ್ರದ ಮೂಲಕ ಯಶ್ ಚೋಪ್ರಾ ಅವರ ಸಿನಿಮಾದಲ್ಲಿ ಮೊದಲ ಬಾರಿಗೆ ಶ್ರೀ ದೇವಿ ನಟಿಸಿದ್ದರು.

    'ಚಾಲ್ ಬಾಜ್'

    'ಚಾಲ್ ಬಾಜ್'

    1989ರಲ್ಲಿ ರಿಲೀಸ್ 'ಚಾಲ್ ಬಾಜ್' ಚಿತ್ರದಲ್ಲಿ ಮೊದಲ ಬಾರಿಗೆ ಶ್ರೀದೇವಿ ದ್ವಿಪಾತ್ರದಲ್ಲಿ ನಟಿಸಿದ್ದರು.

    'ಲಮ್ಹೆ'

    'ಲಮ್ಹೆ'

    'ಲಮ್ಹೆ' ಒಂದು ವಿಭಿನ್ನ ಸಿನಿಮಾ. ಅಪ್ಪನಂಥ ವ್ಯಕ್ತಿಯ ಮೇಲೆ ಮಗಳ ವಯಸ್ಸಿನ ಹುಡುಗಿಗೆ ಪ್ರೇಮ ಬೆಳೆಯುವುದು ಚಿತ್ರದ ಕಥೆ ಅಗಿತ್ತು. ಈ ಚಿತ್ರದಲ್ಲಿ ಮನೋಘ್ನವಾಗಿ ಶ್ರೀ ದೇವಿ ನಟಿಸಿದ್ದರು. 'ಚಾಂದಿನಿ' ಸಿನಿಮಾದ ನಂತರ ಮತ್ತೆ ಈ ಚಿತ್ರದ ಮೂಲಕ ಯಶ್ ಚೋಪ್ರಾ ಸಿನಿಮಾದಲ್ಲಿ ಶ್ರೀ ದೇವಿ ನಟಿಸಿದರು.

    'ಆರ್ಮಿ '

    'ಆರ್ಮಿ '

    ಮೊದಲ ಬಾರಿಗೆ ಶ್ರೀದೇವಿ ನಟ ಶಾರೂಖ್ ಖಾನ್ ಜೊತೆಗೆ ನಟಿಸಿದ್ದ ಸಿನಿಮಾ 'ಆರ್ಮಿ. ಈ ಚಿತ್ರ 1996ರಲ್ಲಿ ಬಿಡುಗಡೆಯಾಗಿದೆ.

    'ಮಾಮ್'

    'ಮಾಮ್'

    'ಮಾಮ್' ಶ್ರೀದೇವಿ ನಟನೆಯ ಕೊನೆಯ ಸಿನಿಮಾವಾಗಿದೆ. ಕೆಳದ ವರ್ಷ ಈ ಸಿನಿಮಾ ತೆರೆಗೆ ಬಂದಿತ್ತು. ಅದರ ಬಳಿಕ ಶಾರೂಖ್ ಖಾನ್ ನಟನೆ 'ಜೀರೋ' ಚಿತ್ರದ ವಿಶೇಷ ಪಾತ್ರದಲ್ಲಿ ಶ್ರೀದೇವಿ ನಟಿಸಿದ್ದಾರೆ. 'ಜೀರೋ' ಸಿನಿಮಾ ಈ ವರ್ಷದ ಕೊನೆಯಲ್ಲಿ ರಿಲೀಸ್ ಆಗಲಿದೆ.

    English summary
    Bollywood Actress Sridevi passed away on Saturday night (Feb 24th) after a cardiac arrest. She was 54. Saddened by the news of her sudden demise, here is the list of sridevi's top ten popular movies.
    Sunday, February 25, 2018, 17:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X