''ಕೆ ಜಿ ಎಫ್' ನನ್ನ ಜೀವನದ ಉತ್ತಮ ನಿರ್ಧಾರ'' ಎಂದ ಶ್ರೀನಿಧಿ ಶೆಟ್ಟಿ
Recommended Video

ನಟ ಯಶ್ ಅಭಿನಯದ 'ಕೆ ಜಿ ಎಫ್' ಸಿನಿಮಾದ ಚಿತ್ರೀಕರಣ ಇತ್ತೀಚಿಗಷ್ಟೆ ಮುಗಿದಿದೆ. ಎರಡು ವರ್ಷಗಳ ಸತತ ಚಿತ್ರೀಕರಣದ ಬಳಿಕ ಶೂಟಿಂಗ್ ಕಂಪ್ಲೀಟ್ ಆಗಿದೆ.
ಬಹು ನಿರೀಕ್ಷಿತ 'ಕೆ ಜಿ ಎಫ್' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವುದು ಶ್ರೀನಿಧಿ ಶೆಟ್ಟಿ. ಇದು ಅವರ ಮೊದಲ ಸಿನಿಮಾ. ಮಾಡೆಲಿಂಗ್ ನಲ್ಲಿ ಹೆಸರು ಮಾಡಿರುವ ಈ ಚೆಲುವೆ 'ಕೆ ಜಿ ಎಫ್' ಸಿನಿಮಾ ಪ್ರಯಾಣ ಪ್ರಾರಂಭ ಮಾಡುತ್ತಿದ್ದಾರೆ. ಚಿತ್ರದ ಬಗ್ಗೆ ಇದುವರೆಗೆ ಹೆಚ್ಚು ಮಾತನಾಡಿರದ ಇವರು ಈಗ ತಮ್ಮ ಇನ್ಟಾಗ್ರಾಮ್ ಖಾತೆಯ ಮೂಲಕ ಸಂತಸ ಹಂಚಿಕೊಂಡಿದ್ದಾರೆ.
ಸಿನಿಮಾದ ಚಿತ್ರೀಕರಣ ಮುಗಿಸಿರುವ ಖುಷಿಯಲ್ಲಿ ಇರುವ ಶ್ರೀನಿಧಿ ಶೆಟ್ಟಿ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ''ಕೆ ಜಿ ಎಫ್' ನನ್ನ ಜೀವನದ ಉತ್ತಮ ನಿರ್ಧಾರ'' ಎಂದಿದ್ದಾರೆ. ಮುಂದೆ ಓದಿ...

ಇದು ನನ್ನ ಅದೃಷ್ಟ
''ಎರಡು ವರ್ಷಗಳ ಹಿಂದೆ ನಾನು 'ಕೆ ಜಿ ಎಫ್' ಚಿತ್ರತಂಡವನ್ನು ಭೇಟಿ ಮಾಡಿದೆ. ಆಗ ನನಗೆ ಈ ಸಿನಿಮಾದ ನಾಯಕಿ ಪಾತ್ರಕ್ಕೆ ಅವಕಾಶ ಬಂತು. ಇಂತಹ ಅದ್ಬುತ ಸಿನಿಮಾದ ಭಾಗ ಆಗಿರುವುದು ನನ್ನ ಅದೃಷ್ಟ. ಈ ಚಿತ್ರದ ಮೂಲಕ ನನ್ನ ಸಿನಿಮಾ ಜರ್ನಿ ಶುರು ಆಗುತ್ತಿರುವುದು ಖುಷಿಯ ವಿಚಾರ'' - ಶ್ರೀನಿಧಿ ಶೆಟ್ಟಿ, ನಟಿ

ನನ್ನ ಜೀವನದಲ್ಲಿ ತೆಗೆದುಕೊಂಡೆ ಉತ್ತಮ ನಿರ್ಧಾರ
''ನನಗೆ 'ಕೆ ಜಿ ಎಫ್' ಸಿನಿಮಾ ಪಯಣ ಅನಿರೀಕ್ಷಿತ ಮತ್ತು ನಂಬಲು ಅಸಾಧ್ಯ ಆಗದಿರುವ ವಿಷಯ. ಆದರೆ, ಇದೀಗ ಸಿನಿಮಾದ ಚಿತ್ರೀಕರಣವನ್ನು ನಾವು ಮುಗಿಸಿದ್ದೇವೆ. ನಾನು ಈಗ ಹೇಳುವುದೇನೆಂದರೆ 'ಕೆ ಜಿ ಎಫ್' ಸಿನಿಮಾ ಒಪ್ಪಿಕೊಂಡಿದ್ದು ನನ್ನ ಜೀವನದಲ್ಲಿ ತೆಗೆದುಕೊಂಡೆ ಉತ್ತಮ ನಿರ್ಧಾರ.'' - ಶ್ರೀನಿಧಿ ಶೆಟ್ಟಿ, ನಟಿ

ಈ ಜರ್ನಿಯಲ್ಲಿ ಕೆಲವು ವ್ಯಕ್ತಿಗಳು ನನ್ನ ಜೊತೆಗೆ ಇದ್ದಾರೆ
''ಈ ಸಿನಿಮಾದ ಜರ್ನಿಯಲ್ಲಿ ಕೆಲವು ವ್ಯಕ್ತಿಗಳು ನನ್ನ ಜೊತೆಗೆ ಇದ್ದಾರೆ. ಅವರು ಇಲ್ಲದಿದ್ದರೆ ಈ ಜರ್ನಿ ಪೂರ್ಣ ಆಗುತ್ತಿಲಿಲ್ಲ. 'ಕೆ ಜಿ ಎಫ್' ಚಿತ್ರಕ್ಕೆ ಸಪೋರ್ಟ್ ಮಾಡಿದ್ದ ಎಲ್ಲರಿಗೆ ಧನ್ಯವಾದ.'' ಎಂದು ಹೇಳಿರುವ ಶ್ರೀನಿಧಿ ಶೆಟ್ಟಿ ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲ್ಮ್ಸ್ ಗೆ ಕೃತಜ್ಞತೆ ತಿಳಿಸಿದ್ದಾರೆ.

ಮಿಸ್ ಸುಪ್ರನ್ಯಾಷನಲ್
ಮೂಲತಃ ಮಂಗಳೂರಿನ ಹುಡುಗಿಯಾಗಿರುವ ಶ್ರೀನಿಧಿ ಶೆಟ್ಟಿ ಪೊಲೆಂಡ್ ನಲ್ಲಿ ನಡೆದ ಮಿಸ್ ಸುಪ್ರನ್ಯಾಷನಲ್-2016ರ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗಿದ್ದರು. ಅದೇ ಸಮಯದ 'ಕೆ ಜಿ ಎಫ್' ಸಿನಿಮಾದ ಆಫರ್ ಅವರಿಗೆ ಸಿಕ್ಕಿತು. ಈ ಚಿತ್ರದ ಅವರ ಸಿನಿ ಜೀವನದ ಮೊದಲ ಸಿನಿಮಾ ಆಯ್ತು.

ಒಂದು ಹಾಡಿನಲ್ಲಿ ತಮನ್ನಾ
ನಟಿ ಶ್ರೀನಿಧಿ ಶೆಟ್ಟಿ ಸಿನಿಮಾದ ನಾಯಕಿ ಆಗಿದ್ದು, ಒಂದು ವಿಶೇಷ ಹಾಡಿನಲ್ಲಿ ತಮನ್ನಾ ಕಾಣಿಸಿಕೊಂಡಿದ್ದಾರೆ. 'ಜೋಕೆ ನಾನು ಬಳ್ಳಿಯ ಮಿಂಚು...' ಎಂದು ಹಾಡಿಗೆ ಕುಣಿದಿದ್ದಾರೆ. ಇದು ತಮನ್ನಾ ಅವರ ಎರಡನೇ ಕನ್ನಡ ಹಾಡಾಗಿದೆ.


Click it and Unblock the Notifications











