'ಚಿತ್ರರಂಗಕ್ಕೆ ಇರುವುದು ಒಬ್ಬರೇ ಶ್ರೀ ದೇವಿ' ಎಂದ ನಟ ಯಶ್
ಶ್ರೀದೇವಿ ಅವರ ನಿಧನದ ವಾರ್ತೆ ಎಲ್ಲರಿಗೂ ಶಾಕಿಂಗ್ ಸುದ್ದಿಯಾಗಿದೆ. ಇಷ್ಟು ಬೇಗ ಶ್ರೀದೇವಿ ಎಲ್ಲರನ್ನು ಬಿಟ್ಟು ಹೋಗುತ್ತಾರೆ ಎಂದು ಯಾರು ಊಹೆ ಮಾಡಿರಲಿಲ್ಲ. ಇನ್ನೂ ಶ್ರೀದೇವಿ ಅವರ ಸಾವಿನ ಬಗ್ಗೆ ಮಾತನಾಡಿದ ನಟ ಯಶ್ ಈ ವಿಷಯವನ್ನು ನಂಬಲು ಆಗುತ್ತಿಲ್ಲ ಅಂತ ಹೇಳಿದ್ದಾರೆ.
ಮಾಧ್ಯಮದ ಜೊತೆಗೆ ಮಾತನಾಡಿರುವ ಯಶ್ ''ಇಂದು ಬೆಳಗಿನ ಜಾವ 4 ಗಂಟೆಗೆ ವಿಷಯ ತಿಳಿಯಿತು. ನಂಬಲು ಆಗಲಿಲ್ಲ. ಈಗಲೂ ಆ ಸುದ್ದಿ ನಿಜ ಎಂದು ಅನಿಸುತ್ತಿಲ್ಲ. ಯಾಕಂದ್ರೆ ಅವರು ನೋಡಿದರೆ ಯಾವಾಗಲೂ ತುಂಬ ಫಿಟ್ ಆಗಿ ಇದ್ದರು. ಅಂತಹ ಮಹಾನ್ ನಟಿ ಇಷ್ಟು ಬೇಗ ಸಾಯುತ್ತಾರೆ ಎಂದು ಯಾರು ಅಂದುಕೊಂಡಿರಲಿಲ್ಲ. ಅವರನ್ನು ನಾವು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ. ಚಿತ್ರರಂಗಕ್ಕೆ ಇರುವುದು ಒಬ್ಬರೇ ಶ್ರೀದೇವಿ'' ಎಂದು ಯಶ್ ಹೇಳಿದ್ದಾರೆ.
ಇನ್ನು ನಟ ಶಿವಣ್ಣ ಕೂಡ ಮಾತನಾಡಿ ''ಅವರು ಇಲ್ಲ ಅಂತ ಕೇಳುವುದಕ್ಕೆ ತುಂಬ ನೋವಾಗುತ್ತದೆ. ಈ ಹಿಂದೆ ಶ್ರೀ ದೇವಿ ಅವರನ್ನು ಎರಡು ಬಾರಿ ಶಿವಣ್ಣ ಭೇಟಿ ಮಾಡಿದೆ. ಅವರು ಇಲ್ಲ ಎನ್ನುವ ಸುದ್ದಿಯನ್ನು ಜೀರ್ಣ ಮಾಡಿಕೊಳ್ಳಲು ಆಗುತ್ತಿಲ್ಲ.'' ಎಂದು ಹೇಳಿದ್ದಾರೆ.

ಅಂದಹಾಗೆ, ಬಾಲಿವುಡ್ ನ ಹಿರಿಯ ನಟಿ ಶ್ರೀದೇವಿ(54) ಹೃದಯಾಘಾತದಿಂದ ದುಬೈನಲ್ಲಿ ಶನಿವಾರ ರಾತ್ರಿ ನಿಧನರಾಗಿದ್ದಾರೆ. ಶ್ರೀದೇವಿ ತಮ್ಮ ಪತಿ ಬೋನಿ ಕಪೂರ್ ಮತ್ತು ಪುತ್ರಿ ಖುಷಿ ಜೊತೆ ದುಬೈಗೆ ಹಾರಿದ್ದರು. ದುಬೈನಲ್ಲಿ ಮೋಹಿತ್ ಮಾರ್ವಾ ವಿವಾಹ ಮಹೋತ್ಸವ ಇದ್ದ ಕಾರಣ ಇಡೀ ಕಪೂರ್ ಫ್ಯಾಮಿಲಿ ಅಲ್ಲಿಗೆ ತೆರಳಿತ್ತು. ಈ ವೇಳೆ ಈ ಘಟನೆ ನಡೆದಿದೆ.


Click it and Unblock the Notifications











