'ಕೆಜಿಎಫ್ 2' ಡಬ್ಬಿಂಗ್ ಮುಗಿಸಿದ ಶ್ರೀನಿಧಿ ಶೆಟ್ಟಿ: ಇನ್ನೂ ಎಷ್ಟು ಕೆಲಸ ಬಾಕಿ ಇದೆ?

'ಕೆಜಿಎಫ್ 2' ಸಿನಿಮಾ ಏಪ್ರಿಲ್ 14ರಂದು ಬಿಡುಗಡೆ ಆಗಲಿದೆ ಆದರೆ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಪೂರ್ಣವಾಗಿ ಮುಗಿದಿಲ್ಲ. ಇನ್ನೂ ಕೆಲವು ಕೆಲಸಗಳು ಬಾಕಿ ಇವೆ.

ನಿನ್ನೆಯಷ್ಟೆ ಸಿನಿಮಾದ ನಾಯಕಿ ಶ್ರೀನಿಧಿ ಶೆಟ್ಟಿ 'ಕೆಜಿಎಫ್ 2' ಸಿನಿಮಾದ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮುಗಿಸಿದ್ದಾರೆ. ಶ್ರೀನಿಧಿ ಶೆಟ್ಟಿ ಡಬ್ಬಿಂಗ್ ಮುಗಿಸಿದ್ದಾರಾದರೂ ಇನ್ನೂ ಕೆಲವು ನಟರ ಡಬ್ಬಿಂಗ್ ಬಾಕಿ ಇದೆ ಎನ್ನಲಾಗುತ್ತಿದೆ.

Recommended Video

ಇದು KGF 2 ಮೇಲೆ ಶ್ರೀನಿಧಿ ಶೆಟ್ಟಿಗೆ ಇರೋ ಲವ್

'ಕೆಜಿಎಫ್ 2'ಸಿನಿಮಾದ ಡಬ್ಬಿಂಗ್ ಮುಗಿಸಿದ ವಿಷಯವನ್ನು ಸಾಮಾಜಿಕ ಜಾಲತಾಣದ ಮೂಲಕ ನಟಿ ಶ್ರೀನಿಧಿ ಶೆಟ್ಟಿ ಹಂಚಿಕೊಂಡಿದ್ದಾರೆ. ಸಿನಿಮಾಕ್ಕೆ ಡಬ್ಬಿಂಗ್ ಮಾಡುತ್ತಿರುವ ಕೆಲವು ಚಿತ್ರಗಳನ್ನು ಸಹ ಶ್ರೀನಿಧಿ ಶೆಟ್ಟಿ ಹಂಚಿಕೊಂಡಿದ್ದಾರೆ.

ಡಬ್ಬಿಂಗ್ ಮಾಡಿದ ಶ್ರೀನಿಧಿ

ಡಬ್ಬಿಂಗ್ ಮಾಡಿದ ಶ್ರೀನಿಧಿ

'ಕೆಜಿಎಫ್ 2' ಸಿನಿಮಾಕ್ಕೆ ಡಬ್ಬಿಂಗ್ ಮಾಡುತ್ತಿರುವ ಕೆಲವು ಚಿತ್ರಗಳನ್ನು ಶ್ರೀನಿಧಿ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ''ಇದಕ್ಕಾಗಿ ನನ್ನ ಪೂರ್ಣ ಹೃದಯವನ್ನು ಅರ್ಪಿಸಿ ಎಲ್ಲವನ್ನೂ ಮುಗಿಸಿದ್ದೇನೆ. ನಿಮ್ಮನ್ನೆಲ್ಲ ಏಪ್ರಿಲ್ 14 ರಂದು ಭೇಟಿ ಆಗಲಿದ್ದೇನೆ. 'ಕೆಜಿಎಫ್ ಚಾಪ್ಟರ್ 2 ಏಪ್ರಿಲ್ 14ಕ್ಕೆ' ಎಂದು ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಶ್ರೀನಿಧಿ ಬರೆದುಕೊಂಡಿದ್ದಾರೆ.

ಡಿಸೆಂಬರ್ ತಿಂಗಳಲ್ಲಿ ಚಿತ್ರೀಕರಣ ಮುಗಿಸಿದ್ದ ಶ್ರೀನಿಧಿ

ಡಿಸೆಂಬರ್ ತಿಂಗಳಲ್ಲಿ ಚಿತ್ರೀಕರಣ ಮುಗಿಸಿದ್ದ ಶ್ರೀನಿಧಿ

'ಕೆಜಿಎಫ್ 2' ಸಿನಿಮಾದ ಚಿತ್ರೀಕರಣವನ್ನು ಶ್ರೀನಿಧಿ ಶೆಟ್ಟಿ ಮುಗಿಸಿದ್ದು ಒಂದು ತಿಂಗಳ ಹಿಂದೆಯಷ್ಟೆ. ಡಿಸೆಂಬರ್ 21, 2021ರಂದು ಶ್ರೀನಿಧಿ ಶೆಟ್ಟಿ 'ಕೆಜಿಎಫ್ 2' ಸಿನಿಮಾದ ಚಿತ್ರೀಕರಣ ಮುಗಿಸಿದ್ದರು. '2016ರಲ್ಲಿ ಈ ಸಿನಿಮಾಕ್ಕೆ ಸಹಿ ಹಾಕಿದೆ. ಮೂರು ವರ್ಷಗಳ ಬಳಿಕ ಇಂದು ಚಿತ್ರೀಕರಣ ಮುಗಿಸುತ್ತಿದ್ದೇನೆ'' ಎಂದು ಶ್ರೀನಿಧಿ ಶೆಟ್ಟಿ ಬರೆದುಕೊಂಡಿದ್ದರು. ಈ ಸಿನಿಮಾ ನನ್ನ ಪಾಲಿಗೆ ಬಹಳ ವಿಶೇಷವಾದುದು ಎಂದು ಸಹ ಶ್ರೀನಿಧಿ ಶೆಟ್ಟಿ ಬರೆದುಕೊಂಡಿದ್ದರು.

'ಕೆಜಿಎಫ್' ತಂಡದ ಟೆಂಪಲ್ ರನ್

'ಕೆಜಿಎಫ್' ತಂಡದ ಟೆಂಪಲ್ ರನ್

ಕೆಲವು ದಿನಗಳ ಹಿಂದಷ್ಟೆ 'ಕೆಜಿಎಫ್ 2' ಚಿತ್ರತಂಡ ಕರಾವಳಿ, ಮಲೆನಾಡು ಭಾಗದ ಕೆಲವು ದೇವಾಲಯಗಳಿಗೆ ಭೇಟಿ ಕೊಟ್ಟು ಆಶೀರ್ವಾದ ಪಡೆದಿದ್ದಾರೆ. ಸಿನಿಮಾದ ಪ್ರಚಾರ ಕಾರ್ಯ ಆರಂಭಿಸುವ ಮುನ್ನ ನಟ ಯಶ್, ನಿರ್ಮಾಪಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರು, ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಇನ್ನೂ ಕೆಲವರು ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ಕೆಲವೇ ದಿನಗಳಲ್ಲಿ ಸಿನಿಮಾದ ಪ್ರಚಾರ ಕಾರ್ಯ ಆರಂಭವಾಗಲಿರುವ ಕಾರಣ ಈ ಟೆಂಪಲ್ ರನ್ ಅನ್ನು ಚಿತ್ರತಂಡ ಮಾಡಿದೆ.

ಏಪ್ರಿಲ್ 24 ಕ್ಕೆ ಸಿನಿಮಾ ಬಿಡುಗಡೆ

ಏಪ್ರಿಲ್ 24 ಕ್ಕೆ ಸಿನಿಮಾ ಬಿಡುಗಡೆ

'ಕೆಜಿಎಫ್ 2' ಸಿನಿಮಾವು ಏಪ್ರಿಲ್ 24 ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಯಶ್ ಜೊತೆಗೆ ಸಂಜಯ್ ದತ್ ಹಾಗೂ ರವೀನಾ ಟಂಡನ್ ಅವರುಗಳ ಪಾತ್ರಗಳು ಸಹ ಮುಖ್ಯ ಆಕರ್ಷಣೆಯಾಗಿರಲಿವೆ. 'ಕೆಜಿಎಫ್ 2' ಸಿನಿಮಾ ಬಿಡುಗಡೆ ಆಗುವ ದಿನವೇ ಅಮೀರ್ ಖಾನ್‌ರ 'ಲಾಲ್ ಸಿಂಗ್ ಛಡ್ಡಾ' ಸಿನಿಮಾ ಸಹ ಬಿಡುಗಡೆ ಆಗಲಿದೆ. ಆದರೆ ಆ ಸಿನಿಮಾ 'ಕೆಜಿಎಫ್ 2' ಗೆ ಯಾವುದೇ ಪೈಪೋಟಿ ನೀಡುವುದಿಲ್ಲ ಎನ್ನಲಾಗುತ್ತಿದೆ. 'ಕೆಜಿಎಫ್: ಚಾಪ್ಟರ್ 1' ಸಿನಿಮಾ 2018 ರ ಡಿಸೆಂಬರ್ ನಲ್ಲಿ ಬಿಡುಗಡೆ ಆಗಿತ್ತು. ಅದಾದ ಬಹುತೇಕ ಮೂರು ವರ್ಷಗಳ ಬಳಿಕ 'ಕೆಜಿಎಫ್: ಚಾಪ್ಟರ್ 2' ಬಿಡುಗಡೆ ಆಗಲಿದೆ.

More from Filmibeat

English summary
Actress Srinidhi Shetty completes dubbing for KGF 2 movie. In last December she finished shooting of her last scene for the movie KGF 2.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X