»   » ಕೊನೆಯುಸಿರೆಳೆದ ಶ್ರೀದೇವಿ: ಮಮ್ಮಲ ಮರುಗಿದ ದಕ್ಷಿಣ ಭಾರತ ಚಿತ್ರರಂಗ

ಕೊನೆಯುಸಿರೆಳೆದ ಶ್ರೀದೇವಿ: ಮಮ್ಮಲ ಮರುಗಿದ ದಕ್ಷಿಣ ಭಾರತ ಚಿತ್ರರಂಗ

Posted By:
Subscribe to Filmibeat Kannada

ಬಾಲಿವುಡ್ ಮಾತ್ರ ಅಲ್ಲ, ದಕ್ಷಿಣ ಭಾರತದ ಚಿತ್ರರಂಗದಲ್ಲೂ ನಂಬರ್ ಒನ್ ತಾರೆ ಆಗಿ ಮಿನುಗಿದ ನಟಿ ಶ್ರೀದೇವಿ ಇನ್ನೂ ನೆನಪು ಮಾತ್ರ. ಹೃದಯಾಘಾತದಿಂದ ನಿನ್ನೆ ರಾತ್ರಿ (ಫೆಬ್ರವರಿ 24) ದುಬೈನಲ್ಲಿ ಕೊನೆಯುಸಿರೆಳೆದಿದ್ದಾರೆ ನಟಿ ಶ್ರೀದೇವಿ.

ಮೋಹಿತ್ ಮಾರ್ವಾ ಅವರ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಇಡೀ ಕುಟುಂಬದ ಜೊತೆಗೆ ದುಬೈಗೆ ತೆರಳಿದ್ದ ಶ್ರೀದೇವಿ, ಅಲ್ಲೇ ವಿಧಿವಶರಾಗಿದ್ದಾರೆ.

ಶ್ರೀದೇವಿಯ ಹಠಾತ್ ನಿಧನದ ಸುದ್ದಿ ಕೇಳಿ ಇಡೀ ಚಿತ್ರರಂಗವೇ ಶೋಕ ಸಾಗರದಲ್ಲಿ ಮುಳುಗಿದೆ. ಬಾಲಿವುಡ್ ನ ಖ್ಯಾತ ನಾಮರು ಕಂಬನಿ ಮಿಡಿದಿದ್ದಾರೆ. ಶ್ರೀದೇವಿ ಅಗಲಿಕೆಗೆ ದಕ್ಷಿಣ ಭಾರತದ ಖ್ಯಾತ ನಟ-ನಟಿಯರು ಮಮ್ಮಲ ಮರುಗಿದ್ದಾರೆ. ಮುಂದೆ ಓದಿರಿ...

ಮಿಸ್ ಮಾಡಿಕೊಳ್ಳುವೆ

''ಹರೆಯದ ಹುಡುಗಿಯಾಗಿದ್ದಾಗಿನಿಂದಲೂ ನಾನು ಶ್ರೀದೇವಿಯನ್ನ ಬಲ್ಲೆ. ಕಡೆಯ ಬಾರಿ ನಾವು ಭೇಟಿ ಆಗಿದ್ದು, ಹಾಗೆ ನಾವು ಕಳೆದ ಹಲವು ಸಂತಸದ ಕ್ಷಣಗಳು ನನ್ನ ಕಣ್ಣ ಮುಂದೆ ಬರುತ್ತಿವೆ. 'ಸದ್ಮಾ' ಹಾಡು ನನ್ನ ಕಿವಿಯಲ್ಲಿ ಗುಯ್ ಗುಟ್ಟುತ್ತಿದೆ. ನಾನು ಆಕೆಯನ್ನ ಮಿಸ್ ಮಾಡಿಕೊಳ್ಳುತ್ತೇನೆ'' - ಕಮಲ್ ಹಾಸನ್

ಹೃದಯಾಘಾತದಿಂದ ಬಾಲಿವುಡ್ ನಟಿ ಶ್ರೀದೇವಿ ನಿಧನ

ತುಂಬಲಾರದ ನಷ್ಟ

''ಆಕೆ ಬಂದರು, ನೋಡಿದರು, ಆಕ್ರಮಿಸಿದರು, ಮತ್ತು ಸ್ವರ್ಗಕ್ಕೆ ವಾಪಸ್ ತೆರಳಿದರು. ಶ್ರೀದೇವಿ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ'' - ಜೂನಿಯರ್ ಎನ್.ಟಿ.ಆರ್

