ಶ್ರೀದೇವಿನ ಕೊಂದ ದೇವರನ್ನ ದ್ವೇಷಿಸುವೆ ಎಂದ ರಾಮ್ ಗೋಪಾಲ್ ವರ್ಮಾ

By Harshitha

Recommended Video

ಬಾಲಿವುಡ್ ನಟಿ ಶ್ರೀದೇವಿ ನಿಧನ : ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ ಆಘಾತ | Filmibeat Kannada

ನಟಿ ಶ್ರೀದೇವಿ ಅಂದ್ರೆ ಯಾರಿಗ್ತಾನೆ ಇಷ್ಟ ಇಲ್ಲ ಹೇಳಿ.? ಅದರಲ್ಲೂ ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ ಶ್ರೀದೇವಿ ಅಂದ್ರೆ ಪಂಚಪ್ರಾಣ. ಬಾಲಿವುಡ್ ಮಹಾರಾಣಿ ಶ್ರೀದೇವಿಯ ಮಹಾ ಫ್ಯಾನ್ ಎಂದೇ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಸೌಂದರ್ಯದ ಸಿರಿದೇವಿ ಆಗಿದ್ದ ಶ್ರೀದೇವಿ ಅಂದ-ಚೆಂದಕ್ಕೆ ಮಾರು ಹೋಗಿದ್ದ ರಾಮ್ ಗೋಪಾಲ್ ವರ್ಮಾ, ಚಿತ್ರರಂಗಕ್ಕೆ ಕಾಲಿಟ್ಟಿದ್ದೇ ಶ್ರೀದೇವಿ ಅವರನ್ನ ಹತ್ತಿರದಿಂದ ನೋಡುವ ಸಲುವಾಗಿಯಂತೆ.

ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ಶ್ರೀದೇವಿಗಾಗಿ 'ಕ್ಷಣ ಕ್ಷಣಂ' ಎಂಬ ಸಿನಿಮಾ ನಿರ್ದೇಶನ ಮಾಡಿದರು ರಾಮ್ ಗೋಪಾಲ್ ವರ್ಮಾ. ''ಕ್ಷಣ ಕ್ಷಣಂ' ಸಿನಿಮಾ ಶ್ರೀದೇವಿಗಾಗಿ ನಾನು ಬರೆದ ಲವ್ ಲೆಟರ್'' ಎಂದು ಆರ್.ಜಿ.ವಿ ಟ್ವೀಟ್ ಮಾಡಿದ್ದಾರೆ.

ಶ್ರೀದೇವಿ ವಿಧಿವಶರಾದ ಸುದ್ದಿ ಕೇಳಿ ದಿಗ್ಭ್ರಾಂತನಾಗಿರುವ ರಾಮ್ ಗೋಪಾಲ್ ವರ್ಮಾ, ಶ್ರೀದೇವಿ ಬಗ್ಗೆ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಸಾಲು ಸಾಲು ಟ್ವೀಟ್ ಮಾಡಿದ್ದಾರೆ. ಆ ಎಲ್ಲ ಟ್ವೀಟ್ ಗಳು ಇಲ್ಲಿವೆ ನೋಡಿ...

ದೇವರನ್ನ ಎಂದೂ ಇಷ್ಟು ದ್ವೇಷಿಸಿಲ್ಲ.!

''ಯಾವತ್ತೂ ನಾನು ದೇವರನ್ನ ಇಷ್ಟು ದ್ವೇಷಿಸಿಲ್ಲ. ಪ್ರಕಾಶಮಾನವಾದ ಬೆಳಕನ್ನ ಇಂದು ಆ ದೇವರು ಕಿತ್ತುಕೊಂಡಿದ್ದಾನೆ. ನನ್ನ ಹೃದಯ ಬೋನಿ ಕಪೂರ್ ಗಾಗಿ ಮಿಡಿಯುತ್ತಿದೆ'' - ರಾಮ್ ಗೋಪಾಲ್ ವರ್ಮಾ

ಕೆಟ್ಟ ಕನಸು ಅಂತ ಯಾರಾದರೂ ಹೇಳಿ..

