Srinidhi Shetty :'ಕೆಜಿಎಫ್ 1' ನಂತರ ಬೇರೆ ಸಿನಿಮಾ ಯಾಕೆ ಒಪ್ಪಿಕೊಳ್ಳುತ್ತಿಲ್ಲಾ? ಬೇರೆ ಕೆಲಸ ಇಲ್ವಾ ಎಂದಿದ್ರು ಜನ!

ಮಿಸ್ ಸುಪ್ರಾ ನ್ಯಾಷನಲ್ 2016 ಶ್ರೀನಿಧಿ ಶೆಟ್ಟಿ 'ಕೆಜಿಎಫ್' ಕ್ವೀನ್ ಆಗಿ ಗುರುತಿಸಿಕೊಂಡಿದ್ದಾರೆ. 'ಕೆಜಿಎಫ್' ಸಿನಿಮಾ ಮೂಲಕ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿರುವ ಶ್ರೀನಿಧಿ ಶೆಟ್ಟಿ ಸಿನಿಮಾ ಬಗ್ಗೆ ತನ್ನ ಅನಿಸಿಕೆಗಳ ಬಗ್ಗೆ ಮಾತನಾಡಿದ್ದಾರೆ.

ಎಲ್ಲರಿಗೂ ತಿಳಿದಿರುವ ಹಾಗೆ ಶ್ರೀನಿಧಿ ಈ ಸಿನಿಮಾಗಾಗಿ ಬರೋಬ್ಬರಿ ಆರು ವರ್ಷ ಬೇರೆ ಯಾವ ಸಿನಿಮಾವನ್ನು ಒಪ್ಪಿಕೊಳ್ಳದೆ ಅಭಿನಯಿಸಿದ್ದಾರೆ. ಈ ಬಗ್ಗೆ ಹಲವರು ಮೆಚ್ಚುಗೆ ಕೂಡ ಸೂಚಿಸಿದ್ದಾರೆ. ನಟಿಯರಿಗೆ ಇಂತಹ ಡೆಡಿಕೇಷನ್ ಇರಬೇಕು ಎನ್ನುತ್ತಿದ್ದಾರೆ.

ಆದರೆ ಈ ಬಗ್ಗೆ ಶ್ರೀನಿಧಿ ಇಲ್ಲಿವರೆಗೂ ಏನೂ ಮಾತನಾಡಿರಲಿಲ್ಲಾ. ಇದೀಗ ಬಾಲಿವುಡ್ ಖ್ಯಾತ ಮ್ಯಾಗಝೀನ್‌ಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ತಾನು ಅನುಭವಿಸಿದ ಸವಾಲಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

''ಚಿತ್ರದಲ್ಲಿ ಕೆಲವೇ ನಿಮಿಷಗಳು ಮಾತ್ರ ಕಾಣಿಸಿಕೊಳ್ಳುತ್ತೇನೆ''

''ಚಿತ್ರದಲ್ಲಿ ಕೆಲವೇ ನಿಮಿಷಗಳು ಮಾತ್ರ ಕಾಣಿಸಿಕೊಳ್ಳುತ್ತೇನೆ''

'ಕೆಜಿಎಫ್ ಭಾಗ 1' ಬಿಡುಗಡೆಯ ನಂತರ ಶ್ರೀನಿಧಿ ಶೆಟ್ಟಿ ಸಾಕಷ್ಟು ಮಾತುಗಳನ್ನು ಕೇಳಿದ್ದಾರಂತೆ. ಶ್ರೀನಿಧಿ ಹೇಳುವಂತೆ "2016 ರಲ್ಲಿ ನನ್ನೊಂದಿಗೆ ಇಂಡಸ್ಟ್ರಿಗೆ ಬಂದ ಅದೆಷ್ಟೊ ಮಂದಿ ಈಗ ತುಂಬ ಎತ್ರಕ್ಕೆ ಬೆಳೆದಿದ್ದಾರೆ ಮತ್ತು 10 ಚಲನಚಿತ್ರಗಳನ್ನು ಮಾಡಿದ್ದಾರೆ. ಇದು ನನ್ನ ಮೇಲೆ ಕೊಂಚ ಪರಿಣಾಮ ಬೀರುತ್ತಿದೆ" ಎಂದಿದ್ದಾರೆ. "ಚಿತ್ರದಲ್ಲಿ ನಾನು ಕೆಲವೇ ನಿಮಿಷಗಳು ಮಾತ್ರ ಕಾಣಿಸಿಕೊಳ್ಳುತ್ತೇನೆ ಅನ್ನೋದು ನನಗೆ ಗೊತ್ತಿತ್ತು. ಮತ್ತು 6 ವರ್ಷದಲ್ಲಿ ನಾವು ದೊಡ್ಡವರಾಗುತ್ತಾ ಹೋಗುತ್ತೇವೆ. ಸಮಯ ಓಡುತ್ತಾ ಇರುತ್ತೆ. ಈ ಸಮಯದಲ್ಲಿ ಕುಟುಂಬದವರು, ಸ್ನೇಹಿತರು, ಆಪ್ತರು, ನೀವು ಇನ್ನು ಯಾಕೆ ಇದೊಂದೆ ಸಿನಿಮಾದಲ್ಲಿ ನಟಿಸುತ್ತಿದ್ದೀರಿ? ಇದನ್ನು ಬಿಟ್ಟು ಬೇರೆ ಏನು ಯಾಕೆ ಮಾಡುತ್ತಿಲ್ಲ? ನಿಮಗೆ ಏನಾಗಿದೆ ಎಂದೆಲ್ಲ ನನ್ನನ್ನು ಪ್ರಶ್ನೆ ಮಾಡಿದ್ದಾರೆ" ಎಂದಿದ್ದಾರೆ.

Recommended Video

KGF ಮಾಡ್ಬೇಕಾದ್ರೆ ಇಂತಹ ಸಿನಿಮಾ ಯಾಕ್ರಿ ಒಪ್ಕೋತೀರಾ ಅಂದಿದ್ರು | Srinidhi Shetty
'ಕೆಜಿಎಫ್'ನ ಅಂತಿಮ ಫಲಿತಾಂಶ ಹೇಗಿರುತ್ತೆ?

'ಕೆಜಿಎಫ್'ನ ಅಂತಿಮ ಫಲಿತಾಂಶ ಹೇಗಿರುತ್ತೆ?

ಮಾತು ಮುಂದುವರೆಸಿ "ನಾನು ಸುಳ್ಳು ಹೇಳುವುದಿಲ್ಲ, ನನಗು ಕೊಂಚ ಆತಂಕ ಇದೆ ಈ ಬೆಳವಣಿಗೆ ಬಗ್ಗೆ. ಆದರೆ ನನಗೆ ಗೊತ್ತು 'ಕೆಜಿಎಫ್'ನ ಅಂತಿಮ ಫಲಿತಾಂಶ ಹೇಗಿರುತ್ತೆ ಹಾಗೇ ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಪ್ರಸಂಶೆ ಪಡೆಯಲಿದೆ ಎಂದು. ಇಡೀ ಸಿನಿಮಾವನ್ನು ಅದ್ಭುತವಾಗಿ ತಯಾರು ಮಾಡಲಾಗಿದೆ. ನಾನು ಕೆಜಿಎಫ್ ಸಿನಿಮಾ ಆರಂಭ ಆದಾಗಿನಿಂದಲೂ ತಂಡದ ಜೊತೆ ಇರೋದ್ರಿಂದ ಇದರ ಬಗ್ಗೆ ನನಗೆ ಗೊತ್ತು. ಹೀಗಾಗಿ ಆದಷ್ಟು ಆತ್ಮವಿಶ್ವಾಸದಿಂದ ಇರಲು ಪ್ರಯತ್ನಿಸುತ್ತೇನೆ" ಎಂದು ಶ್ರೀನಿಧಿ ಹೇಳಿದ್ದಾರೆ.