'ಅತಿಲೋಕ ಸುಂದರಿ' ಶ್ರೀದೇವಿ ಅಗಲಿಕೆಗೆ ಕಂಬನಿ ಮಿಡಿದ ಬಾಲಿವುಡ್

ನಮ್ಮ ಹೃದಯದಲ್ಲಿ ಚಿರಾಯು

''ಶ್ರೀದೇವಿ ಇನ್ನಿಲ್ಲ ಎಂಬ ಶಾಕಿಂಗ್ ಸುದ್ದಿಯೊಂದಿಗೆ ಇಂದು ಎಚ್ಚರಗೊಂಡೆ. ಆಕೆ ಪ್ರತಿಭಾವಂತೆ ಹಾಗೂ ಸುಂದರಿ. ಶ್ರೀದೇವಿ ನಮ್ಮ ಹೃದಯದಲ್ಲಿ ಚಿರಾಯು ಆಗಿರುತ್ತಾರೆ'' - ಖುಷ್ಬು

ಶ್ರೀದೇವಿಯ ಕಟ್ಟಕಡೆಯ ವಿಡಿಯೋ ಮತ್ತು ಫೋಟೋ: ಖುಷಿಖುಷಿಯಾಗಿದ್ದ ನಟಿ ಇನ್ನಿಲ್ಲ!

ಸ್ವರ್ಗವೇ ಲಕ್ಕಿ

''ಈ ಸಮಯದಲ್ಲಿ ಶ್ರೀದೇವಿ ಕುಟುಂಬ ಅನುಭವಿಸುತ್ತಿರುವ ಯಾತನೆಯನ್ನ ಊಹಿಸಿಕೊಳ್ಳಲು ಆಗಲ್ಲ. ಸ್ವರ್ಗವೇ ಲಕ್ಕಿ. ಶ್ರೀದೇವಿ ಆತ್ಮಕ್ಕೆ ಶಾಂತಿ ಸಿಗಲಿ''- ಮಾಧವನ್

ಹೃದಯ ಛಿದ್ರವಾಗಿದೆ

''ಶ್ರೀದೇವಿ ನಿಧನದ ಸುದ್ದಿ ಕೇಳಿ ಹೃದಯ ಛಿದ್ರವಾಗಿದೆ. ಇದನ್ನ ನಂಬುವುದಕ್ಕೆ ಆಗುತ್ತಿಲ್ಲ. ಮಾತೇ ಹೊರಡುತ್ತಿಲ್ಲ'' - ಶ್ರುತಿ ಹಾಸನ್

ರಜನಿಕಾಂತ್ ಮಾಡಿರುವ ಟ್ವೀಟ್ ಇದು

''ಶ್ರೀದೇವಿ ವಿಧಿವಶರಾಗಿದ್ದು ಕೇಳಿ ಶಾಕ್ ಆಗಿದ್ದೇನೆ. ತುಂಬಾ ಡಿಸ್ಟರ್ಬ್ ಆಗಿದೆ. ನಾನು ನನ್ನ ಆತ್ಮೀಯ ಸ್ನೇಹಿತೆಯನ್ನು ಕಳೆದುಕೊಂಡಿದ್ದೇನೆ. ಚಿತ್ರರಂಗ ಉತ್ಕೃಷ್ಟ ಕಲಾವಿದೆಯನ್ನು ಕಳೆದುಕೊಂಡಿದೆ. ನನ್ನ ಹೃದಯ ಅವರ ಕುಟುಂಬ ಮತ್ತು ಆಪ್ತ ಸ್ನೇಹಿತರಿಗಾಗಿ ಮಿಡಿಯುತ್ತಿದೆ. ಅವರ ದುಃಖದಲ್ಲಿ ನಾನೂ ಭಾಗಿ. ನಿಮ್ಮ ಮಿಸ್ ಮಾಡಿಕೊಳ್ಳುತ್ತೇನೆ'' ಎಂದು ರಜನಿಕಾಂತ್ ಟ್ವೀಟ್ ಮಾಡಿದ್ದಾರೆ.