''ಶ್ರೀದೇವಿ ನಿಜಕ್ಕೂ ವಿಧಿವಶರಾಗಿದ್ದಾರಾ.? ಯಾರಾದರೂ ನನ್ನ ಎಬ್ಬಿಸಿ, ಇದು ಕೆಟ್ಟ ಕನಸು ಅಂತ ಹೇಳಿ'' - ರಾಮ್ ಗೋಪಾಲ್ ವರ್ಮಾ

ಹೀಗೆ ಹೋಗಲು ಹೇಗೆ ಸಾಧ್ಯ.?

''ಶ್ರೀದೇವಿ ಹೀಗೆ ದೂರ ಹೋಗಲು ಹೇಗೆ ಸಾಧ್ಯ ಅಂತ ಯಾರಾದರೂ ಹೇಳಿ.?'' - ರಾಮ್ ಗೋಪಾಲ್ ವರ್ಮಾ

ದೇವರನ್ನ ದ್ವೇಷಿಸುತ್ತೇನೆ.!

''ಶ್ರೀದೇವಿನ ಕೊಂದ ದೇವರನ್ನ ನಾನು ದ್ವೇಷಿಸುತ್ತೇನೆ. ಕೊನೆಯುಸಿರೆಳೆದಿದ್ದಕ್ಕೆ ಶ್ರೀದೇವಿನ ದ್ವೇಷಿಸುತ್ತೇನೆ'' - ರಾಮ್ ಗೋಪಾಲ್ ವರ್ಮಾ

ನಾವು ಅಳಬೇಕು.!

''ನೀನ್ಯಾಕೆ ಅಳುತ್ತಿದ್ದೀಯಾ ಶ್ರೀದೇವಿ.? ನಿನ್ನಿಂದಾಗಿ ಈಗ ನಾವು ಅಳಬೇಕು'' - ರಾಮ್ ಗೋಪಾಲ್ ವರ್ಮಾ

ಶ್ರೀದೇವಿ ಕಾರಣ

''ನಾನು ಚಿತ್ರರಂಗಕ್ಕೆ ಕಾಲಿಟ್ಟಿದ್ದೇ ಶ್ರೀದೇವಿ ಅವರನ್ನ ಹತ್ತಿರದಿಂದ ನೋಡುವ ಸಲುವಾಗಿ. 'ಕ್ಷಣಕ್ಷಣಂ' ಸಿನಿಮಾ ಶ್ರೀದೇವಿಗೆ ನಾನು ಬರೆದ ಲವ್ ಲೆಟರ್'' - ರಾಮ್ ಗೋಪಾಲ್ ವರ್ಮಾ

ನನ್ನನ್ನ ಯಾಕೆ ಉಳಿಸಿದೆ

''ಏಯ್ ಬಾಲಾಜಿ, ನನ್ನನ್ನ ಉಳಿಸಿ ಶ್ರೀದೇವಿಯನ್ನ ಮಾತ್ರ ಯಾಕೆ ನೀನು ಕರೆದುಕೊಂಡೆ.?'' - ರಾಮ್ ಗೋಪಾಲ್ ವರ್ಮಾ

ಫೋಟೋಗಳನ್ನ ಹಂಚಿಕೊಳ್ಳುತ್ತಿರುವ ಆರ್.ಜಿ.ವಿ

ಶ್ರೀದೇವಿ ಅವರನ್ನ ಕಳೆದುಕೊಂಡ ನೋವಿನಲ್ಲಿ ಹಳೇ ನೆನಪುಗಳಿಗೆ ಜಾರಿರುವ ರಾಮ್ ಗೋಪಾಲ್ ವರ್ಮಾ, ಟ್ವಿಟ್ಟರ್ ನಲ್ಲಿ ಕೆಲ ಫೋಟೋಗಳನ್ನೂ ಶೇರ್ ಮಾಡುತ್ತಿದ್ದಾರೆ.

More from Filmibeat

English summary
Bollywood Actress Sridevi passed away on Saturday night (Feb 24th) after a cardiac arrest. She was 54. Saddened by the news of her sudden demise, Director Ram Gopal Varma have tweeted expressing his grief.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X