 2019 ರಲ್ಲಿ ನಟ ವಿಕ್ರಮ್ ಜೊತೆಗೆ 'ಕೋಬ್ರಾ'ಗೆ ಸಹಿ

2019 ರಲ್ಲಿ ನಟ ವಿಕ್ರಮ್ ಜೊತೆಗೆ 'ಕೋಬ್ರಾ'ಗೆ ಸಹಿ

'ಕೆಜಿಎಫ್ ಪಾರ್ಟ್ 2' ಬಿಡುಗಡೆಯಾಗುವವರೆಗೂ ಯಾವುದೇ ಚಿತ್ರಕ್ಕೆ ಶ್ರೀನಿಧಿ ಸಹಿ ಹಾಕುವಂತೆ ಇರಲಿಲ್ಲ. ಆದರೂ ಚಿತ್ರತಂಡದ ಅನುಮತಿ ಮೇರೆಗೆ 2019 ರಲ್ಲಿ ನಟ ವಿಕ್ರಮ್ ಜೊತೆಗೆ 'ಕೋಬ್ರಾ' ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದರು. ಈ ಬಗ್ಗೆಯೂ ಮಾತನಾಡಿರುವ ಶ್ರೀನಿಧಿ "ನಾನು ಕೆಜಿಎಫ್‌ಗೆ ಸಹಿ ಹಾಕಿದಾಗ, ಚಿತ್ರ ಬಿಡುಗೆಡೆ ನಂತರ ಹಲವು ಸಿನಿಮಾ ಮಾಡಬೇಕು ಅಂದುಕೊಂಡಿದ್ದೆ. ಆದರೇ ಆಗ 'ಕೆಜಿಎಫ್ ಪಾರ್ಟ್ 2' ಅನೌನ್ಸ್ ಆಯಿತು.'ಕೆಜಿಎಫ್ ಪಾರ್ಟ್ 2' ಕೂಡ 3-4 ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂದು ನನಗೆ ಗೊತ್ತಿತ್ತು. ಆಗ ನನಗೆ 'ಕೋಬ್ರಾ' ಸಿನಿಮಾದಿಂದ ಅವಕಾಶ ಬಂತು. ಒಳ್ಳೆಯ ಕಥೆ ಇದ್ದಿದ್ರಿಂದ ಬಿಡಲು ಮನಸ್ಸಾಗಲಿಲ್ಲಾ. ಹೀಗಾಗಿ ಸಹಿ ಹಾಕಿದ್ದೇನೆ. ಇದು ಪ್ರಜ್ಞಾಪೂರ್ವಕ ನಿರ್ಧಾರ ಅಷ್ಟೆ" ಎಂದಿದ್ದಾರೆ ಶ್ರೀನಿಧಿ.

ಮತ್ಯಾವ ಪ್ರಾಜೆಕ್ಟ್‌ಗು ಸಹಿ ಹಾಕಲು ಮನಸ್ಸು ಮಾಡಿಲ್ಲ

ಮತ್ಯಾವ ಪ್ರಾಜೆಕ್ಟ್‌ಗು ಸಹಿ ಹಾಕಲು ಮನಸ್ಸು ಮಾಡಿಲ್ಲ

ನಟಿಯರಿಗೆ ಇಂಡಸ್ಟ್ರಿಯಲ್ಲಿ ಅವರದ್ದೇ ಆದ ಅವಕಾಶಗಳು ಇರುತ್ತೆ. ಆದರೆ 'ಕೆಜಿಎಫ್' ಸಿನಿಮಾ ಮಾಡುತ್ತಿರೋದ್ರಿಂದ ಮತ್ಯಾವ ಪ್ರಾಜೆಕ್ಟ್‌ಗು ಸಹಿ ಹಾಕಲು ಮನಸ್ಸು ಮಾಡಿಲ್ಲ. ಆದರೆ 10 ವರ್ಷಗಳಲ್ಲಿ 5 ಚಿತ್ರಗಳನ್ನಾದರೂ ನಾನು ಮಾಡುವ ಪ್ಲಾನ್ ಇತ್ತು. ಆದರೆ ಕೆಜಿಎಫ್‌ನಂತ ಸಿನಿಮಾ ನನ್ನೆಲ್ಲ ತಯಾರಿಯನ್ನು ಬದಲಿಸಿದೆ. ಇದಕ್ಕೆ ನಾನು ಖುಷಿ ಪಡುತ್ತೇನೆ. ನಾನು ಎಷ್ಟೇ ಸಿನಿಮಾ ಮಾಡಿದರೂ ಮತ್ತೆ ನನಗೆ ಕೆಜಿಎಫ್‌ನಂತ ಸಿನಿಮಾ ಸಿಗಲು ಸಾಧ್ಯವಿಲ್ಲ. ಮಾಡಿದ ಮೊದಲ ಸಿನಿಮಾವೇ ಪ್ಯಾನ್ ಇಂಡಿಯಾ, ಅದರಲ್ಲೂ ಯಶ್ ಜೊತೆ ತೆರೆ ಹಂಚಿಕೊಂಡ ಖುಷಿ ಮತ್ತಷ್ಟು ಇದೆ. ಇಂತಹ ಅವಕಾಶ ಬೇರೆ ಯಾರಿಗೆ ಸಿಗುತ್ತೆ ಹೇಳಿ" ಎಂದು ಪ್ರಶ್ನೆ ಮಾಡಿದ್ದಾರೆ.

ಅವಕಾಶ ಸಿಗುತ್ತಾ ಇಲ್ವಾ ಅನ್ನೋದ್ರ ಬಗ್ಗೆ ನನಗೆ ಭಯ

ಅವಕಾಶ ಸಿಗುತ್ತಾ ಇಲ್ವಾ ಅನ್ನೋದ್ರ ಬಗ್ಗೆ ನನಗೆ ಭಯ

"ಆದರೆ ನನ್ನಲ್ಲಿ ಕಾಡುತ್ತಿರುವ ಭಯ ಒಂದೇ 6 ವರ್ಷಗಳಲ್ಲಿ ಕೇವಲ 2 ಚಿತ್ರಗಳನ್ನು ಮಾಡಿದ್ದೇನೆ ಅನ್ನೋದು ಕೂಡ ಕೌಂಟ್ ಆಗುತ್ತೆ. ಇದರಿಂದಾಗಿ ಮುಂದೆ ನನಗೆ ಅವಕಾಶ ಸಿಗುತ್ತಾ ಇಲ್ವಾ ಅನ್ನೋದ್ರ ಬಗ್ಗೆ ನನಗೆ ಭಯವಿದೆ. ಒಂದು ಮಾತ್ರ ಹೇಳಬಲ್ಲೆ. ನಾನು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಿದ್ದೇನೆ ಅನ್ನೋದು ನನಗೆ ಮುಂದೆ ಅವಕಾಶ ಕೊಡಿಸಬಹುದು, ಅಥವಾ ನಾನು 6 ವರ್ಷಗಳಲ್ಲಿ ಕೇವಲ 2 ಚಿತ್ರಗಳನ್ನು ಮಾಡಿದ್ದೇನೆ ಅನ್ನೋದಕ್ಕೆ ಅವಕಾಶವನ್ನು ಕಳೆದುಕೊಳ್ಳಬಹುದು ಇದು ಎರೆಡಕ್ಕೂ ನಾನು ತಯಾರಿಯಾಗಿರುತ್ತೇನೆ'' ಎಂದಿದ್ದಾರೆ.

More from Filmibeat

English summary
Miss Diva Supranational 2016, Srinidhi Shetty feels KGF was a risk worth taking. here is more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X