ಮೀ ಟೂ ವಿವಾದದ ಬಳಿಕ ಮತ್ತೆ ವಾಪಸ್ ಆದ ಶ್ರುತಿ ಹರಿಹರನ್

Recommended Video

ಮೀ ಟೂ ವಿವಾದದ ಬಳಿಕ ಮತ್ತೆ ಚಿತ್ರರಂಗಕ್ಕೆ ಮರಳಿದ ನಟಿ ಶ್ರುತಿ ಹರಿಹರನ್

ಮೀ ಟೂ ವಿವಾದದ ಬಳಿಕ ನಟಿ ಶ್ರುತಿ ಹರಿಹರನ್ ಈಗ ಏನ್ಮಾಡ್ತಿದ್ದಾರೆ ಎನ್ನುವುದು ಅನೇಕರ ಯೋಚನೆಯಾಗಿತ್ತು. ಉತ್ತಮ ಸಿನಿಮಾಗಳಲ್ಲಿ ಅಭಿನಯಿಸುತ್ತ, ಅಭಿಮಾನಿಗಳನ್ನು ರಂಜಿಸುತ್ತ, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿದ್ದ ಶ್ರುತಿ ವಿವಾದದ ಬಳಿಕ ದಿಢೀರನೆ ಮಾಯವಾಗಿದ್ದರು.

ಮೀ ಟೂ ರಂಪಾಟದ ನಂತರ ಸಿನಿಮಾ ಅವಕಾಶಗಳಿಲ್ಲದೆ ಮಾಯವಾಗಿದ್ದಾರೊ ಅಥವಾ ಕೊಂಚ ಬ್ರೇಕ್ ಪಡೆಯುವ ಉದ್ದೇಶದಿಂದ ಸಿನಿಮಾ ದಿಂದ ದೂರ ಇದ್ದಾರೊ ಎನ್ನುವುದನ್ನು ಗೊತ್ತಿಲ್ಲ. ಆದ್ರೆ ಮೊನ್ನೆ ಮೊನ್ನೆಯಷ್ಟೆ ಶ್ರುತಿ ಅವರು ಪತಿ ಜೊತೆ ವಿದೇಶದಲ್ಲಿ ಇದ್ದಾರೆ. ಶ್ರುತಿ ಗರ್ಭಿಣಿ ಆಗಿದ್ದಾರೆ ಎಂದೆಲ್ಲ ಸುದ್ದಿಗಳು ಹರಿದಾಡುತ್ತಿತ್ತು.

ಆದ್ರೀಗ ಶ್ರುತಿ ಹರಿಹರನ್ ಅದಕ್ಕೆಲ್ಲ ಉತ್ತರ ನೀಡಿದ್ದಾರೆ. ಹೇಗೆ ಅಂತೀರಾ ಶ್ರುತಿ ಮತ್ತೆ ಸ್ಯಾಂಡಲ್ ವುಡ್ ಗೆ ಪಾವಸ್ ಆಗಿದ್ದಾರೆ. ಹೊಸ ಸಿನಿಮಾದಲ್ಲಿ ಹರಿಹರನ್ ಅಭಿನಯಿಸುತ್ತಿದ್ದಾರೆ. 'ನಾತಿಚರಾಮಿ' ಚಿತ್ರದ ಬಳಿಕ ಶ್ರುತಿ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಯಾವ ಸಿನಿಮಾ? ನಾಯಕ ಯಾರು?ಮುಂದೆ ಓದಿ..

ಮಂಜು ಸ್ವರಾಜ್ ಚಿತ್ರದಲ್ಲಿ ಶ್ರುತಿ

ಮಂಜು ಸ್ವರಾಜ್ ಚಿತ್ರದಲ್ಲಿ ಶ್ರುತಿ

ನಿರ್ದೇಶಕ ಮಂಜು ಸ್ವರಾಜ್ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ 'ಮನೆ ಮಾರಟಕ್ಕಿದೆ' ಎಂದು ಟೈಟಲ್ ಕೂಡ ಇಟ್ಟಿದ್ದಾರೆ. ವಿಭಿನ್ನವಾದ ಟೈಟಲ್ ಮೂಲಕವೆ ಸ್ಯಾಂಡಲ್ ವುಡ್ ನಲ್ಲಿ ಗಮನ ಸೆಳೆಯುತ್ತಿರುವ ಈ ಚಿತ್ರದಲ್ಲಿ ಶ್ರುತಿ ಹರಿಹರನ್ ನಾಯಕಿಯಾಗಿ ಮಿಂಚಲಿದ್ದಾರೆ. ಈ ಬಗ್ಗೆ ಚಿತ್ರತಂಡವೆ ಹೇಳಿದೆ.

ಪಾತ್ರದ ಬಗ್ಗೆ ಬಿಟ್ಟುಕೊಡದ ನಿರ್ದೇಶಕ

ಪಾತ್ರದ ಬಗ್ಗೆ ಬಿಟ್ಟುಕೊಡದ ನಿರ್ದೇಶಕ

ಸದ್ಯ 'ಮನೆ ಮಾರಾಟಕ್ಕಿದೆ' ಚಿತ್ರದಲ್ಲಿ ಶ್ರುತಿ ಹರಿಹರನ್ ಅಭಿನಯಿಸುತ್ತಾರೆ ಎನ್ನುವ ಮಾಹಿತಿಯನ್ನು ಮಾತ್ರ ಬಹಿರಂಗ ಪಡಿಸಿರುವ ಚಿತ್ರತಂಡ, ಯಾವ ಪಾತ್ರ, ಹೇಗಿರಲಿದೆ, ಶ್ರುತಿ ಅವರ ಗೆಟಪ್ ಹೇಗಿರಲಿದೆ ಎನ್ನುವುದನ್ನ ಮಾತ್ರ ರಿವೀಲ್ ಮಾಡಲಿಲ್ಲ. ವರ್ಷದ ಬಳಿಕ ಬಣ್ಣ ಹಚ್ಚುತ್ತಿರುವ ಶ್ರುತಿ ಅವರನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಚಿತ್ರದಲ್ಲಿ ನಾಲ್ವರು ಹಾಸ್ಯ ಕಲಾವಿದರು

ಚಿತ್ರದಲ್ಲಿ ನಾಲ್ವರು ಹಾಸ್ಯ ಕಲಾವಿದರು

'ಮನೆ ಮಾರಾಟಕ್ಕಿದೆ' ಚಿತ್ರದಲ್ಲಿ ನಾಲ್ವರು ಹಾಸ್ಯ ಕಲಾವಿದರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಸಧು ಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್ ಹಾಗೂ ರವಿ ಶಂಕರ್ ಈ ನಾಲ್ವರು ಕಾಮಿಡಿ ಸ್ಟಾರ್ಸ್ ಅಭಿನಯಿಸುತ್ತಿದ್ದಾರೆ. ನಾಲ್ಕು ಜನ ಹಾಸ್ಯ ಕಲಾವಿದರಿದ್ದಾರೆ ಅಂದ್ಮೇಲೆ ಇದೊಂದು ಪಕ್ಕ ಕಾಮಿಡಿ ಸಿನಿಮಾ ಎನ್ನುವುದರಲ್ಲಿ ಅನುಮಾನವೆ ಇಲ್ಲ. ಜೊತೆ ದೆವ್ವಗಳಿವೆ ಎನ್ನುವ ಟ್ಯಾಗ್ ಲೈನ್ ಕೂಡ ಇದೆ. ಹಾಗಾಗಿ ಕಾಮಿಡಿ ಹಾರರ್ ಸಿನಿಮಾ ಇದ್ದರು ಇರಬಹುದು.

'ನಾತಿಚರಾಮಿ' ಚಿತ್ರದ ನಂತರ ಶ್ರುತಿ ಸಿನಿಮಾ

'ನಾತಿಚರಾಮಿ' ಚಿತ್ರದ ನಂತರ ಶ್ರುತಿ ಸಿನಿಮಾ

'ನಾತಿಚರಾಮಿ' ಚಿತ್ರದ ನಂತರ ಶ್ರುತಿ ಹರಿಹರನ್ ಒಪ್ಪಿಕೊಂಡಿರುವ ಸಿನಿಮಾ ಇದು. ಅಲ್ಲದೆ 'ಟೆಸ್ಲ' ಎನ್ನುವ ವಿಭಿನ್ನ ಚಿತ್ರದಲ್ಲೂ ಶ್ರುತಿ ಅಭಿನಯಿಸುತ್ತಿದ್ದರು. ಈ ಚಿತ್ರದಲ್ಲಿ ಹೊಸ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದ ಶ್ರುತಿ ಅವರ ಫೋಟೋ ಶೂಟ್ ಸಖತ್ ವೈರಲ್ ಆಗಿತ್ತು. ಆದ್ರೆ ಆ ಸಿನಿಮಾದ ಸದ್ಯದ ಅಪ್ ಡೇಟ್ ಲಭ್ಯವಾಗಿಲ್ಲ. ಆದ್ರೀಗ 'ಮನೆ ಮಾರಾಟಕ್ಕಿದೆ' ಎಂದು ಸಾಧು ಕೋಕಿಲ ಮತ್ತು ಚಿಕ್ಕಣ್ಣ ಜೊತೆ ಬರ್ತಿದ್ದಾರೆ ಶ್ರುತಿ.

ಶ್ರುತಿ ಜೊತೆ ಇದ್ದಾರೆ ಮತ್ತೋರ್ವ ನಾಯಕಿ

ಶ್ರುತಿ ಜೊತೆ ಇದ್ದಾರೆ ಮತ್ತೋರ್ವ ನಾಯಕಿ

ಶ್ರುತಿ ಹರಿಹರನ್ ಜೊತೆ ಮತ್ತೋರ್ವ ನಾಯಕಿ ಕಾರುಣ್ಯ ರಾಮ್ ಕೂಡ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರು. ಆದ್ರೆ ಯಾರ ಪಾತ್ರ ಹೇಗಿರಲಿದೆ ಎನ್ನುವ ಮಾಹಿತಿಯನ್ನು ಇನ್ನು ಚಿತ್ರತಂಡ ರಿವೀಲ್ ಮಾಡಲಿಲ್ಲ. ಆದ್ರೆ ಮತ್ತೆ ಶ್ರುತಿ ಹರಿಹರನ್ ಮತ್ತೆ ಬಣ್ಣ ಹಚ್ಚುತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.

More from Filmibeat

English summary
Kannada actress sruthi hariharan back to film after her controversy. She is playing lead opposite Sadhu kokila and chikkanna starrer Mane Matki.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X