ಶ್ರೀದೇವಿ ನಿಧನದ ವಾರ್ತೆ ಕೇಳಿ ಶಾಕ್ ಆದ ರಜನಿಕಾಂತ್

ಟ್ವೀಟ್ ಮಾಡಿದ್ದಾರೆ ಸುದೀಪ್

''ಶ್ರೀದೇವಿ ಅಂತ ಉತ್ಕೃಷ್ಟ ತಾರೆ ಜೊತೆಗೆ ಕೆಲ ಕಾಲ ಕಳೆಯುವ ಅವಕಾಶ ಸಿಕ್ಕಿದ್ದಕ್ಕೆ ನಾನು ಲಕ್ಕಿ ಅಂತ ಭಾವಿಸಬೇಕಾ.? ಶ್ರೀದೇವಿ ಬಹುತೇಕರಿಗೆ ಸ್ಫೂರ್ತಿಯ ಚಿಲುಮೆ. ಕೆಲವೊಂದನ್ನ ನಂಬುವುದು ಕಷ್ಟ, ಸ್ವೀಕರಿಸುವುದು ಅದಕ್ಕಿಂತ ಕಷ್ಟ. ಹೃದಯ ಛಿದ್ರಗೊಂಡಿದೆ. ಶ್ರೀದೇವಿ ಅವರ ಆತ್ಮಕ್ಕೆ ಸಿಗಲಿ'' ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

'ಡ್ರೀಮ್ ಗರ್ಲ್' ಶ್ರೀದೇವಿ ವಿಧಿವಶ: ಕಿಚ್ಚ ಸುದೀಪ್ ಹೃದಯ ಛಿದ್ರ

ದೇವರನ್ನ ದ್ವೇಷಿಸುತ್ತೇನೆ.!

''ಶ್ರೀದೇವಿನ ಕೊಂದ ದೇವರನ್ನ ನಾನು ದ್ವೇಷಿಸುತ್ತೇನೆ. ಕೊನೆಯುಸಿರೆಳೆದಿದ್ದಕ್ಕೆ ಶ್ರೀದೇವಿನ ದ್ವೇಷಿಸುತ್ತೇನೆ'' - ರಾಮ್ ಗೋಪಾಲ್ ವರ್ಮಾ

ಶ್ರೀದೇವಿನ ಕೊಂದ ದೇವರನ್ನ ದ್ವೇಷಿಸುವೆ ಎಂದ ರಾಮ್ ಗೋಪಾಲ್ ವರ್ಮಾ

ಎಷ್ಟೋ ಜನರಿಗೆ ಶ್ರೀದೇವಿ ಸ್ಫೂರ್ತಿ

''ಬೆಳ್ಳಂಬೆಳಗ್ಗೆ ಎದ್ದ ಕೂಡಲೆ ಅತಿ ಕೆಟ್ಟ ಸುದ್ದಿ ಕೇಳಿದೆ. ನನ್ನ ಮೊಟ್ಟಮೊದಲ ಸಿನಿಮಾದಲ್ಲಿ ನಟ ಕೃಷ್ಣ ಸಹೋದರಿಯಾಗಿ ನಾನು ನಟಿಸಿದೆ. ಆ ಚಿತ್ರಕ್ಕೆ ಶ್ರೀದೇವಿ ಹೀರೋಯಿನ್. ಆಕೆ ನಿಜಕ್ಕೂ ಎಷ್ಟೋ ಜನರಿಗೆ ಸ್ಫೂರ್ತಿ'' - ಸುಮಲತಾ ಅಂಬರೀಶ್

ದಿಗ್ಭ್ರಮೆಗೊಂಡ ಜಗ್ಗೇಶ್

ಶ್ರೀದೇವಿ ಸಾವಿನ ಸುದ್ದಿ ಕೇಳಿ ನಟ ಜಗ್ಗೇಶ್ ಕೂಡ ದಿಗ್ಭ್ರಮೆಗೊಂಡಿದ್ದಾರೆ.

ಲಮ್ಹೆ ಅಚ್ಚುಮೆಚ್ಚು

''ಅವರ ಭಾವನೆ, ಡ್ಯಾನ್ಸ್ ಹಾಗೂ ಎಲ್ಲ ಸಿನಿಮಾಗಳಲ್ಲಿ ಲಮ್ಹೆ ನನ್ನ ಅಚ್ಚುಮೆಚ್ಚು. ಪ್ರತಿಯೊಬ್ಬ ಅಭಿಮಾನಿಯ ಹೃದಯದಲ್ಲೂ ಶ್ರೀದೇವಿ ಚಿರಾಯು ಆಗಿರುತ್ತಾರೆ'' - ರಕ್ಷಿತಾ ಪ್ರೇಮ್

English summary
Bollywood Actress Sridevi passed away on Saturday night (Feb 24th) after a cardiac arrest. She was 54. Saddened by the news of her sudden demise, South Indian celebrities have tweeted expressing their grief.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada