ಶ್ರೀದೇವಿ ನಿಧನದ ವಾರ್ತೆ ಕೇಳಿ ಶಾಕ್ ಆದ ರಜನಿಕಾಂತ್

By Harshitha

ನಟಿ ಶ್ರೀದೇವಿ ಅವರಿಗೆ 54 ವರ್ಷ ವಯಸ್ಸು ಅಂತ ಹೇಳಿದ್ರೇನೇ ನಂಬೋದು ಕಷ್ಟ. ಅಂಥದ್ರಲ್ಲಿ, ನಟಿ ಶ್ರೀದೇವಿ ಇಹಲೋಕ ತ್ಯಜಿಸಿ ಬಾರದ ಲೋಕಕ್ಕೆ ಪಯಣ ಆರಂಭಿಸಿದ್ದಾರೆ ಅಂತ ಇದ್ದಕ್ಕಿದ್ದಂತೆ ಹೇಳಿದ್ರೆ ನಂಬೋದು ಹೇಗೆ.?

'ಸುರಸುಂದರಿ' ಶ್ರೀದೇವಿ ನಿಧನದ ವಾರ್ತೆ ಇಂದು ಬೆಳ್ಳಂಬೆಳಗ್ಗೆಯೇ ಬರಸಿಡಿಲಿನಂತೆ ಬಡಿದಾಗ, ಅಷ್ಟು ಸುಲಭವಾಗಿ ಯಾರೂ ನಂಬಲಿಲ್ಲ. ಶ್ರೀದೇವಿ ಕುಟುಂಬದ ಮೂಲಗಳು ಖಚಿತ ಪಡಿಸಿದ್ಮೇಲೆ, ಬರೀ ಬಾಲಿವುಡ್ ಮಾತ್ರ ಅಲ್ಲ ಇಡೀ ಭಾರತೀಯ ಚಿತ್ರರಂಗವೇ ದಿಗ್ಭ್ರಮೆಗೊಂಡಿದೆ.

ಶ್ರೀದೇವಿ ಅವರ ಹಠಾತ್ ನಿಧನದಿಂದ ಅನೇಕರು ಶಾಕ್ ಆಗಿದ್ದಾರೆ. ಅಂಥವರ ಪೈಕಿ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಒಬ್ಬರು. ಮುಂದೆ ಓದಿರಿ....

ಸೂಪರ್ ಹಿಟ್ ಜೋಡಿ ರಜನಿ-ಶ್ರೀದೇವಿ

ಸೂಪರ್ ಹಿಟ್ ಜೋಡಿ ರಜನಿ-ಶ್ರೀದೇವಿ

ಒಂದ್ಕಾಲದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಶ್ರೀದೇವಿ ಬಹುಜನಪ್ರಿಯ ಜೋಡಿ. ಸಿನಿಮಾದಲ್ಲಿ ರಜನಿ ಹಾಗೂ ಶ್ರೀದೇವಿ ಜೋಡಿ ಇದ್ದರೆ, ಅದು ಸೂಪರ್ ಹಿಟ್ ಅಂತಲೇ ಭಾವಿಸಲಾಗುತ್ತಿತ್ತು. ನಟಿ ಶ್ರೀದೇವಿ ಜೊತೆಗೆ ಅನೇಕ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿರುವ ರಜನಿಕಾಂತ್ ಇಂದು ದುಃಖತಪ್ತರಾಗಿದ್ದಾರೆ.

ರಜನಿಕಾಂತ್ ಮಾಡಿರುವ ಟ್ವೀಟ್ ಇದು

ರಜನಿಕಾಂತ್ ಮಾಡಿರುವ ಟ್ವೀಟ್ ಇದು

ಶ್ರೀದೇವಿ ನಿಧನದ ವಾರ್ತೆ ಕೇಳಿ 'ತಲೈವಾ' ರಜನಿಕಾಂತ್ ಶಾಕ್ ಆಗಿದ್ದಾರೆ. ''ಶ್ರೀದೇವಿ ವಿಧಿವಶರಾಗಿದ್ದು ಕೇಳಿ ಶಾಕ್ ಆಗಿದ್ದೇನೆ. ತುಂಬಾ ಡಿಸ್ಟರ್ಬ್ ಆಗಿದೆ. ನಾನು ನನ್ನ ಆತ್ಮೀಯ ಸ್ನೇಹಿತೆಯನ್ನು ಕಳೆದುಕೊಂಡಿದ್ದೇನೆ. ಚಿತ್ರರಂಗ ಉತ್ಕೃಷ್ಟ ಕಲಾವಿದೆಯನ್ನು ಕಳೆದುಕೊಂಡಿದೆ. ನನ್ನ ಹೃದಯ ಅವರ ಕುಟುಂಬ ಮತ್ತು ಆಪ್ತ ಸ್ನೇಹಿತರಿಗಾಗಿ ಮಿಡಿಯುತ್ತಿದೆ. ಅವರ ದುಃಖದಲ್ಲಿ ನಾನೂ ಭಾಗಿ. ನಿಮ್ಮ ಮಿಸ್ ಮಾಡಿಕೊಳ್ಳುತ್ತೇನೆ'' ಎಂದು ರಜನಿಕಾಂತ್ ಟ್ವೀಟ್ ಮಾಡಿದ್ದಾರೆ.

ಶ್ರೀದೇವಿ-ರಜನಿ ಕಾಂಬಿನೇಷನ್ ನಲ್ಲಿ ಬಂದ ಸಿನಿಮಾಗಳು

ಶ್ರೀದೇವಿ-ರಜನಿ ಕಾಂಬಿನೇಷನ್ ನಲ್ಲಿ ಬಂದ ಸಿನಿಮಾಗಳು

'ನಾನ್ ಅದಿಮೈ ಇಲ್ಲೈ', 'ಪೋಕಿರಿ ರಾಜಾ', 'ರಣುವ ವೀರನ್', 'ಜಾನಿ', 'ಪ್ರಿಯಾ', 'ಮೂನ್ರು ಮುಡಿಚು' ಸೇರಿದಂತೆ ಹಲವು ಸಿನಿಮಾಗಳಲ್ಲಿ ಶ್ರೀದೇವಿ ಹಾಗೂ ರಜನಿಕಾಂತ್ ತೆರೆ ಹಂಚಿಕೊಂಡಿದ್ದಾರೆ.

ಹೃದಯಾಘಾತಕ್ಕೆ ಒಳಗಾದ ನಟಿ ಶ್ರೀದೇವಿ

ಹೃದಯಾಘಾತಕ್ಕೆ ಒಳಗಾದ ನಟಿ ಶ್ರೀದೇವಿ

ಹಿರಿಯ ನಟಿ ಶ್ರೀದೇವಿ ಹೃದಯಾಘಾತದಿಂದ ನಿನ್ನೆ ರಾತ್ರಿ (ಫೆಬ್ರವರಿ 24) ದುಬೈನಲ್ಲಿ ವಿಧಿವಶರಾದರು. ದುಬೈನಲ್ಲಿ ಮೋಹಿತ್ ಮಾರ್ವಾ ಅವರ ವಿವಾಹ ಮಹೋತ್ಸವ ಇತ್ತು. ಅದರಲ್ಲಿ ಪಾಲ್ಗೊಳ್ಳಲು ಕುಟುಂಬದ ಸಮೇತ ಶ್ರೀದೇವಿ ದುಬೈಗೆ ತೆರಳಿದ್ದರು. ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಶ್ರೀದೇವಿ ಹೃದಯಾಘಾತಕ್ಕೆ ಒಳಗಾದರು.

More from Filmibeat

English summary
Bollywood Actress Sridevi passed away on Saturday night (Feb 24th) after a cardiac arrest. She was 54. Saddened by the news of her sudden demise, Super Star Rajinikanth have tweeted expressing his grief.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X